-->
Bookmark

Gajendragad : ಪ್ರಧಾನಿ ಮೋದಿ ವರ್ಚಸ್ಸಿನ ಮೇಲೆ ಬೀಗುತ್ತಿರುವ ರಾಜ್ಯ ಬಿಜೆಪಿ ನಾಯಕರು

Gajendragad : ಪ್ರಧಾನಿ ಮೋದಿ ವರ್ಚಸ್ಸಿನ ಮೇಲೆ ಬೀಗುತ್ತಿರುವ ರಾಜ್ಯ ಬಿಜೆಪಿ ನಾಯಕರು 

ಗಜೇಂದ್ರಗಡ : (Dec_04_2023)

ಲೋಕ ಸಭೆ ಚುನಾವಣೆಗೆ ಇನ್ನೇನು ಕೆಲವೆ ತಿಂಗಳು ಬಾಕಿ ಇದ್ದು, ಐದು ರಾಜ್ಯಗಳ ಚುನಾವಣೆ ನಡೆಯಿತು. ಮೂರು ಕಡೆ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಆದ್ರೆ, ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್ ಸರ್ಕಾರದ ಲೋಪದೋಷಗಳನ್ನ ಜನರಿಗೆ ತಿಳಿಸುವ, ಪ್ರತಿಭಟನೆ ನಡೆಸಲಾಗದ ಸ್ಥಿತಿಗೆ ತಲುಪಿದೆ. ಆಂತರಿಕ ಭಿನ್ನಾಭಿಪ್ರಾಯದಲ್ಲೇ ಮುಳುಗಿರುವ ಬಿಜೆಪಿ ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಟ್ಟಿಹಾಕುವ ಗಟ್ಟಿ ಪ್ರತಿಪಕ್ಷವಾಗಿ ಕಾಣುತ್ತಿಲ್ಲ. 

ಹಲವು ಸಮಸ್ಯೆಗಳಿದ್ದು, ಅದರ ಮೇಲೆ ಬೆಳಕು ಚೆಲ್ಲುವ ಕಾರ್ಯ ನಡೆಯುತ್ತಿಲ್ಲ. ಸ್ಥಳೀಯ ನಾಯಕರ ಕೆಲಸ ಕಾರ್ಯಗಳನ್ನ ಸಹ ಪ್ರಧಾನಿ ನರೇಂದ್ರ ಮೋದಿ ಅವರೇ ಬಂದು ಮಾಡಬೇಕಿದೆ. ಬಿಜೆಪಿಯಲ್ಲಿ ಪಟ್ಟಣ ಪಂಚಾಯತಿಯಲ್ಲೂ ನರೇಂದ್ರ ಮೋದಿ ಅವರ ಹೆಸರು ಹೇಳಿ ಮತ ಪಡೆಯುವ ಅನಿವಾರ್ಯತೆ ಸೃಷ್ಟಿಸಿಕೊಂಡಿದ್ದಾರೆ. 

ರಾಜ್ಯದಿಂದ ಕಳೆದ ಬಾರಿ 25 ಸಂಸದರು ಆಯ್ಕೆಯಾಗಿ ಹೋಗಿದ್ದಾರೆ. ಅವರು ಮಾಡಬೇಕಾದ ಕೆಲಸ ಕಾರ್ಯಗಳೆನು ? ಬಿಜೆಪಿ ಮತ್ತೆ ಮತ ಕೇಳಲು ಬಂದಾಗ ಮತದಾರರಿಗೆ ಯಾವ ಭರವಸೆ ಕೊಡಬೇಕು ? ಮತದಾರರನ್ನ ಹೇಗೆ ಸೆಳೆಯಬೇಕು ಎಂಬುದು ಬಿಜೆಪಿ ಸ್ಥಳೀಯ ನಾಯಕರಿಗೆ ತಿಳಿಯದಾಗಿದೆ. ದಕ್ಷಿಣ ಭಾರತ ಬಿಜೆಪಿಗೆ ಬೇಡವಾದ ಶಿಶುವಾಗಿದೆ. 

ದಕ್ಷಿಣದಲ್ಲಿ ಬಿಜೆಪಿ ಕೈಯಲ್ಲಿ ಇದ್ದ ಒಂದು ರಾಜ್ಯವನ್ನ ಕಳೆದುಕೊಂಡು ಕಂಗಾಲಾಗಿದೆ. 

ಲೋಕಸಭೆಯಲ್ಲಿ ಕಳೆದ ೧೦ ವರ್ಷಗಳಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ ಕೊಡುಗೆ ಏನು ಎಂಬ ಪ್ರಶ್ನೆ ಬಂದಾಗ ಯಾವ ಸಂಸದರ ಬಳಿಯೂ ಉತ್ತರ ವಿಲ್ಲ. ಪ್ರಧಾನಿ ನರೇಂದ್ರ ಮೋದಿ ಬಂದು ಪ್ರಚಾರ ನಡೆಸಿದರೇ, ಗೆದ್ದು ಬಿಡುತ್ತೇವೆ ಎಂಬ ಹುಂಬತನವನ್ನ ಬಿಡಬೇಕಿದೆ. 

ರಾಜ್ಯಕ್ಕೆ ಸಿಗಬೇಕಾದ ಜಿ.ಎಸ್.ಟಿ, ಕಾವೇರಿ ನದಿ ನೀರು ಹಂಚಿಕೆಯಲ್ಲೂ ಭಾಗವಹಿಸದ ಕೇಂದ್ರ ಸರ್ಕಾರ. ಕರ್ನಾಟಕದ ಅಭಿವೃದ್ಧಿ ಅಂತಾ ಬಂದಾಗ ಬಿಜೆಪಿ ಮಲತಾಯಿ ಧೋರಣೆ ಅನುಸರಣೆ ಸೇರಿದಂತೆ ಕಾಂಗ್ರೆಸ್ ಬಳಿ ಹಲವಾರು ಅಸ್ತ್ರಗಳುವೆ. ಲೋಕಸಭೆಗೆ ಕೈ ಪಾಳಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಯಾರಿ ನಡೆಸಿದ್ದಾರೆ.  ಲೋಕ ಸಭೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲಿಸಿ ಕೊಡುವ ಜವಾಬ್ದಾರಿಯನ್ನ ಕಾಂಗ್ರೆಸ್ ಹೈ ಕಮಾಂಡ ಇವರ ಹೆಗಲಿಗೆ ನೀಡಿದೆ. ಆದ್ರೆ, ಸರ್ಕಾರದ ನಡೆಯನ್ನ ಟೀಕಿಸುವ ದಕ್ಷವಾಗಿರುವ ಪ್ರತಿಪಕ್ಷವೇ ಇಲ್ಲದಂತಾಗಿದೆ. ನಾಲ್ಕು ರಾಜ್ಯದ ಫಲಿತಾಂಶ ಬಂದು ಇಪ್ಪತ್ನಾಲ್ಕು ಗಂಟೆ ಸಹ ಆಗಿಲ್ಲ. ಪ್ರಧಾನಿ ನರೇಂದ್ರ ಮೋದಿ  ಅವರ ವರ್ಚಸ್ಸಿನಿಂದ ಗೆಲ್ಲಿತ್ತೇವೆ ಎಂಬ ಮಾತುಗಳು ಬಿಜೆಪಿಯಲ್ಲಿ ಪ್ರಾರಂಭವಾಗಿದೆ. ರಾಜ್ಯ ಬಿಜೆಪಿ ನಾಯಕರಿಗೆ ಸೋತರು ಬುದ್ದಿ ಬಂದಿಲ್ಲ‌. ಹಿಂದಿ ಭಾಷಿಕರ ನಾಡಲ್ಲಿ ನಡೆಯುವ ಚಮತ್ಕಾರ ದಕ್ಷಿಣ ಭಾರತದಲ್ಲಿ ನಡೆಯದಿರುವುದನ್ನ ಬಿಜೆಪಿ ಹೈ ಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದೆ. ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೋದಲ್ಲೆಲ್ಲ ಸೋತಾಗಿನಿಂದ ರಾಜ್ಯ ಬಿಜೆಪಿ ನಾಯಕರನ್ನ ಮೋಷಾ ( ನರೇಂದ್ರ ಮೋದಿ ಮತ್ತು ಅಮಿತ್ ಶಾ ) ಕಡೆಗಣಿಸಿರುವುದು ಜಗಜ್ಜಾಹಿರವಾಗಿದೆ. ಈಗ ಲೋಕ ಸಭೆಯಲ್ಲಿ ಕನಿಷ್ಟ 15 ಸಂಸದರು ಆಯ್ಕೆ ಯಾಗದಿದ್ದಲ್ಲಿ, ಬಿಜೆಪಿ ಹೈ ಕಮಾಂಡ್ ಯಾವ ರೀತಿ ಸೇಡು ತೀರಿಸಿಕೊಳ್ಳಲಿದ್ದಾರೆ ಎಂಬುದನ್ನ ಕಾದು ನೋಡಬೇಕಿದೆ.

Post a Comment

Post a Comment