-->
Bookmark

Gajendragad : ಬುಧವಾರ ಗಜೇಂದ್ರಗಡದಲ್ಲಿ ವಿವಿಧ ಕಾರ್ಯಕ್ರಮ - ಶಾಸಕ ಜಿ.ಎಸ್. ಪಾಟೀಲ್ ಭಾಗಿ

Gajendragad : ಬುಧವಾರ ಗಜೇಂದ್ರಗಡದಲ್ಲಿ ವಿವಿಧ ಕಾರ್ಯಕ್ರಮ - ಶಾಸಕ ಜಿ.ಎಸ್. ಪಾಟೀಲ್ ಭಾಗಿ 

ಗಜೇಂದ್ರಗಡ : ( Sept 26_09_2023 ) 
ಶಾಸಕ ಜಿ.ಎಸ್ ಪಾಟೀಲ್ ಅವರು, ಬುಧವಾರ ಸೆಪ್ಟೆಂಬರ್ ೨೬ ರಂದು ಬೆಳಗ್ಗೆ ೧೦ ಗಂಟೆಗೆ ರೋಣದಲ್ಲಿ ಅಂಚೆ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಕೊಡಗಾನೂರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಭೂಮಿ ಪೂಜೆ ನಡೆಸಲಿದ್ದು, ೧೨ ಗಂಟೆಗೆ ಅಂಜುಮನ್ ಇಸ್ಲಾಂ ಕಮಿಟಿವತಿಯಿಂದ ಶ್ರೀ ಸಲೀಂ ಅಹ್ಮದ ಮತ್ತು ಶಾಸಕ ಜಿಎಸ್ ಪಾಟೀಲ್ ಅವರಿಗೆ ಸನ್ಮಾನ ಸಮಾರಂಭ ಜರುಗಲಿದೆ. ಸಂಜೆ ೪ ಗಂಟೆಗೆ ಗವಳಿ ಗಲ್ಲಿಯಲ್ಲಿ ಮಾರುತಿ ಯುವಕ ಮಂಡಳ ಹಾಗೂ ಕಾರ್ಯಕರ್ತರಿಂದ ಸನ್ಮಾನ ಸಮಾರಂಭ ನಡೆಯಲಿದೆ. ಸಂಜೆ ೬ ಗಂಟೆಗೆ ಬಂಜಾರ ಸಮುದಾಯದ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೆಲ್ಲ ಕಾರ್ಯಕ್ರಮದಲ್ಲಿ ಶಾಸಕ ಜಿ.ಎಸ್ ಪಾಟೀಲ್ ಅವರು ಭಾಗವಹಿಸಲಿದ್ದು, ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಬುಧವಾರ  ಹೆಚ್ಚಿನ ಸಮಯವನ್ನ ಗಜೇಂದ್ರಗಡದಲ್ಲೇ ಕಳೆಯಲಿದ್ದಾರೆ. 
Post a Comment

Post a Comment