-->
Bookmark

Gajendragad : ಕಾಂಗ್ರೆಸ್ ನಲ್ಲಿ ಉತ್ತಮ ಸ್ಥಾನಮಾನ ಕೈ ಬಿಡಲ್ಲ : ಸಿದ್ದಪ್ಪ ಬಂಡಿ

Gajendragad : ಕಾಂಗ್ರೆಸ್ ನಲ್ಲಿ ಉತ್ತಮ ಸ್ಥಾನಮಾನ ಕೈ ಬಿಡಲ್ಲ : ಸಿದ್ದಪ್ಪ ಬಂಡಿ 

ಗಜೇಂದ್ರಗಡ : (Feb_02_2024)

ನನಗೆ ಕಾಂಗ್ರೆಸ್ ನಲ್ಲಿ ಉತ್ತಮ ಸ್ಥಾನಮಾನ ಕೊಟ್ಟಿದ್ದಾರೆ. ಗೌರವನೂ ಇದೆ. ಹೀಗಾಗಿ, ಕಾಂಗ್ರೆಸ್ ಬಿಟ್ಟು ಹೋಗಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಸಿದ್ದಪ್ಪ ಬಂಡಿ ಹೇಳಿದ್ದಾರೆ. ಕಿರಾ ನ್ಯೂಸ್ ಕನ್ನಡದೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಬಿಟ್ಟು ಹೊಗೋ ವಿಚಾರ ಕನಸು ಮನಸಿನಲ್ಲೂ ಇಲ್ಲ. ಕಾಂಗ್ರೆಸ್ ನಲ್ಲೆ ಇರೋದು, ಕಾಂಗ್ರೆಸ್ ಶಾಸಕರು, ಕಾಂಗ್ರೆಸ್ ಧುರೀಣರು ನಮ್ಮನ್ನೆಲ್ಲ ಗೌರವಯುತವಾಗಿ ನೋಡ್ತಿದಾರೆ. ಸಾರ್ವಜನಿಕ ಸಮಸ್ಯೆಗಳನ್ನ ತಗೊಂಡು ಶಾಸಕರ ಬಳಿಗೆ ಹೋದರೇ, ಸ್ಪಂದಿಸುತ್ತಾರೆ ಎಂದು ಸ್ಪಷ್ಟಪಡಿಸಿದರು. 

ಮುಂಬರುವ ದಿನಗಳಲ್ಲಿ ಬಿಜೆಪಿಯಿಂದ ಆಹ್ವಾನ ಬಂದ್ರೆ  ನೀವು ಬಿಜೆಪಿಗೆ ಹೋಗುವ ಸಾಧ್ಯತೆ ಇದೆಯಾ ಸರ್ ಎಂದಾಗ ನಿರುತ್ಸಾಹದಿಂದಲೇ ಮಾತು ಆರಂಭಿಸಿದ ಅವರು, ಇಲ್ಬಿಡಿ ಸರ್. ಸ್ಥಳೀಯ ನಾಯಕರ ಸ್ಪಂದನೆ ಸರಿ ಇಲ್ಲ. ನಮ್ಮ ಮತ ಕ್ಷೇತ್ರದಷ್ಟೇ ಮಾತನಾಡುತ್ತೇನೆ. ಜಿಲ್ಲೆಯದ್ದಲ್ಲ ಎಂದು ಸಮಜಾಯಿಸಿ ಸಹ ಕೊಟ್ಟಿದ್ದಾರೆ. 

ಜೊತೆಗೆ ಸ್ಥಳೀಯ ಮಟ್ಟದಲ್ಲಿ ಸ್ಪಂದನೆ ಇಲ್ಲ. ಇದೇ ಕಾರಣಕ್ಕೆ ನಾನು ಬಿಜೆಪಿ ಬಿಟ್ಟು ಬಂದಿದ್ದೇನೆ. ಕಾರ್ಯಕರ್ತರ ಜೊತೆ ಸರಿಯಾದ ಸ್ಪಂದನೆ ಇಲ್ಲ. ತಮ್ಮದೆ ಆದ ಜಗತ್ತಿನಲ್ಲಿದ್ದಾರವ್ರು ಎಂದು ಸಿದ್ದಪ್ಪ ಬಂಡಿ ಹೇಳಿದರು. 

ಈ ಮಧ್ಯೆ, ಅವರ ಆಪ್ತ ವಲಯ ಸಹ ಸಿದ್ದಪ್ಪ ಬಂಡಿ ಅವರು ಬಿಜೆಪಿಗೆ ಹೋಗಲ್ಲ. 100% ಅಲ್ಲ, 500% ಹೋಗಲ್ಲ ಎಂದು ಕಿರಾ ನ್ಯೂಸ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.  

ಈ ಮೂಲಕ ಕಳೆದ ಹಲವು ದಿನಗಳಿಂದ ಕ್ಷೇತ್ರದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ವಿಷಯಕ್ಕೆ ತೆರೆ ಎಳೆದಿದ್ದಾರೆ.

ಜಗದೀಶ್ ಶೆಟ್ಟರ್ ಅವರು, ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಬಳಿಕ ಕೇಂದ್ರ ನಾಯಕರು, ರಾಷ್ಟ್ರೀಯ ನಾಯಕರು ನಮ್ಮನ್ನ ವಿಶ್ವಾಸಕ್ಕೆ ತೆಗೆದು ಕೊಂಡಿದ್ದಾರೆ. ಸ್ಥಳೀಯ ನಾಯಕರ ಹೇಳಿಕೆಗೆ ಮಹತ್ವ ಕೊಡುವ ಅಗತ್ಯ ವಿಲ್ಲ ಎಂದು ಹೇಳಿದ್ದರು. ಮಾಜಿ ಸಿಎಂ ಸಂಭಾವಿತ ರಾಜಕಾರಣಿ ಎಂದೆ ಹೆಸರಾಗಿರುವ ಜಗದೀಶ್ ಶೆಟ್ಟರ್ ಅವರ ಈ ಹೇಳಿಕೆ ಬಳಿಕ, ರೋಣ ಮತ ಕ್ಷೇತ್ರದಲ್ಲಿ ಸಿದ್ದಪ್ಪ ಬಂಡಿ ಕಾಂಗ್ರೆಸ್ ಬಿಟ್ಟು ಹೋಗುತ್ತಾರೆ ಎಂಬ ಚರ್ಚೆ ವ್ಯಾಪಕವಾಗಿತ್ತು.
Post a Comment

Post a Comment