-->
Bookmark

Gajendragad : ಚಿರತೆ ಹಾವಳಿ : ನಾಗರೀಕ ಬಂದೂಕು ತರಬೇತಿ ನೀಡಿ : ಹೆಚ್.ಎಸ್. ಸೋಂಪೂರ್

Gajendragad : ಚಿರತೆ ಹಾವಳಿ : ನಾಗರೀಕ ಬಂದೂಕು ತರಬೇತಿ ನೀಡಿ :  ಹೆಚ್.ಎಸ್. ಸೋಂಪೂರ್ 

ಗಜೇಂದ್ರಗಡ : (Feb_22_2024)

ಇತ್ತೀಚಿನ ದಿನಗಲ್ಲಿ ಗಜೇಂದ್ರಗಡ ತಾಲೂಕ  ಕಾಲಕಾಲೇಶ್ವರ, ಜೀಗೇರಿ, ಪ್ಯಾಟಿ, ನಾಗೇಂದ್ರಗದ, ಕಲ್ಲಿಗಾನೂರ, ವದೇಗೋಳ, ಕುಂಟೋಜಿ, ಗೌಡಗೆರಿ ಗ್ರಾಮಗಳ ಸುತ್ತ ಮುತ್ತ ಆಗಾಗ ಚಿರತೆಗಳು ಪ್ರತ್ಯಕ್ಷವಾಗುತ್ತಿವೆ.‌ ಅಲ್ಲದೇ, ನಾಗರಿಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆಗಳು ನಡೆದಿವೆ. ನಡೆಯುತ್ತಲೇ ಇವೆ. ಅನೇಕ ಭಾಗಗಳಲ್ಲಿ ಸಾಕು ಪ್ರಾಣಿಗಳಾದ ನಾಯಿ, ಕುದರೆ ಧನಕರುಗಳನ್ನು ಬಲಿ ಪಡೆದಿದ್ದು, ಇದರಿಂದ ರೈತರು, ಕೂಲಿಕಾರ್ಮಿಕರು ಭಯಭೀತರಾಗಿದ್ದಾರೆ. ಹೀಗಾಗಿ,   ಈ ಭಾಗದ ಜನರಿಗೆ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಬಂದೂಕು ತರಬೇತಿ ನೀಡಬೇಕೆಂದು, ಕೆಪಿಸಿಸಿ (ಓಬಿಸಿ ) ರಾಜ್ಯ ಉಪಾಧ್ಯಕ್ಷರಾದ ಹೆಚ್ ಎಸ್ ಸೋಂಪೂರ್ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಗಜೇಂದ್ರಗಡ ಗುಡ್ಡದ ಮೇಲೆ  ವಿಂಡ್ ಪವರ್ ಸ್ಟೇಷನ್ ಇದ್ದು, ಅದಕ್ಕೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುವವರು ಆತಂಕದಲ್ಲಿದ್ದಾರೆ. ಜೊತೆಗೆ ಗುಡ್ಡದಂಚಿನ ಭಾಗದಲ್ಲಿನ ರೈತರು, ಕೂಲಿ ಕಾರ್ಮಿಕರು ಜೀವ ಭಯದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈಗಾಗಲೇ ಗುಡ್ಡದ ಮೇಲೆ ಕೆಲ ಬೆಳೆ ಬೆಳೆದಿದ್ದ ರೈತರು, ಗುಡ್ಡದ ಮೇಲೆ ತೆರಳಲು ಆತಂಕ ಪಡುತ್ತಿದ್ದಾರೆ. ಕೆಲ ರೈತರು ಚಿರತೆ ನಾವು ನೋಡಿದ್ದೇನೆ, ಅವ್ರು ನೋಡಿದ್ದಾರೆ ಎಂದು ಹಲವು ಬಾರಿ ತಮ್ಮ ನೋವನ್ನ ತೋಡಿಕೊಂಡಿದ್ದು ಉಂಟು. ಈಗ ಬೇಸಿಗೆ, ಕೆಲ ಹೊಲಗಳಲ್ಲಿ ವಾಸ ಮಾಡುವ ರೈತರು ಮನೆಯಿಂದ ಹೊರ ಮಲಗುವುದು ಸಾಮಾನ್ಯ. ಕೆಲವರು ಗುಡಿಸಲಿನಲ್ಲಿ ವಾಸವಾಗಿದ್ದಾರೆ. ಸಂಜೆ ಯಾಗುತ್ತಿದ್ದಂತೆ ಮಕ್ಕಳನ್ನ ಮನೆಯಿಂದ ಹೊರ ಬಿಡಲಾಗದ ಪರಿಸ್ಥಿತಿ ಎದುರಾಗಿದೆ. ದನಕರು ಗಳನ್ನ ಮೇಯಿಸಲು ಹಿಂರಿಯುತ್ತಿದ್ದಾರೆ. 
ಹೀಗಿರುವಾಗ, ನಾಗರೀಕ ಬಂದೂಕು ತರಬೇತಿ ನೀಡಬೇಕೆಂದು ಹೆಚ್ಎಸ್. ಸೋಂಪೂರ್ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಸೋಮವಾರ ಫೆಬ್ರವರಿ 20 ರಂದು ಗದಗ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ತರಬೇತಿ ನಂತರ ಅರ್ಹರಿಗೆ ಬಂದೂಕು ಪರವಾನಿಗೆ ನೀಡಬೇಕೆಂದು ಹೆಚ್ ಎಸ್ ಸೋಂಪೂರ ಅವರು ಮನವಿ ಪಾತ್ರದಲ್ಲಿ ವಿನಂತಿ ಮಾಡಿದ್ದಾರೆ.
Post a Comment

Post a Comment