-->
Bookmark

Gajendragad : ವಿದ್ಯಾರ್ಥಿಯ ಜೀವನ ಪ್ರತಿಯೊಬ್ಬರಿಗೂ ಪವಿತ್ರ ಘಟ್ಟ

Gajendragad : ವಿದ್ಯಾರ್ಥಿಯ ಜೀವನ ಪ್ರತಿಯೊಬ್ಬರಿಗೂ ಪವಿತ್ರ ಘಟ್ಟ
ಮಕ್ಕಳು ಮಾರ್ಕ್ಸ್‌ ವಾದಿಗಳಾಗದೆ ಸಾಧಕವಾದಿಗಳಾಗಬೇಕು;
ಖಿನ್ನತೆ ತಡೆಯಲು ಮನೋಸ್ಥೈರ್ಯ ತುಂಬಲು ಸಲಹೆ
-----
ಗಜೇಂದ್ರಂದ್ರಗಡ: (16_01_2023)
ಯಾವ ಗಿಡದ ಬೇರು ಆಳವಾಗಿರುತ್ತದಯೋ  ಹಾಗೂ ಅದಕ್ಕೆ ನೀರು, ಗೊಬ್ಬರ ಸರಿಯಾಗಿ ಪೂರೈಕೆಯಾಗಿರುತ್ತದೆಯೋ ಅದು ಸಮೃದ್ಧವಾಗಿ ಬೆಳೆಯುತ್ತದೆ. ಅದರಂತೆ ಯಾವ ಮಕ್ಕಳಿಗೆ  ಸಂಸ್ಕಾರ, ಸಂಸ್ಕೃತಿಗಳು ನಿಜ ಜೀವನದ ನಡುವಳಿಕೆಯಲ್ಲಿ ಆಳವಾಗಿರುತ್ತದೆಯೋ ಅವರು ಸರಿಯಾದ ಮಾರ್ಗದಲ್ಲಿ ಬೆಳೆದು ದೇಶಕ್ಕೆ ಸಂಪನ್ಮೂಲ ವ್ಯಕ್ತಿಗಳಾಗುತ್ತಾರೆ ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ನಗರದ ಪುರ್ತಗೇರಿ ಕ್ರಾಸ್‌ ಬಳಿ ಇರುವ ಶ್ರೀ ಅನ್ನದಾನೇಶ್ವರ ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ 2023-24ನೇ ಸಾಲಿನ ವಿವಿಧ ಸಾಂಘಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭ “ಅಕ್ಷರ ಜಾತ್ರೆ-2024”ರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. 

ಖಿನ್ನತೆಯ ಕಾರಣದಿಂದಾಗಿ ಇತ್ತೀಚೆಗೆ ವಿದ್ಯಾರ್ಥಿಗಳು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ತಪ್ಪಾಗಿವೆ. ಯಾವುದೇ ಉದ್ವೇಗ ಹಾಗೂ ಭಾವವಕ್ಕೆ ಒಳಗಾಗಿ ದುಡುಕಿನ ನಿರ್ಧಾರಗಳನ್ನು ಕೈಗೊಳ್ಳಬಾರದು. ಆದ್ದರಿಂದ ಮಕ್ಕಳಿಗೆ ಸರಿಯಾದ ಹಾಗೂ ಉತ್ತಮವಾದ ಆಯ್ಕೆಗಳನ್ನು ಹೊಂದಲು ಮನೋಸ್ಥೈರ್ಯ ತುಂಬುವ ಅವಶ್ಯಕತೆ ಇದೆ ಎಂದರು. ಎಷ್ಟು ಸಾಧ್ಯವೋ ಅಷ್ಟು ನಗುವಿನ ಜೀವನ ಕಳೆಯಲು ಪ್ರಯತ್ನಿಸಬೇಕು ಆದರೆ ನಮ್ಮ ನಗು ಇನ್ನೊಬ್ಬರ ದಃಖಕ್ಕೆ ಕಾರಣವಾಗಬಾರದು ಎಂದರು. ವಿದ್ಯಾರ್ಥಿಗಳು ಮಾರ್ಕ್ಸ್‌ ವಾದಿಗಳಾಗದೆ ಜೀವನದ ಸಾಧಕ ವಾದಿಗಳಾಗಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. 

ಕಾರ್ಯಕ್ರಮದಲ್ಲಿ ವಿಶೆಷ ಉಪನ್ಯಾಸ ನೀಡಿದ ಅಂಧ ಸ್ಕೇಟಿಂಗ್‌ ಕ್ರೀಡಾಪಟು ಹಾಗೂ ಅಂತರಾಷ್ಟ್ರೀಯ ವೇದಿಕೆಗಳ ಭಾಷಣಕಾರರಾದ ಡಾ. ನಾನು ಪಾಟೀಲ, ಬದುಕಿನ ಸಾವಿರಾರು ಕನಸುಗಳಿಗೆ ದಾರಿಯನ್ನು ಕಂಡುಕೊಳ್ಳಲು ಮಾರ್ಗದರ್ಶನ ಸಿಗುವ ವಿದ್ಯಾರ್ಥಿಯ ಜೀವನ ಪ್ರತಿಯೊಬ್ಬರ ಬದುಕಿನಲ್ಲಿ ಅತ್ಯಂತ ಪವಿತ್ರವಾದ ಘಟ್ಟವಾಗಿದೆ ಎಂದರು. ನಾವು ಸಮಯವನ್ನು ಹೇಗೆ ಬಳಕೆ ಮಾಡಿಕೊಳ್ಳುತ್ತೇವೋ ಹಾಗೆ ನಾವು ಸಾಧನೆಗೆ ಬಳಕೆಯಾಗುತ್ತೇವೆ ಆದ್ದರಿಂದ ವಿದ್ಯಾರ್ಥಿಗಳ ಜೀವನದಲ್ಲಿ ಸಿಗುವ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಜಗತ್ತೇ ತಿರುಗಿ ನೋಡುವಂತೆ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು. ನಂತರ ಅನೇಕ ಉದಾಹರಣೆ ನೀಡಿ ಅವರದೇ ಜೀವನದಲ್ಲಿ ಅನುಭವಿಸಿದ ಕಷ್ಟ, ಸಾಧನೆಗಳನ್ನು ಹೇಳುವ ಮೂಲಕ ಹಾಗೂ ಅಟಲ್‌ ಬಿಹಾರಿ ವಾಜಪೇಯಿ, ಡಾ. ಎ.ಪಿ.ಜೆ. ಅಬ್ದುಲಕಲಾಂ ಹಾಗೂ  ಪ್ರಧಾನಿ ನರೇಂದ್ರ ಮೋದಿಯವರ ಜೊತೆಗಿನ ಒಡನಾಟದ ಮಾತುಗಳನ್ನು ಹೇಳುವ ಮೂಲಕ ಮಕ್ಕಳಿಗೆ ಸ್ಪೂರ್ತಿ ತುಂಬಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿಯು ಕಾಲೇಜಿನ ಚೇಮರನ್ನ ವಿ. ವಿ. ವಸ್ತ್ರದ, ಗ್ರಾಮೀಣ ಭಾಗದ ಹಾಗೂ ಹಿಂದೂಳಿದ ವಿದ್ಯಾರ್ಥಿಗಳನ್ನೆ ಹೆಚ್ಚು ಹೊಂದಿರುವ ನಮ್ಮ ಸಂಸ್ಥೆಯ ಮಕ್ಕಳು ವರ್ಷದಿಂದ ವರ್ಷಕ್ಕೆ ಉನ್ನತ ಮಟ್ಟದ ಸಾಧನೆಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಸಂಸ್ಥೆಯ ಅಧ್ಯಕ್ಷರಾಗಿರುವ ಮುಪ್ಪಿನಬಸವಲಿಂಗ ಸ್ವಾಮೀಜಿಗಳ ಆಶೀರ್ವಾದದ ಮಾರ್ಗದರ್ಶನ ಹಾಗೂ ಉಪನ್ಯಾಸಕರ ಪರಿಶ್ರಮ ಕಾರಣವಾಗಿದೆ ಎಂದರು.

ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಣ್ಣ ಜಿ. ಬಂಡಿ ಮಾತನಾಡಿ, ಹಿರಿಯ ಅನ್ನದಾನ ಶ್ರೀಗಳು ನರೇಗಲ್‌ ಪಟ್ಟಣದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಜೋಳಗಿ ಹಾಕಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ ಕಾರಣ ಉತ್ತರ ಕರ್ನಾಟಕದಾದ್ಯಂತ ಅಕ್ಷರ ಪಡೆದ ಶಿಕ್ಷಿತರು ಹುಟ್ಟಿಕೊಂಡರು. ಶ್ರೀಗಳ ಮಾರ್ಗದರ್ಶನದಂತೆ ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಪಾಠಪ್ರವಚನದ ಜೊತೆಯಲ್ಲಿ ಸಂಸ್ಕಾರ, ಮೌಲ್ಯಯುತ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತದೆ. ಆದ ಕಾರಣ ಅಕ್ಷರ ಜ್ಯೋತಿಯ ಜೊತೆಯಲ್ಲಿ ಜ್ಞಾನದ ಜ್ಯೋತಿ ವಿದ್ಯಾರ್ಥಿಗಳ ರೂಪದಲ್ಲಿ ಬೆಳಕು ಚೆಲ್ಲಿದೆ ಎಂದರು.

ಈ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನಿಯರನ್ನು ಸನ್ಮಾನಿಸಲಾಯಿತು. ಪಿಯು ಪ್ರಾಚಾರ್ಯ ವಸಂತರಾವ್‌ ಗಾರಗಿ ಕಾಲೇಜಿನ ವಾರ್ಷಿಕ ವರದಿವಾಚನ ಮಾಡಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಈ ವೇಳೆ ಎಸ್.‌ ಎಸ್.‌ ಎ. ವಿ. ವಿ. ಪಿ ಸಮಿತಿಯ  ಆಡಳಿತಾಧಿಕಾರಿ ಎನ್.‌ ಆರ್.‌ ಗೌಡರ,  ಪದವಿ ಕಾಲೇಜಿನ ಚೇರಮನ್ನ ಎಸ್.‌ ಪಟ್ಟೇದ,  ಸದಾಶಿವ ಕರಡಿ, ಮುದಕಪ್ಪ ತೊಂಡಿಹಾಳ, ಸಮಾಜದ ಮುಖಂಡ ಚಂಬಣ್ಣ ಚವಡಿ,  ಕಿವುಡ ಮಕ್ಕಳ ವಸತಿಯುತ ಶಾಲೆಯ ಅಧ್ಯಕ್ಷ ಎಸ್.‌ ಕೆ. ರೇವಡಿ,   ಪ್ರಾಥಮಿಕ ಶಾಲೆಯ ಚೇರಮನ್ನ ಪಿ. ಎನ್.‌ ಚವಡಿ, ಐಟಿಐ ಕಾಲೇಜಿನ ಚೇರಮನ್ನ ಎಸ್.‌ ಸಿ. ಚಕ್ಕಡಿಮಠ, ಐಟಿಐ ಕಾಲೇಜಿನ ಪ್ರಾಚಾರ್ಯ ಎ. ಪಿ. ಗಾಣಗೇರ, ಪದವಿ ಕಾಲೇಜಿನ ಪ್ರಾಚಾರ್ಯ ಬಿ. ಎಸ್.‌ ಹಿರೇಮಠ, ಪ್ರಾಥಮಿಕ ಕಾಲೇಜಿನ ಮುಖ್ಯ ಶಿಕ್ಷಕ ಮಂಜುನಾಥ ಕಾಡದ ಇದ್ದರು.
-----
16ಗಜೇಂದ್ರಗಡ1: ಗಜೇಂದ್ರಗಡ ಪಟ್ಟಣದ ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಉದ್ಘಾಟಿಸಿದರು

16ಗಜೇಂದ್ರಗಡ2: ಗಜೇಂದ್ರಗಡ ಪಟ್ಟಣದ ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಮಾತನಾಡಿದರು

16ಗಜೇಂದ್ರಗಡ3: ಗಜೇಂದ್ರಗಡ ಪಟ್ಟಣದ ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಅಂಧ ಸ್ಕೇಟಿಂಗ್‌ ಕ್ರೀಡಾಪಟು ಹಾಗೂ ಅಂತರಾಷ್ಟ್ರೀಯ ವೇದಿಕೆಗಳ ಭಾಷಣಕಾರ ಡಾ. ನಾನು ಪಾಟೀಲ ಮಾತನಾಡಿದರು. 
Post a Comment

Post a Comment