-->
Bookmark

Hubballi : ಸದ್ದಿಲ್ಲದೆ ಸಿದ್ಧವಾಗುತ್ತಿದೆ ‘ಶರಣರ ಶಕ್ತಿ’ ಭಕ್ತಿ ಪ್ರಧಾನ ಚಲನಚಿತ್ರ

Hubballi : ಸದ್ದಿಲ್ಲದೆ ಸಿದ್ಧವಾಗುತ್ತಿದೆ ‘ಶರಣರ ಶಕ್ತಿ’ ಭಕ್ತಿ ಪ್ರಧಾನ ಚಲನಚಿತ್ರ

ಹುಬ್ಬಳ್ಳಿ :  (Feb_15_2024)
ಶ್ರೀಶಾ ಫಿಲ್ಮ್ ಹುಬ್ಬಳ್ಳಿ ಅರ್ಪಿಸುವ  ‘ಶರಣರ ಶಕ್ತಿ’ ತಡಿವ್ಯಾರ ನೋಡು ! - ಭಕ್ತಿ ಪ್ರಧಾನ ಕನ್ನಡ ಚಲನಚಿತ್ರವೊಂದು ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ,   ಡಬ್ಬಿಂಗ್ ಹಂತವನ್ನೂ ಮುಗಿಸಿದೆ.  
    ಮಿಶ್ರಕೋಟಿ, ಕಾಮಧೇನು, ಗಂಜಿಗಟ್ಟಿ, ಉಳವಿ ಸುತ್ತಮುತ್ತ ಸತತ ಚಿತ್ರೀಕರಣ ನಡೆಸಲಾಗಿದ್ದು, ೧೨ ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರನ್ನು ಒಮ್ಮೆ ಕಾಣುವುದೇ ಜೀವನದ ಗುರಿ ಎಂದುಕೊಂಡವರು ಸಾಕಷ್ಟು ಶರಣರು. ಇವರೆಲ್ಲರಿಗೂ ಸ್ಫೂರ್ತಿಯಾದ ಶಕ್ತಿಸ್ಥಳವೇ ಅನುಭವಮಂಟಪ. ಅಲ್ಲಿಗೆ ಎಲ್ಲರೂ ಯಾಕೆ ಬಂದರು ಎನ್ನುವುದೇ ಕಥೆಯ ಮುಖ್ಯ ಸಾರ. ನಂತರ ಬಸವಣ್ಣನವರು ಹರಳಯ್ಯ,ಮಧುವರಸರ ಮಕ್ಕಳ ಮದುವೆ, ವರ್ಣಸಂಕರ, ಗಡಿಪಾರು ಎಲ್ಲವನ್ನೂ ಕಥೆ ಹೊಂದಿದೆ. ಕಲ್ಯಾಣಕ್ರಾಂತಿಯ ನಂತರ ಶರಣರು ವಚನ ಸಾಹಿತ್ಯ ರಕ್ಷಣೆಗೆ ಪಟ್ಟ ಕಷ್ಟಗಳು ,ಹೋರಾಟಗಳು, ಚನ್ನಬಸವಣ್ಣ ಉಳವಿ ಕಡೆಗೆ ನಡೆದ ಪ್ರಸಂಗವನ್ನು ಇಲ್ಲಿ ತೋರಿಸಲಾಗಿದೆ, ೧೩೦ಕ್ಕೂ ಮಿಕ್ಕಿ   ಶರಣರ ಪಾತ್ರಗಳು ಇದರಲ್ಲಿದ್ದು ಉತ್ತರ ಕರ್ನಾಟಕದ ಕಲಾವಿದರೇ ಅಭಿನಯಿಸಿರುವ, ಅವರೇ ಧ್ವನಿ ಕೂಡ ನೀಡಿರುವ ಈ ಚಿತ್ರದಲ್ಲಿ ಜಗಜ್ಯೋತಿ ಬಸವಣ್ಣನವರಾಗಿ   ಮಂಜುನಾಥಗೌಡ್ರು ,   ಚನ್ನಬಸವಣ್ಣನವರಾಗಿ ರಂಜನ್‌ರಾಜ್, ಅಕ್ಕನಾಗಮ್ಮ ಪಾತ್ರದಲ್ಲಿ ಆರಾಧನಾ ಕುಲಕರ್ಣಿ, ಗಂಗಾಂಬಿಕೆಯಾಗಿ ಸಂಗೀತಾ ವಸಂತ, ನೀಲಾಂಬಿಕೆ ಅಮೃತಾ ಸವಡಿ ಜೋಶಿ, ಅಕ್ಕಮಹಾದೇವಿಯಾಗಿ ರಮ್ಯಾ ಗೌಡ್ರು, ಬಿಜ್ಜಳನಾಗಿ ರಾಘವೇಂದ್ರ ಕಬಾಡಿ , ಅಲ್ಲಮಪ್ರಭುವಾಗಿ ಮಂಜುನಾಥಯ್ಯ ಬಿ.ಎಮ್, ಸಿದ್ಧರಾಮರಾಗಿ ಸಚಿನ್ ಮಾಗಣಗೇರಿ ಮೊದಲಾದವರು ಮನೋಜ್ಞವಾಗಿ ಅಭಿನಯಿಸಿದ್ದಾರೆ…ಎಂದು ನಿರ್ದೇಶಕ ದಿಲೀಪ ಶರ್ಮ ತಿಳಿಸಿದ್ದಾರೆ.
      ಚಿತ್ರಕ್ಕೆ ಮುಂಜಾನೆ ಮಂಜು ಛಾಯಾಗ್ರಹಣ , ಕೆ.ಕಲ್ಯಾಣ ಸಾಹಿತ್ಯ , ವಿನುಮನಸು ಸಂಗೀತ, ಆರ್.ಮಹಾಂತೇಶ ಸಂಕಲನ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಪತ್ರಿಕಾ ಸಂಪರ್ಕ,  ದಿಲೀಪ್ ಶರ್ಮ ಚಿತ್ರಕಥೆ ,ಸಂಭಾಷಣೆ ಜೊತೆಗೆ ಎರಡು ಹಾಡುಗಳನ್ನು ಬರೆದಿದ್ದು ಜೊತೆಗೆ  ನಿರ್ದೇಶನ ಹೊಣೆ ಹೊತ್ತಿದ್ದಾರೆ. ಚಿತ್ರವನ್ನು ಶ್ರೀಮತಿ ಅರಾಧನಾ ಕುಲಕರ್ಣಿ ನಿರ್ಮಿಸುತ್ತಿದ್ದು ಮಾರ್ಚ ಕೊನೆವಾರದಲ್ಲಿ ಬಿಡುಗಡೆ ಮಾಡುವ ಬಗ್ಗೆ ತಯ್ಯಾರಿ ನಡೆದಿದೆ ಎಂದು ನಿರ್ಮಾಪಕಿ ಆರಾಧನಾ ತಿಳಿಸಿದ್ದಾರೆ. 
**
ವರದಿ
ಡಾ.ಪ್ರಭು ಗಂಜಿಹಾಳ
ಮೊ;೯೪೪೮೭೭೫೩೪೬
Post a Comment

Post a Comment