-->
Bookmark

Gajendragad : ಗಜೇಂದ್ರಗಡ ಸರ್ವ ಧರ್ಮದ ಪ್ರತೀಕ – ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ

Gajendragad : 
ಗಜೇಂದ್ರಗಡ ಸರ್ವ ಧರ್ಮದ ಪ್ರತೀಕ – ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ 
ಗಜೇಂದ್ರಗಡ : ( sept 12 2023 ) 
ಗದಗ ಜಿಲ್ಲೆಯ ಗಜೇಂದ್ರಗಡ ಸರ್ವ ಧರ್ಮದ ಪ್ರತೀಕವಾಗಿದೆ ಎಂದು ಗಜೇಂದ್ರಗಡ-ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಹೇಳಿದರು. ನವನಗರದ ಬನ್ನಿ ಮಹಾಕಾಳಿ ದೇವಸ್ಥಾನದ ಪೂಜಾಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ವಧರ್ಮದ ಬೀಡು ಗಜೇಂದ್ರಗಡ ಎಂದರೆ ತಪ್ಪಾಗಲ್ಲ. ಎಲ್ಲ ಧರ್ಮದವರೂ ಸಹಬಾಳ್ವೆ ನಡೆಸುತ್ತಾರೆ ಎಂದು ಹೇಳುತ್ತ, ಶ್ರಾವಣ ಮಾಸದಲ್ಲಿ ಪೂಜಾ ಕೈಂಕರ್ಯ ನಡೆಯುತ್ತಿರುವುದು ಸಂತಸ ತಂದಿದೆ. ಸಂಸ್ಕೃತಿ ಪರಂಪರೆ ಉಳಿಸಿ, ಬೆಳೆಸುವುದು ನಮ್ಮ ಧರ್ಮ ಎಂದು ಸಿದ್ದಪ್ಪ ಬಂಡಿ ತಮ್ಮ ಮನದಾಳ ಹಂಚಿಕೊಂಡರು. 
ಇದೇ ವೇಳೆ, ಮಾತನಾಡಿದ ಅಬ್ದುಲ್ ಕಲಾಂ ಟ್ರಸ್ಟ್ ಕಮಿಟಿ ಅಧ್ಯಕ್ಷ ರಫೀಕ್ ತೋರಗಲ್, ನವನಗರ ಸರ್ವಧರ್ಮಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಎಲ್ಲ ಸಮುದಾಯದವರೂ ನೆಲೆಸಿದ್ದಾರೆ. ವಿಶೇಷವಾಗಿ ಹಿಂದು ಬಾಂಧವರು ನಮ್ಮ ಸಹೋದರ-ಸಹೋದರಿಯರಿದ್ದಂತೆ ಎಂದು ಹೇಳಿದರು. 
ನವನಗರದ ಶ್ರೀ ಬನ್ನಿ ಕಾಳಿಕಾದೇವಿ ಜಿರ್ಣೋದ್ದಾರ ಕಮಿಟಿ ಅಧ್ಯಕ್ಷರು, ಉಪಾಧ್ಯಕ್ಷಕರು ಕಮಿಟಿ ಸದಸ್ಯರು ಸೇರಿದಂತೆ ಕಳಕಪ್ಪ ಪೋತಾ, ಮುಸ್ತಾಕ್ ಅಹಮ್ಮದ್ ಅಕ್ಕಿ, ಅಂಬಾಸಾ ರಂಗ್ರೇಜ್, ಇರ್ಫಾನ್ ಮನಿಯಾರ್, ರಾಜು ರುದ್ರಗಂಟಿ, ಮಲ್ಲಣ್ಣ ಜುಚನಿ, ಪ್ರಭುಲಿಂಗನಗೌಡ ಸಿನ್ನೂರ್, ರಮೇಶ್ ವ್ಯಾಪಾರಿ, ರೋಣಪ್ಪ ಹಲಗಿ, ಅಲ್ತಾಫ್ ಹೊಸಮನಿ ನವನಗರ ನಿವಾಸಿಗಳು ಭಾಗವಹಿಸಿದ್ದರು. ರಫೀಕ್ ತೋರಗಲ್ ಪ್ರಸಾದ ಸೇವೆ ಮಾಡಿಸಿದ್ದರು.

Post a Comment

Post a Comment