-->
Bookmark

Kustagi : ಸಾಲ ವಸೂಲಾತಿಯಲ್ಲಿ ಕುಷ್ಟಗಿ ಬ್ಯಾಂಕ್‌ ಗೆ 2ನೇ ಸ್ಥಾನ

Kustagi : ಸಾಲ ವಸೂಲಾತಿಯಲ್ಲಿ ಕುಷ್ಟಗಿ ಬ್ಯಾಂಕ್‌ ಗೆ 2ನೇ ಸ್ಥಾನ
ಪಿಎಲ್‌ಡಿ ಬ್ಯಾಂಕ್‌ ಮ್ಯಾನೇಜರ್‌ ಚಂದ್ರಪ್ಪನಿಗೆ ಸನ್ಮಾನ

ಕುಷ್ಟಗಿ: (Sept 29_09_2023)

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ) ಪ್ರಸಕ್ತ ಸಾಲಿನಲ್ಲಿ ಸಾಲ ವಸೂಲಾತಿಯಲ್ಲಿ ಎರಡನೇ ಸ್ಥಾನ ಪಡೆದಿದೆ ಹಾಗೂ ಕೃಷಿಕರೊಂದಿಗೆ ಉತ್ತಮ ಬಾಂಧವ್ಯವವನ್ನು ಹೊಂದುವ ಮೂಲಕ ಪ್ರಗತಿಯನ್ನು ಸಾಧಿಸುತ್ತಿರುವ ಕಾರಣ ಬೆಂಗಳೂರಿನಲ್ಲಿ ಈಚೆಗೆ ನಡೆದ ಬ್ಯಾಂಕಿನ್‌ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕ್‌ ವ್ಯವಸ್ಥಾಪಕರಾದ ಚಂದ್ರಪ್ಪ ಪೀರಪ್ಪ ಚವ್ಹಾಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಹನಮಸಾಗರ ಸಮೀಪದ ಮಾವಿನ ಇಟಗಿ ಗ್ರಾಮದ ನಿವಾಸಿಯಾಗಿರುವ ಚಂದ್ರಪ್ಪ ಅವರು ಕಡುಬಡತನದಲ್ಲಿ ಬೆಳೆದು ರೈತರಾಗಿ ಅನುಭವಿರುವ ಕಾರಣ ಬ್ಯಾಂಕಿನ ಎಲ್ಲಾ ಕೃಷಿಕ ಗ್ರಾಹಕರ ಜೊತೆಯಲ್ಲಿ ಉತ್ತಮ ಒಡನಾಟವನ್ನು ಹೊಂದಿದ್ದಾರೆ. ಬ್ಯಾಂಕ್‌ ಆಡಳಿತ ಮಂಡಳಿಯ ಅಧ್ಯಕ್ಷರ, ಉಪಾಧ್ಯಕ್ಷರ ಹಾಗೂ ಸರ್ವಸದಸ್ಯರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ಸಿಬ್ಬಂದಿಗಳ ಸಹಕಾರದಲ್ಲಿ ಬ್ಯಾಂಕಿನ ಆದಾಯವನ್ನು ಹೆಚ್ಚಿಸಲು ಇರುವ ಮಾರ್ಗಗಳನ್ನು ಅನಸರಿಸುತ್ತಿದ್ದಾರೆ. ಈ ಕಾರಣದಿಂದ ಗ್ರಾಹಕರಿಗೆ ಸಾಲ ನೀಡುವಲ್ಲಿ ಹಾಗೂ ಅವರಿಂದ ವಿನಯ ಪೂರ್ವಕವಾಗಿ ಮಾಹಿತಿ ನೀಡಿ ವಸೂಲಾತಿ ಮಾಡುವಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಇದರಿಂದ ಸಾಲ ವಸೂಲಾತಿಯಲ್ಲಿ ಎರಡನೇ ಸ್ಥಾನ ಪಡೆದಿದೆ ಹಾಗೂ ಎಲ್ಲರ ಗನಮವನ್ನು ಸೆಳೆದಿದೆ.

ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ (ಪಿಎಲ್‌ಡಿ) ಅಭಿವೃದ್ಧಿಗೆ ಹಾಗೂ ಪ್ರಗತಿಗೆ ಕಾರಣರಾದ ಆಡಳಿತ ಮಂಡಳಿ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ, ಸದಸ್ಯರಿಗೆ, ಸಿಬ್ಬಂದಿಗಳಿಗೆ ಹಾಗೂ ರೈತರಿಗೆ ಬ್ಯಾಂಕಿನ ವ್ಯವಸ್ಥಾಪಕರಾದ ಚಂದ್ರಪ್ಪ ಪೀರಪ್ಪ ಚವ್ಹಾಣ ಕೃತಜ್ಞತೆಗಳನ್ನು ತಿಳಿಸಿದರು. ಹಾಗೂ ಇದೇ ರೀತಿ ಪ್ರಗತಿಗೆ ಸಹಕಾರ ನೀಡುವಂತೆ ಕೋರಿದರು.
Post a Comment

Post a Comment