-->
Bookmark

Gajendragad : ಗಜೇಂದ್ರಗಡದಲ್ಲಿ ಮಾರುಕಟ್ಟೆ ಮಾಡುತ್ತೇವೆ : ಭಾಷೆಸಾಬ್ ಮಲಸಮುದ್ರ

Gajendragad : ಗಜೇಂದ್ರಗಡದಲ್ಲಿ ಮಾರುಕಟ್ಟೆ ಮಾಡುತ್ತೇವೆ : ಭಾಷೆಸಾಬ್ ಮಲಸಮುದ್ರ 
ಗಜೇಂದ್ರಗಡ : ( Jan_01_2023)
ಈ ಹಿಂದೆ ಸಂಘಟನೆ ಮಾಡುವಾಗ ನೇಮಕ ಮಾಡಿದ ಬಳಿಕ ಅವರು ಪಟ್ಟಣದಲ್ಲಿ ಹೋರಾಟ ನಡೆಸಲಿಲ್ಲ. ಸಂಘಟನೆಯೂ ನಡೆಯಲಿಲ್ಲ. ಬೀದಿ ವ್ಯಾಪಾರಸ್ಥರ ಬದುಕು ಕಟ್ಟಿಕೊಳ್ಳಲು ಅನುಕೂಲವಾಗಲಿ ಎಂದಾಗಿತ್ತು. ಆದ್ರೆ, ಅದು ಆಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. 
ನಮ್ಮ ಉದ್ದೇಶ ನಮ್ಮ ನಾಯಕ ನಮಗೆ ಉದ್ದಾರ ಮಾಡಲೇ ಇಲ್ಲ. ರಾಜ್ಯಕ್ಕೆ ತೆರಳಿದರು. ನಮ್ಮೂರನ್ನ ಬದಲಾಯಿಸಿ ಮತ್ತೊಂದು ಊರಿಗೆ ಬದಲಾಯಿಸಬೇಕು. ನೀವೂ ನಮ್ಮೊಂದಿಗೆ ಬನ್ನಿ, ನಿಮಗೂ ಸರ್ಕಾರದ ಸವಲತ್ತು ಸಿಗಲಿ ಎಂದು ಹೇಳಿದರು. 
ಎಲ್ಲ ಸಮುದಾಯದವರೂ ಇದರಲ್ಲಿರಬೇಕು. ಕೆಳಮಟ್ಟದಿಂದ ಬಂದವರಿಗೆ ಗೌರವ ಸಿಗಯವಂತಾಗಬೇಕು. ಕೆಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಡಿ ಎಂದು ಹೇಳಿದ್ದಾರೆ ಎಂದು ಸ್ಮರಿಸಿದರು. 
ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ನಮ್ಮ ಹಕ್ಕನ್ನ ಬೇರೆಯವರಿಗೆ ಕೊಡುವುದು ತಪ್ಪು ಎಂದು ಹೇಳಿದರು. ನಮ್ಮವರೇ ನಮ್ಮನ್ನ ಒಡೆದಾಳುತ್ತಿದ್ದಾರೆ ಎಂದು ನೋವು ತೊಡಿಕೊಂಡರು. 

ಟಿವಿಸಿ ಸದಸ್ಯರಾಗಿ ನಾಲ್ಕು ವರ್ಷವಾಗಿದೆ. ಆದ್ರೆ, ಕಾನೂನಿನ ಅರಿವಿಲ್ಲ ಎಂದು ಹೇಳಿದರು. 

ಎಲ್ಲರೂ ಸಂಘಟಿತರಾಗಿ, ವ್ಯಾಪಾರಸ್ಥರು ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದ ಉದಾಹರಣೆಗಳು ಇವೆ. ಸರ್ಕಾರದಿಂದ ಬಂದ ಹಣ ವಾಪಸ್ ಹೋಗಿದ್ದು ನೋವಿನ ಸಂಗತಿ ಎಂದು ಹೇಳಿದರು. 
ಈ ಬಾರಿ ನಡೆಯುವ ಚುನಾವಣೆ ನಡೆಯಲಿದೆ. ಹೀಗಾಗಿ, ನಾವೆಲ್ಲರೂ ಒಗ್ಗಟ್ಟಾಗಬೇಕು. ನಮ್ಮ ದುಡ್ಡು, ನಮಗೆ ಕೊಡಿ ಎನ್ನುತ್ತಿದ್ದೇವೆ ಎಂದರು. ಇಲ್ಲಿ ನಾಯಕತ್ವ ಸರಿಯಾಗಿಲ್ಲ. ಇದರಿಂದ ಯಾವುದೇ ಕೆಲಸ ಸರಿಯಾಗಿಲ್ಲ. ಅವರು ಯಾರು ಬರುವುದಿಲ್ಲ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಕೆಲಸ ಮಾಡುತ್ತೇವೆ ಎಂದು ತಿಳಿದು ಅವರೇ ಬರುತ್ತಾರೆ. ಸಮಯ ಸಂಧರ್ಭ ಬಂದಾಗ ನಾವೇ ಬರುತ್ತೇವೆ. ನಿಮ್ಮ ಸಮಸ್ಯೆ ಅಂತಾ ಬಂದಾಗ ನಿಮ್ಮೊಂದಿಗೆ ನಾವಿದ್ದೇವೆ. ಜಾತಿ, ಕುಲ, ಪಂಥ ಮೀರಿ ಬೀದಿ ವ್ಯಾಪಾರಸ್ಥರ ನಿಯಂತ್ರಣ ಕಾಯ್ದೆ ಇದೆ. ಲೀಡರ್ಕಿ ಮಾಡೊರು ಹಣ ಪಡೆದು ಲೋನ್ ಮಾಡುತ್ತಾರೆ. 

ಕಾನೂನಿನ ಅರಿವೂ ಮೂಡಿಸುವ ಕಾರ್ಯ ನಡೆಯಬೇಕು. ರಾಜ್ಯ, ಜಿಲ್ಲೆಯ ಜನ ನಿಮ್ಮೊಂದಿಗಿದ್ದಾರೆ. ಕಾರ್ಯಾಲಯ ಉದ್ಘಾಟನೆ ಮಾಡಿದ್ದು,15 ದಿನಕ್ಕೊಮ್ಮೆ ಕಮಿಟಿ ಮಿಟಿಂಗ್ ಮಾಡಿ. ಗಜೇಂದ್ರಗಡದಲ್ಲಿ ನಡೆದ ಸಂಘಟನೆ ರಾಜ್ಯಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು. ರಫೀಕ್ ತೋರಗಲ್ ಬಡವರಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಒಂದು ವರ್ಷದಲ್ಲಿ ಮಾರುಕಟ್ಟೆ ಮಾಡುತ್ತೇವೆ ಎಂದು ಹೇಳಿದರು. 

ರಷಿದಾ ನದಾಫ್, ಮಾರುತಿ ಸೋಳಂಕಿ ಸಹ ಸಂಘಟನೆ ಮಾಡಿ, ಬೀದಿಬದಿ ವ್ಯಾಪಾರಸ್ಥರ ಸಮಸ್ಯೆ ಬಗೆಹರಿಯಲಿದೆ ಎಂದು ಬೀದಿಬದಿ ವ್ಯಾಪಾರಸ್ಥರಿಗೆ ಕಿವಿ ಮಾತು ಹೇಳಿದರು. ಬೆರಳೆಣಿಕೆ ಸದಸ್ಯರಿಂದ ಆರಂಭವಾಗಿ, ಇಂದು ಸಾವಿರಾರು ಸದಸ್ಯರಾಗಿದ್ದಾರೆ. ಹೋರಾಟಕ್ಕೂ ಸಾವಿರಾರು ಜನರು ಭಾಗವಹಿಸುತ್ತಾರೆ ಎಂದು ಹೇಳಿದರು.
ದಿವ್ಯ ಸಾನಿದ್ಯವಹಿಸಿ ಮಾತನಾಡಿದ ಹಜರತ್ ಸೈಯದ್ ನಿಜಾಮುದ್ದಿನ್ ಶಾ ಅಶ್ರಫಿ ಮಕಾನದಾರ್ ಟೆಕ್ಕೆದ್ ಬಾವಾನವರು, ಬೀದಿಬದಿ ವ್ಯಾಪಾರಸ್ಥರು ಶಮ ಜೀವಿಗಳು. ನಡೆದು, ನಡೆದು ಅವರ ಚಪ್ಪಲಿ ಸವೆದು ಹೋಗಿವೆ. ಅವರಿಗೆ ಉತ್ತಮ ಜೀವನ ರೂಪಿಸುವ ಜವಾಬ್ದಾರಿ ಸಂಘದ ಮೇಲಿದೆ ಎಂದರು. 

ಹಜರತ್ ಸೈಯದ್ ನಿಜಾಮುದ್ದಿನ್ ಶಾ ಅಶ್ರಫಿ ಮಕಾನದಾರ್ ಟೆಕ್ಕೆದ್ ಬಾವಾನವರು, ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ರಫೀಕ್ ತೋರಗಲ್, ಮಕ್ತುಮಸಾಬ್ ನಾಲಬಂದ್ ಬೀದಿಬದಿ ವ್ಯಾಪಾರಿಗಳ ವಿವಿದೊದ್ದೇಶ ಸಂಘದ ಜಿಲ್ಲಾಧ್ಯಕ್ಷ, ಕರ್ನಾಟಕ ರಸ್ತೆಬದಿ ವ್ಯಾಪಾರಸ್ಥರ ಮಹಾಮಂಡಲದ ರಾಜ್ಯ ಉಪಾಧ್ಯಕ್ಷ, ಬಾಷಾಸಾಬ್ ಮಲಸಮುದ್ರ ಜಿಲ್ಲಾ ಉಪಾಧ್ಯಕ್ಷ ಮಾರುತಿ ಸೋಳಂಕಿ, ಬೀದಿಬದಿ ವ್ಯಾಪಾರಸ್ಥರ ಮಹಿಳಾ ಜಿಲ್ಲಾಧ್ಯಕ್ಷರಾದ ರಷಿದಾ ನದಾಫ್, ಭೋವಿ ಸಮಾಜದ ಮಾಜಿ ಅಧ್ಯಕ್ಷರಾದ ಶರಣಪ್ಪ ಚಳಗೇರಿ, ಪಟ್ಟಣ ಮಾರಾಟ ಸಮಿತಿ ಸದಸ್ಯರಾದ ಚೌಡಮ್ಮ ಯಲಪು, ಪಾರ್ವತಿ ರಾಠೋಡ್, ಮೊಹಮ್ಮದ್ ಅಕ್ಕಿ, ಖಜಾಂಚಿ ಸೊಬರದ್, ರಾಘವೇಂದ್ರ ಹೂಗಾರ್, ಅಲ್ಲಾಭಕ್ಷಿ ಮುಚ್ಚಾಲಿ, ಮುತ್ತಪ್ಪ, ಯಾಸಿನ್ ಮಾರನಬಸರಿ, ನಾಗಪ್ಪ ಗಾರ್ಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. 
Post a Comment

Post a Comment