ಮುಂದಿನ ವರ್ಷದಿಂದ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವದಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶವಿದೆ ಎಂದು ಶಂಕರಪ್ಪ ರಾಮಪ್ಪ ಮ್ಯಾಗೇರಿ ಮತ್ತು ಶರಣಪ್ಪ ಕನ್ಯಾಳ ತಿಳಿಸಿದ್ದಾರೆ. ಕಾಲಕಾಲೇಶ್ವರ ಗ್ರಾಮದಲ್ಲಿ ಜರುಗಿದ ಮೈಲಾರ ಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ, ಮಾತನಾಡಿದ ಅವರು, ಇದೊಂದು ವಿಶಿಷ್ಟ ಜಾತ್ರೆಯಾಗಿದೆ. ಕಳೆದ ನಾಲ್ಕು ವರ್ಷದಿಂದ ನಿರಂತರವಾಗಿ ಜಾತ್ರೆ ನಡೆಯುತ್ತಲೇ ಇದೆ.
ಪ್ರತಿ ವರ್ಷದಂತೆ ಈ ವರ್ಷವೂ ದಕ್ಷಿಣ ಕಾಶಿ ಕಾಲಕಾಲೇಶ್ವರದಲ್ಲಿ ಮೈಲಾರ ಲಿಂಗೇಶ್ವರ ಜಾತ್ರಾ ಮಹೋತ್ಸ ಸಡಗರ ಸಂಭ್ರಮದಿಂದ ನಡೆಯಿತು. ಜನಸಂಖ್ಯಾವಾರು ಸಣ್ಣ ಗ್ರಾಮವಾದ್ರೂ, ಇಲ್ಲಿ ಕುರುಬರೇ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವುದು ವಿಶೇಷ. ಕಾಲಕಾಲೇಶ್ವರದಲ್ಲಿ ಹಬ್ಬ ಹರಿದಿನಗಳಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಕಾರ್ಯಗಳನ್ನ ಮಾಡುತ್ತಾರೆ. ಎಲ್ಲರೂ ಎಲ್ಲ ಕೆಲಸದಲ್ಲಿ ಭಾಗವಹಿಸುತ್ತಾರೆ.
ಕಾಲಕಾಲೇಶ್ವರ ಗ್ರಾಮದಲ್ಲಿ ಸರ್ವ ಸಮೂದಾಯದವರೂ ಒಗ್ಗಟ್ಟಾಗಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ಜರುಗಲಿ ಎಂದು ದೇವಸ್ಥಾನ ಧರ್ಮದರ್ಶಿಗಳಾದ ಯಶರಾಜ್ ಘೋರ್ಪಡೆ ಹೇಳಿದರು.
ದಕ್ಷಿಣ ಕಾಶಿ ಕಾಲಕಾಲೇಶ್ವರದಲ್ಲಿ ಇಂತಹ ಜಾತ್ರಾ ಮಹೋತ್ಸವ ನಡೆಯುವುದರಿಂದ ಪುಣ್ಯ ಕ್ಷೇತ್ರದ ವ್ಯಾಪ್ತಿ ಹೆಚ್ವಾಗಲಿದೆ ಎಂದು ಮುಖಂಡರಾದ ಶಶಿಧರ್ ಹೂಗಾರ್ ಹೇಳಿದರು.
ಬೆಳಗ್ಗೆಯಿಂದಲೇ ಮಹಿಳೆಯರು, ಯುವತಿಯರು ಮಕ್ಕಳು ಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಬಳಿಕ ಒಂದೆಡೆ ಸೇರಿ ಪೂಜಾ ಕೈಂಕರ್ಯ ನಡೆಸಿದರು.
ಈ ಜಾತ್ರೆ ಕಾಲಕಾಲೇಶ್ವರ ಗ್ರಾಮದ ಒಗ್ಗಟ್ಟನ್ನು ಪ್ರದರ್ಶಿಸಿದೆ.
ಶಂಕರಪ್ಪ ರಾಮಪ್ಪ ಮ್ಯಾಗೇರಿ, ಶರಣಪ್ಪ ಆರ್ ಕನ್ಯಾಳ್, ನೀಲಪ್ಪ ಎಂ. ಕೆಂಪನಾಳ್, ರುದ್ರಯ್ಯ ಗುರುಸ್ಥಲಮಠ, ಮಲ್ಲಯ್ಯಸ್ವಾಮಿ ಗುರುಸ್ಥಲಮಠ್, ಶರಣಪ್ಪ ಕ ಕೆಂಪನಾಳ್, ಆನಂದ್ ಭಾಂಡಗೆ, ಶಶಿಧರ್ ಹೂಗಾರ್, ಅಕ್ಷಯ್ ಚಿಲಝರಿ, ಮುತ್ತಣ್ಣ ತಳವಾರ್, ಕಳಕಪ್ಪ ಚಿಲಝರಿ, ಸಂಕಲ್ಪ ಬಾಗಲಿ, ವೀರೇಶ್ ರಾಠೋಡ್, ರಾಜೇಂದ್ರ ಹಿರೇಮಠ, ಮುತ್ತಪ್ಪ ಎಂ ಕನ್ಯಾಳ್, ಪ್ರಶಾಂತ್ ಚಿಲಝರಿ, ಬಾಲನಗೌಡ ಗೌಡರ್ ಸೇರಿದಂತೆ ಗ್ರಾಮದ ಗುರುಹಿರಿಯರ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆಯಿತು.
Post a Comment