ಗಜೇಂದ್ರಗಡ : (Dec_06_2023)
2026ಕ್ಕೆ Delimitations ಆಗಲಿದೆ. ಆಗ ರೋಣ ಮತ ಕ್ಷೇತ್ರ ಕೂಡ ಎಸ್.ಸಿ ಕೋಟಾದಲ್ಲಿ ಪರಿಗಣನೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಹೀಗೆ ಡಿಲಿಮಿಟೇಶನ್ ಆಗಿದ್ದೇ ಆದ್ರೆ, ಬಿಜೆಪಿಗೆ ಉತ್ತರ ಭಾರತ ಸಾಕೆಂದುಕೊಂಡಿದೆ. ಈ ಹಿಂದೆ ಕೇಂದ್ರದಲ್ಲಿ ವಾಜಪೇಯಿ ಸರ್ಕಾರ ವಿದ್ದಾಗ ಡಿಲಿಮಿಟೇಶನ್ ಆಗಿತ್ತು. ಇದಾದ ಬಳಿಕ, ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಆಗಿನ ಕೇಂದ್ರ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿತ್ತು. ಇದನ್ನ ದಕ್ಷಿಣದ ರಾಜ್ಯಗಳಾದ ಕೇರಳ, ತಮಿಳುನಾಡು, ಕರ್ನಾಟಕ, ಆಗಿನ ಸಮಗ್ರ ಆಂದ್ರ ಪ್ರದೇಶ ( ಈಗ ಆಂದ್ರಪ್ರದೇಶ ಮತ್ತು ತೇಲಂಗಾಣ ) ಚಾಚು ತಪ್ಪದೇ ಸರ್ಕಾರದ ನೀತಿಗಳನ್ನ ಜಾರಿಗೆ ತಂದಿವೆ. ಜೊತೆಗೆ ದಕ್ಷಿಣದ ರಾಜ್ಯಗಳು ಹೆಚ್ಚಿನ ಆದಾಯ ತಂದು ಕೊಡುತ್ತಿವೆ. ಜಿ.ಎಸ್.ಟಿ ಹೆಚ್ಚಿನ ಮಟ್ಟದಲ್ಲಿ ಕಟ್ಟುವ ರಾಜ್ಯಗಳಲ್ಲಿ ದಕ್ಷಿಣ ಭಾರತದ ಪಾಲು ಹೆಚ್ಚು.
ಆದ್ರೆ, ಉತ್ತರ ಭಾರತದಲ್ಲಿ ಡಿಲಿಮಿಟೇಶನ್ ಬಳಿಕ ಲೋಕಸಭೆ ಸೀಟಗಳು ಹೆಚ್ಚಾಗಲಿವೆ. ಕ್ಷೇತ್ರವಾರು ಮತ್ತು ಜನಸಂಖ್ಯೆವಾರು ಲೋಕ ಸಭಾ ಕ್ಷೇತ್ರ ವಿಂಗಡನೆಯಾಗಲಿದೆ.
ತಮಿಳುನಾಡಿನಲ್ಲಿ ಪ್ರಧಾನಿ ಮೋದಿ ಬಂದಾಗಲೆಲ್ಲ Go Back Modi ಎಂದು ಟ್ವೀಟರ್ ಅಭಿಯಾನ ಆರಂಭವಾಗಿ, ಬಿಜೆಪಿಗೆ ಮುಜುಗರವಾಗುತ್ತದೆ.
Delimitation ಬಳಿಕ ಬಿಜೆಪಿಗೆ ದಕ್ಷಣದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯತೆ ಇಲ್ಲ. ಹಿಂದಿ ಭಾಷಿಕರ ರಾಜ್ಯಗಳೆ ಸಾಕು ಎಂದು ಹೇಳುವ ಕಾಲ ಸನ್ನಿಹಿತವಾಗಿದೆ.
ಇನ್ನೂ, ಕಾಂಗ್ರೆಸ್ ದಕ್ಷಿಣದ ಒಂದೆರಡು ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದೆ. ಅದು ಸ್ಥಳೀಯ ನಾಯಕರಿಂದ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ Moye Moye ಎಂದು ಸೋಷಿಯಲ್ ಮಿಡಿಯಾ, Mainstream ಮಿಡಿಡಿಯಾಗಳು ಹೇಳುತ್ತಿವೆ.
Post a Comment