-->
Bookmark

Gajendragad : ಒಂದೇ ಒಂದು ಆರೋಪ ಬಂದರೂ ಎಫ್‌ಐಆರ್ – ತಹಶೀಲ್ದಾರ್ ರಜನಿಕಾಂತ್ ಕೆಂಗೇರಿ

Gajendragad : 

ಒಂದೇ ಒಂದು ಆರೋಪ ಬಂದರೂ ಎಫ್‌ಐಆರ್ – ತಹಶೀಲ್ದಾರ್ ರಜನಿಕಾಂತ್ ಕೆಂಗೇರಿ 
ಬಿ.ಎಸ್.ಎನ್.ಎಲ್‌ ಆಫೀಸ್‌ ನಲ್ಲಿ ಆಧಾರ್ ಕಾರ್ಡ್ ಮಾಡುವವರ ಮೇಲೆ ಬಹಳ ಆರೋಪಗಳು ಕೇಳಿ ಬಂದಿವೆ. ಈಗ ಮತ್ತೊಂದು ಆರೋಪ ಬಂದರೇ, ಅವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಗಜೇಂದ್ರಗಡ ತಹಶೀಲ್ದಾರ್ ರಜನಿಕಾಂತ್ ಕೆಂಗೇರಿ ಹೇಳಿದರು. ಸೋಮವಾರ ರಾತ್ರಿ ಸುಮಾರು 10.30ರ ವರೆಗೂ ಆಧಾರ್ ಕಾರ್ಡ್ ಮಾಡಲಾಗುತ್ತಿದೆ ಎಂದು ಕಿರಾ ನ್ಯೂಸ್‌ನಲ್ಲಿ ಸುದ್ದಿ ಪ್ರಸಾರವಾಗಿತ್ತು. ಸುದ್ದಿ ಮಾಡುವ ಮೊದಲು ತಹಶೀಲ್ದಾರ್ ರಜನಿಕಾಂತ್ ಕೆಂಗೇರಿ ಅವರ ಗಮನಕ್ಕೆ ತರಲಾಗಿತ್ತು. 
ಇದಾದ ಬಳಿಕ ಮಂಗಳವಾರ ತಹಶೀಲ್ದಾರ್ ರಜನಿಕಾಂತ್ ಕೆಂಗೇರಿ ಅವರು, ಬಿ.ಎಸ್.ಎನ್.ಎಲ್ ಕಚೇರಿಯ ಆಧಾರ್ ಕಾರ್ಡ್ ಮಾಡುವ ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ, ಅಲ್ಲಿ ಬಹಳ ಜನ ಜಮಾಯಿಸಿದ್ದರು. ತಹಶೀಲ್ದಾರ್ ರಜನಿಕಾಂತ್ ಕೆಂಗೇರಿ ಅವರು ಆಗಮಿಸಿದರೂ, ಅವರಿಗೆ ಗೌರವ ನೀಡಲಿಲ್ಲ. ತಹಶೀಲ್ದಾರ್ ರಜನಿಕಾಂತ್ ಕೆಂಗೇರಿ ಅವರು ಬಂದರೂ, ಕುಳಿತಲ್ಲಿಂದಲೇ ಉತ್ತರ ಕೊಡುತ್ತಿದ್ದ. ಇನ್ನೂ, ತಹಶೀಲ್ದಾರ್ ರಜನಿಕಾಂತ್ ಕೆಂಗೇರಿ ಅವರು, ಪರಿಶೀಲನೆ ನಡೆಸಿದರು. ನಿಮ್ಮ ಮೇಲೆ ಆರೋಪಗಳು ಬಂದಿವೆ. ಕಡಿಮೆ ಫೀಸ್ ತೆಗೆದುಕೊಳ್ಳಿ, ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ. ಸಾರ್ವಜನಿಕರಿಂದ ಇನ್ನೊಂದು ಆರೋಪ ಬಂದರೂ, ನಿಮ್ಮ ಮೇಲೆ ಎಫ್‌ಐಆರ್ ದಾಖಲಿಸಲಾಗುವುದು ಎಂದು ಹೇಳಿದರು. 

ಅಲ್ಲದೇ, ಸಿಎ ಪರೀಕ್ಷೆ ಬರೆದು ಬಂದಿರುವುದಾಗಿ ಹೇಳಿದ್ದರು. ಇದಕ್ಕೆ ಪೂರಕ ದಾಖಲೆಯನ್ನ ಸಲ್ಲಿಸಬೇಕೆಂದು ತಾಕೀತು ಮಾಡಿದರು. ಕಿರಾ ನ್ಯೂಸ್ ನೊಂದಿಗೆ ಮಾತನಾಡಿದ ತಹಶೀಲ್ದಾರ್ ರಜನಿಕಾಂತ್ ಕೆಂಗೇರಿ ಅವರು, ಇವರ ಮೇಲೆ ಹಲವು ಆರೋಪಗಳು ಬಂದಿವೆ. ಇದು ಕೊನೆಯ ಎಚ್ಚರಿಕೆ, ಮತ್ತೊಂದು ಆರೋಪ ಬಂದರೂ, ಅವರ ಮೇಲೆ ಎಫ್‌ಐಆರ್ ದಾಖಲಿಸಿ, ಅವರ ಪರಿಕರಗಳನ್ನ ವಶಪಡಿಸಿಕೊಳ್ಳಲಾಗುತ್ತದೆ ಎಂದು ಕಿರಾ ನ್ಯೂಸ್‌ಗೆ ತಿಳಿಸಿದರು.
Post a Comment

Post a Comment