-->
Bookmark

"ನಾನೇ ಹೀರೋ" ಚಲನಚಿತ್ರಕ್ಕೆ ಮುಹೂರ್ತ

Bengaluru : "ನಾನೇ ಹೀರೋ" ಚಲನಚಿತ್ರಕ್ಕೆ ಮುಹೂರ್ತ
ಬೆಂಗಳೂರ : (Feb_20_2024)

ಬೃಂದ ವಿದ್ಯಾ ಪಿಕ್ಚರ್ಸ್ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಹಾಸ್ಯಮಯ ಚಿತ್ರ "ನಾನೇ ಹೀರೋ".
"ನಿಮಗೇನ್ ಪ್ರಾಬ್ಲಮ್ಮು" ಎಂಬುದು ಇದಕ್ಕೆ ಟ್ಯಾಗ್ ಲೈನ್ ಚಿತ್ರದ ಮುಹೂರ್ತವು ಚಿಂತಾಮಣಿ ತಾಲ್ಲೂಕಿನ ನಲ್ಲಗುಟ್ಲಪಲ್ಲಿ ಸಪ್ತಮಾತೃಕೆಯರ ಸನ್ನಿಧಾನದಲ್ಲಿ ವಿಜೃಂಭಣೆಯಿಂದ ನೆರವೇರಿತು.
     ಉಪೇಂದ್ರ ರ ಅಭಿಮಾನಿಯೊಬ್ಬರು ಸಿನಿಮಾ ಇಂಡಸ್ಟ್ರಿಯಲ್ಲಿ ಹೀರೋ ಆಗಬೇಕೆಂದು ಬಂದು ಏನೆಲ್ಲಾ ಕಸರತ್ತು ಮಾಡುತ್ತಾನೆ ಎಂಬ ಕಥಾಹಂದರ ಹೊಂದಿರುವ "ನಾನೇ ಹೀರೋ" ಚಿತ್ರದಲ್ಲಿ ಹೀರೋ ಆಗಿ ನಟಿಸುತ್ತಿರುವ ಅಶೋಕ್ ರವರು ನಿಜವಾಗಿಯೂ ಉಪೇಂದ್ರ ರ ಅಭಿಮಾನಿ ಆಗಿದ್ದು ಅವರ ಜೀವನದ ಕಥೆಯನ್ನೇ ಸ್ಕ್ರೀನ್ ಪ್ಲೇ ಮಾಡಿ ಅದಕ್ಕೆ ಸಂಭಾಷಣೆ ಸಾಹಿತ್ಯ ಬರೆದು ನಿರ್ದೇಶನ ಮಾಡುತ್ತಿದ್ದಾರೆ ಆರ್ ಕೆ ಗಾಂಧಿ.
     ಸಮಾಜ ಸೇವಕರಾದ ಚೌಡದೇನಹಳ್ಳಿಯ ಲಕ್ಷ್ಮಿನಾರಾಯಣ ರೆಡ್ಡಿ ಅವರು ಕ್ಯಾಮೆರಾ ಸ್ವಿಚ್ ಆನ್ ಮಾಡಿ ಸಿನಿಮಾ ಇಂಡಸ್ಟ್ರಿ ಎಂದರೆ ಬಹಳಷ್ಟು ಮಂದಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ ಆ ಭಯಕ್ಕೆ ಕಾರಣಗಳೇನು ಎಂಬ ವಿಷಯವನ್ನೇ ಮುಂದಿಟ್ಟುಕೊಂಡು ಸಿನಿಮಾ ಮಾಡುತ್ತಿರುವುದು ಚಿತ್ರತಂಡದ ಧೈರ್ಯ. ಆ ಧೈರ್ಯವನ್ನು ಮೆಚ್ಚಲೇಬೇಕು ಎಂದು ಚಿತ್ರತಂಡಕ್ಕೆ ಶುಭಹಾರೈಸಿದರೆ, ಹಿರಿಯ ಚಿತ್ರನಿರ್ಮಾಪಕರಾದ ಚಿಂತಾಮಣಿಯ ಬಿ. ಎನ್. ಎಸ್‌ರವರು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿ , ನಿರ್ದೇಶಕ ಆರ್ ಕೆ ಗಾಂಧಿ ನನಗೆ ೨೦ ವರ್ಷದ ಪರಿಚಯ, ಸೆಟ್‌ನಲ್ಲಿ ಪ್ರತಿ ಕೆಲಸವನ್ನು ತಾನೇ ನಿಭಾಯಿಸುವುದುಲ್ಲದೆ ಸ್ಕ್ರಿಪ್ಟ್ ವಿಷಯದಲ್ಲಿ ತುಂಬಾ ಜಾಗೃತರಾಗಿರ್ತಾರೆ, ಇದೊಂದು ಹೊಸ ಪ್ರಯೋಗ ಇದರಲ್ಲಿ ಚಿತ್ರತಂಡಕ್ಕೆ ಜಯ ಸಿಗಲೆಂದು ಹಾರೈಸಿದರು.
    ಹಗದೂರು ಅಶೋಕ್ ರೆಡ್ಡಿ, ಶೋಭ, ಶೋಭರಾಜ್, ಶಶಿಕುಮಾರ್,ಅನ್ಸರ್ ಬಾಬು, ಮಹಾಂತೇಶ ವಿರೂಪಾಕ್ಷಿ ಸಮಯ್ ಮೊದಲಾದವರು ನಟಿಸುತ್ತಿರುವ 'ನಾನೇ ಹೀರೋ'  ಚಿತ್ರಕ್ಕೆ ಪ್ರಮೋದ್ ಭಾರತೀಯ ಛಾಯಾಗ್ರಹಣ, ಎಂ ಎಲ್ ರಾಜ ಸಂಗೀತ, ರಾಜೀವ್ ಕೃಷ್ಣ ಗಾಂಧಿ ಸಾಹಿತ್ಯ,ವಿನಯ್ ಸಂಕಲನ ಡಾ. ಪ್ರಭು ಗಂಜಿಹಾಳ ಹಾಗೂ ಡಾ.ವೀರೇಶ್ ಹಂಡಗಿ ರವರ ಪತ್ರಿಕಾ ಸಂಪರ್ಕ ಈ ಚಿತ್ರಕ್ಕಿದ್ದು   ಮಾರ್ಚ್ ಮೊದಲ ವಾರದಿಂದ ಒಂದೇ ಶೆಡ್ಯೂಲ್ ನಲ್ಲಿ ಹೊಸಕೋಟೆ, ಚಿಂತಾಮಣಿ, ಮತ್ತು ಗಾಂಧಿನಗರದ ಹಲವು ಸಿನಿಮಾ ಕಛೇರಿಗಳಲ್ಲಿಯೂ ಚಿತ್ರೀಕರಣ ನಡೆಸಲು ಚಿತ್ರತಂಡ ತಯ್ಯಾರಾಗುತ್ತಿದೆ. ಚಿತ್ರಕ್ಕೆ ಹಗದೂರ ಅಶೋಕ ರೆಡ್ಡಿ, ಮುತ್ಸಂದ್ರ ವೆಂಕಟರಾಮಯ್ಯ,ಸತ್ಯವಾರ್ ನಾಗೇಶ್ ನಿರ್ಮಾಪಕರಾಗಿದ್ದಾರೆ.
**
ವರದಿ
ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬
Post a Comment

Post a Comment