-->
Bookmark

Gajendragad : ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಖಾಯಂ ಬೋಧಕರ ನೇಮಕ ಮಾಡಿ : ಕಳಕಪ್ಪ ಪೋತಾ ಮನವಿ

Gajendragad : 
ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಖಾಯಂ ಬೋಧಕರ ನೇಮಕ ಮಾಡಿ :  ಕಳಕಪ್ಪ ಪೋತಾ ಮನವಿ
ಗಜೇಂದ್ರಗಡ : 

ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 
ಕಳೆದ ೧೦ ವರ್ಷದಿಂದ ಖಾಯಂ ಬೊಧಕರಿಲ್ಲ.  ಇದನ್ನರಿತ ಜಯ ಕರ್ನಾಟ ಸಂಘಟನೆ ಉನ್ನತ ಶಿಕ್ಷಣ ಸಚಿವರಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದ್ದಾರೆ. ೨೦೧೨ರಲ್ಲಿ ಆರಂಭವಾದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇದೇ ಪರಿಸ್ಥಿತಿ ಇದೆ. ಈಗಿರುವ ಸಿಬ್ಬಂದಿಗಳನ್ನ ಬೇರೆಡೆ ಸ್ಥಳಾಂತರಿಸದಂತೆಯೂ ಮನವಿ ಮಾಡಿದ್ದಾರೆ ತಾಲೂಕಾಧ್ಯಕ್ಷ ಕಳಕಪ್ಪ ಪೊತಾ. ಗಜೇಂದ್ರಗಡ ತಹಶೀಲ್ದಾರ್ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ. ಮನವಿ ಸಲ್ಲಿಸಿ, ಮಾತನಾಡಿದ ಅವರು, ಗಜೇಂದ್ರಗಡದಲ್ಲಿ ಶಿಕ್ಷಣ ಕ್ರಾಂತಿ ಆಗುತ್ತಿದೆ. ಆದರೆ, ಪಾಲಿಟೆಕ್ನಿಕ್ ಕಾಲೇಜ್ ಇದಕ್ಕೆ ಅಪವಾದ ಎಂಬಂತಾಗಿದೆ. ಮಕ್ಕಳ ಭವಿಷ್ಯದೊಂದಿಗೆ ಶಿಕ್ಷಣ ಇಲಾಖೆ ಆಟವಾಡುತ್ತಿದೆ. ಶೀಘ್ರದಲ್ಲೇ ಖಾಯಂ ಬೋಧಕರನ್ನ ನೇಮಕಸಿಕೊಳ್ಳಬೇಕು. ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ನೇಮಕಾತಿ ನಡೆಯಬೇಕು. ಬೇಡಿಕೆ ಈಡೇರಿಸದಿದ್ದರೇ, ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಆಡಳಿತ ವರ್ಗಕ್ಕೆ ಎಚ್ಚರಿಗೆ ನೀಡಿದ್ದಾರೆ. 
ಗಜೇಂದ್ರಗಡ ಸೇರಿದಂರೆ ಇತರೆಡೆಯಿಂದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಬರುತ್ತಾರೆ. ಆದ್ರೆ, ಅವರಿಗೆ ಬೋಧನೆ ಮಾಡುವ ಬೊಧಕರ ಕೊರತೆ ಇದೆ. ಅದನ್ನ ಸರ್ಕಾರ ನೀಗಿಸಬೇಕಿದೆ. 
ತಾಲೂಕಾಧ್ಯಕ್ಷ ಕಳಕಪ್ಪ ಪೋತಾ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಗೌಸ್ ಅಕ್ಕಿ, ಸಂಚಾಲಕ ಉಮೇಶ್ ಕಲಂ ಶೆಟ್ಟಿ, ಸದಸ್ಯರಾದ ರಾಘವೇಂದ್ರ ಹೂಗಾರ್, ಅಲ್ತಾಫ್ ಹೊಸಮನಿ, ಬಸವರಾಜ್ ಪೂಜಾರ್, ಕರಿಯಪ್ಪ ಮಾದರ್, ಅಲ್ತಾಫ್ ಕರಮುಡಿ, ಬಬ್ಲೂ ಮನಿಯಾರ್, ರಮೇಶ್ ವ್ಯಾಪಾರಿ, ಅಂಬಾಸಾ ರಂಗ್ರೇಜ್, ಖಾಸಿಂಸಾಬ್ ಮುಚ್ಚಾಲಿ, ಪ್ರಕಾಶ್ ಮೇದಾಳ್, ವಾಸಿಂ ಬಂಗಾರಗುಂಡಿ, ರಾಜು ಒಡ್ಡಟ್ಟಿ ಹಾಜರಿದ್ದರು.
Post a Comment

Post a Comment