-->
Bookmark

Gajendragad : ಕ್ರೀಡೆಯಲ್ಲಿ ವಿದ್ಯಾರ್ಥಿಗಳ ಸಾಧನೆ ಶ್ಲಾಘನೀಯ

Gajendragad : ಕ್ರೀಡೆಯಲ್ಲಿ ವಿದ್ಯಾರ್ಥಿಗಳ ಸಾಧನೆ ಶ್ಲಾಘನೀಯ

ಪ್ರತಿ ವಿದ್ಯಾರ್ಥಿಯ ಸಾಧನೆ – ಗುರುಗಳ ಸಾಧನೆಯಾಗಿದೆ

ವಿವಿಧ ಕ್ರೀಡೆಯಲ್ಲಿ ರಾಜ್ಯಮಟ್ಟಕೆ ಆಯ್ಕೆಯಾದ ವಿದ್ಯಾರ್ಥಿಗಳು

ಗಜೇಂದ್ರಗಡ: ( Oct_01_2023)

ವಿದ್ಯಾರ್ಥಿಗಳು ಕ್ರೀಡೆ, ಕಲಿಕೆ ಹಾಗೂ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದರೂ ಸಹ ಅದು ಗುರುಗಳ ಸಾಧನೆಯಾಗಿದೆ. ಪ್ರತಿ ವಿದ್ಯಾರ್ಥಿಯ ಸಾಧನೆಯ ಹಿಂದೆ ಗುರುಗಳ ಶ್ರಮವಿದೆ ಎಂದು ಐಟಿಐ ಪ್ರಾಚಾರ್ಯ ಎ. ಪಿ. ಗಾಣಗೇರ
ಗಜೇಂದ್ರಗಡ ನಗರದ ಪುರ್ತಗೇರಿ ಕ್ರಾಸ್‌ ಬಳಿ ಇರುವ ಶ್ರೀ ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ಭಾನುವಾರ ನಡೆದ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಒಂದು ಸಾಧನೆ ನೂರಾರು ವಿದ್ಯಾರ್ಥಿಗಳು ಸಾಧನೆ ಮಾಡಲು ಸ್ಪೂರ್ತಿಯಾಗುತ್ತದೆ. ಅದಕ್ಕೆ ಸರಿಯಾದ ಮಾರ್ಗವನ್ನು ತೋರಿಸುವ ಗುರುಗಳ ಅವಶ್ಯಕತೆ ಇರುತ್ತದೆ. ನಮ್ಮ ಕಾಲೇಜಿನ ಎಲ್ಲಾ ಸಿಬ್ಬಂದಿಗಳು ವಿದ್ಯಾರ್ಥಿಗಳ ಏಳಿಗೆಗಾಗಿ, ಅವರ ಸಾಧನೆಗಾಗಿ ಶ್ರಮವಹಿಸುತ್ತಿರುವ ಕಾರಣ ರಾಜ್ಯಮಟ್ಟದಲ್ಲೂ ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ಹಾಗಾಗಿ ತರಬೇತಿ ಹಾಗೂ ಸಹಕಾರ ನೀಡಿದ ಎಲ್ಲಾ ಸಿಬ್ಬಂದಿಗಳಿಗೆ ಅಭಿನಂದಿಸಲಾಗುವುದು ಎಂದರು.
ಪಿಯು ಪ್ರಾಚಾರ್ಯ ವಸಂತರಾವ್‌ ಆರ್.‌ ಗಾರಗಿ   ಮಾತನಾಡಿ, ದಶಮಾನೋತ್ಸವ ಸಂಭ್ರಮದಲ್ಲಿರುವ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಪ್ರತಿವರ್ಷ ಎಲ್ಲಾ ವಿಭಾಗದಲ್ಲೂ ಹೆಮ್ಮೆ ಪಡುವಂತೆ ಸಾಧನೆ ಮಾಡುತ್ತಿದ್ದಾರೆ. ಕಾಲೇಜಿನ ಪ್ರಗತಿ, ವಿದ್ಯಾರ್ಥಿಗಳ ಸಾಧನೆಯ ಗ್ರಾಫ್‌ ಏರಿಕೆ ಕ್ರಮದಲ್ಲಿ ಸಾಗುತ್ತಿರುವುದಕ್ಕೆ ಆಡಳಿತ ಮಂಡಳಿಯ ಸಹಕಾರ ಹಾಗೂ ಸಿಬ್ಬಂದಿಗಳ ಪರಿಶ್ರಮವೇ ಕಾರಣವಾಗಿದೆ ಎಂದರು.
10 ವರ್ಷ ಪೂರೈಸಿದ ನಮ್ಮ ಸಂಸ್ಥೆಯಲ್ಲಿ ಕಲಿತು ವಿವಿಧ ಕ್ಷೇತ್ರದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ವಿದ್ಯಾರ್ಥಿಗಳನ್ನು, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಇತರೆ ಕ್ಷೇತ್ರದಲ್ಲಿ ಗುರುತಿಸಿಕೊಂಡು ಸಾಧನೆ ಮಾಡಿದ ಪ್ರತಿಯೊಬ್ಬರನ್ನು ಆಹ್ವಾನಿಸಿ ಈಗಿನ ಮಕ್ಕಳಿಗೆ ಸ್ಪೂರ್ತಿ ತುಂಬುವ ಕಾರ್ಯವನ್ನು ಮಾಡಲಾಗುವುದು ಎಂದರು. 
ಕುಸ್ತಿ  55ಕೆಜಿ ಗ್ರೀಕೋ ರೋಮನ್ ವಿಭಾಗದಲ್ಲಿ ನಾಗರಾಜ ರಾಠೋಡ ಪ್ರಥಮ, 57ಕೆಜಿ ಫ್ರೀ ಸ್ಟೈಲ್ ವಿಭಾಗದಲ್ಲಿ ಯುವರಾಜ್ ಪೂಜಾರ ಪ್ರಥಮ, 55‌ ಕೆಜಿ ವಿಭಾಗದಲ್ಲಿ ಸಲ್ಮಾ ನದಾಫ್‌ ಪ್ರಥಮ, 57 ಕೆಜಿ ವಿಭಾಗದಲ್ಲಿ ಭಾಗ್ಯಶ್ರೀ ಬಡಿಗೇರ ದ್ವೀತಿಯ, 55ಕೆಜಿ ಫ್ರೀ ಸ್ಟೈಲ್ ವಿಭಾಗದಲ್ಲಿ ಸಚಿನ ಹರಿಜನ ತೃತಿಯ ಸ್ಥಾನ ಪಡೆದಿದ್ದಾರೆ. ನಾಗರಾಜ ರಾಠೋಡ ಈಜು ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ. ಅಷ್ಟೇ ಅಲ್ಲದೆ ಕಾಲೇಜಿನ ವಿದ್ಯಾರ್ಥಿನಿಯರು ಗುಂಪು ಆಟ ಹ್ಯಾಂಡ್‌ ಬಾಲ್‌ ಸ್ಪರ್ಧೆಯಲ್ಲಿ‌ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 
ಈ ಸಂದರ್ಭದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮೆಡಲ್‌, ಶೀಲ್ಡ್‌, ಅಭಿನಂದನಾ ಪತ್ರ ವಿತರಣೆ ಮಾಡಿ ಅಭಿನಂದಿಸಲಾಯಿತು. ಆಗಸ್ಟ್‌ ತಿಂಗಳ ಸಿಇಟಿ/ನೀಟ್/ಎಂಸಿಕ್ಯೂ ಮಾದರಿ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಹ ಅಭಿನಂದಿಸಲಾಯಿತು.
ಈ ವೇಳೆ ದೈಹಿಕ ಶಿಕ್ಷಣದ ನಿರ್ದೇಶಕರಾದ ರವಿ ಹಲಗಿ, ಕ್ರೀಡಾ ತಂಡದ ವ್ಯವಸ್ಥಾಪಕಿ ಸಂಗೀತಾ ಐ. ನಾಲತವಾಡ, ಸಿಬ್ಬಂದಿಗಳಾದ ಗೋಪಾಲ ಟಿ. ರಾಯಬಾಗಿ, ಸಂಗಮೇಶ ಪಿ. ವಸ್ತ್ರದ, ಪ್ರತಿಭಾ ಲಕ್ಷಕೊಪ್ಪದ, , ವಿಜಯಲಕ್ಷ್ಮೀ ಅರಳಿಕಟ್ಟಿ, ರವಿ ಹಲಗಿ, ಪ್ರೀತಿ ಹೊಂಬಳ, ಎ. ಡಿ. ಜಾತಗೇರ, ಎಂ. ಎನ್.‌ ಕೊಳ್ಳಿ, ಬಸವರಾಜ ಎಸ್.‌ ಸಂಕದಾಳ, ಪ್ರಶಾಂತ ಗಾಳಪೂಜಿಮಠ, ಪ್ರಮೋದ ಅಬ್ಬಿಗೇರಿ, ಮನೋಜ ವೈ. ಕಲಾಲ, ಶಿವಾನಂದ ಹಳ್ಳದ, ದೇವರಾಜ ಶೆಟ್ಟರ ಇದ್ದರು.

Post a Comment

Post a Comment