-->
Bookmark

Mantralaya : ಜ್ಞಾನಯಜ್ಞ ಹಾಗೂ ನಾದನಮನ ಸಾಂಸ್ಕೃತಿಕ ಕಾರ್ಯಕ್ರಮ

Mantralaya : ಜ್ಞಾನಯಜ್ಞ ಹಾಗೂ ನಾದನಮನ ಸಾಂಸ್ಕೃತಿಕ ಕಾರ್ಯಕ್ರಮ 
ಕಾರ್ಯಕ್ರಮದಲ್ಲಿ ಗಜೇಂದ್ರಗಡದ ಕೀರ್ತಿ ಹೆಚ್ಚಿಸಿದ ಶ್ರೀ ಆಂಜನೇಯ ಭಜನಾ ಮಂಡಳಿ ಸಾಧನೆ 
ಭಜನಾ ಮಂಡಳಿ ಶ್ರಮಕ್ಕೆ ತಕ್ಕ ಫಲ : ಹರಿದು ಬಂದ ಶುಭಾಶಯದ ಮಹಾಪೂರ 
ಮಂತ್ರಾಲಯ : 
ಶ್ರೀ ಆಂಜನೇಯ ಭಜನಾ ಮಂಡಳಿ ಕಳೆದ 19 ವರ್ಷದಿಂದ ನಿರಂತರ ಗಾಯಕರನ್ನ, ವಾದ್ಯ ನುಡಿಸುವ ಕಲಾವಿದರನ್ನ, ನೃತ್ಯ ಗಾರರನ್ನು produce ಮಾಡುವ Factory ಆಗಿದೆ.
ಗಜೇಂದ್ರಗಡದ  ಶ್ರೀ ಆಂಜನೇಯ ಭಜನಾ ಮಂಡಳಿ ಕೀರ್ತಿ ಪ್ರತಿ ವರ್ಷ ಹೆಚ್ಚುತ್ತಿದೆ.  ಅದಕ್ಕೆ ಮುಖ್ಯ ಕಾರಣ ಅದರ ಅಧ್ಯಕ್ಷರಾ ಹನುಮಂತ ಕೆಂಚಿ ಅವರು. 
ಮಾರ್ಚ್  ಏಳು ಮತ್ತು ಹತ್ತರಂದು ಮಂತ್ರಾಲಯದಲ್ಲಿ ಜ್ಞಾನಯಜ್ಞ ಹಾಗೂ ನಾದನಮನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಭಜನಾ ಮಂಡಳಿ ಸದಸ್ಯರು ಭಾಗವಹಿಸಿದ್ದರು.‌ ಇತಿಹಾಸದಲ್ಲೇ ಮೊದಲ ಬಾರಿಗೆ ಗಜೇಂದ್ರಗಡದ ಭಜನಾ ಮಂಡಳಿ ಸದಸ್ಯರಿಗೆ ಆಹ್ವಾನಿಸಿ,  ವೇದಿಕೆ ಕಲ್ಪಿಸಿದ್ದಾರೆ. ಇಂತಹ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು, ಶ್ರೀ ಆಂಜನೇಯ ಭಜನಾ ಮಂಡಳಿ ಮತ್ತು ಶ್ರೀ ಪದ್ಮಾವತಿ ಭಜನಾ ಮಂಡಳಿ... 
ಮಂತ್ರಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಯಕರಾದ ನಾಗರಾಜ್ ಹುಣಸಿಕಟ್ಟಿ ಹಾಗೂ ಕುಮಾರಿ ಕೀರ್ತನಾ ಜರತಾರಿ ಭಜನಾ ಕಾರ್ಯಕ್ರಮ ನೀಡಿದರು.
ಅವರಿಗೆ ಜೊತೆಯಾಗಿ ತಬಲಾ‌ ಸಾಥಿಯಾಗಿ ರಿತೇಶ್ ನಾವಡೆ, ಭೂಷಣ್ ಕರ್ಣೆ, ಹಾರ್ಮೋನಿಯಂ ಸಚಿನ್ ಬಿದರಳ್ಳಿ, ವಿಶ್ವನಾಥ ಮೇಟಿ, ಮತ್ತು ತಾಳ ಕಿರಣ್ ಬಳೋಟಗಿ ಸಾತ್ ನೀಡಿದರು.‌ 
ಇವರ ಭಜನೆ ಮತ್ತು ಕೀರ್ತನೆಯನ್ನ ನೋಡಿದ ಪ್ರೇಕ್ಷಕರು  ಮಂತ್ರಮುಗ್ದರಾದರು. ಕಾರ್ಯಕ್ರಮ ಯಶಸ್ವಿಯಾಯ್ತು. 
ಕಾರ್ಯಕ್ರಮದಲ್ಲಿ ಸಾಕ್ಷಾತ್ ರಾಘವೇಂದ್ರ ಸ್ವಾಮಿಯೇ ಶ್ರೀ ಆಂಜನೇಯ ಭಜನಾ ಮಂಡಳಿಗೆ ಆಹ್ವಸನಿಸಿದಂತೆ ಭಾಸವಾಯ್ತು ಎಂದು ಹನುಮಂತ ಕೆಂಚಿ ಕಿರಾ ನ್ಯೂಸ್ ಕನ್ನಡಕ್ಕೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಇತ್ತಿಚಿನ ದಿನಗಳಲ್ಲಿ ಆಧ್ಯಾತ್ಮಿಕದೆಡೆಗೆ ಯುವಕರ ಒಲಿಯುವುದು ಕಡಿಮೆ, ಹೀಗಿರುವಾಗ ನಮ್ಮ‌ ಭಜನಾ ಮಂಡಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ಯುವತಿಯರು ಇದ್ದಾರೆ. ಇದು ಸಂತಸದ ವಿಷಯ ಎಂದು ಹೇಳಿದರು.‌
ನಾಗರಾಜ್ ಮತ್ತು 
ಕೀರ್ತನಾ  ಈ ಇಬ್ಬರು ಪ್ರತಿಭೆಗಳಿಗೆ ಅವಕಾಶ ಸಿಗಲು ಮುಖ್ಯ ಕಾರಣ ಅಂದ್ರೆ, ಮಂತ್ರಾಲಯದ ಗುರು ಸಾರ್ವಭೌಮ ದಾಸ ಸಾಹಿತ್ಯ ಪ್ರೊಜೆಕ್ಟ್ ಅಧ್ಯಕ್ಷರಾದ ಕೆ. ಅಪ್ಪಣ್ಣಾಚಾರ್ ಅವರು. 
ಹನುಮಂತ ಕೆಂಚಿ ಅವರು ಮಂತ್ರಾಲಯ ವಿರಲಿ ಅಥವಾ ತಿರುಪತಿ ದೇವಸ್ಥಾನ ಇರಲಿ, ಅವಕಾಶ ವಿದ್ದಲ್ಲಿ ನಮಗೆ ತಿಳಿಸಿ ಎಂದು ದೇವಸ್ಥಾನದ ಆಡಳಿತ ಮಂಡಳಿಗೆ ತಿಳಿಸುತ್ತಾರೆ. ಅಷ್ಟೇ ಅಲ್ಲದೇ, ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಅವರು ವಿದ್ಯಾರ್ಥಿಗಳನ್ನ ತಯಾರು ಮಾಡುವ ವಿಧಾನದಿಂದಲೇ ವಿದ್ಯಾರ್ಥಿಗಳು Select ಆಗ್ತಾರೆ. 
ಜೊತೆಗೆ ಪ್ರತಿ ಶನಿವಾರ ಶ್ರೀ ಆಂಜನೇಯ ಭಜನಾ ಮಂಡಳಿ ಮತ್ತು ಪದ್ಮಾವತಿ ಭಜನಾ ಮಂಡಳಿ ಸದಸ್ಯರೆಲ್ಲರೂ ಒಂದೆಡೆ ಸೇರಿ, Practice ಮಾಡ್ತಾರೆ. ಕಲ್ಲನ್ನ ವಿಗ್ರಹಗಳನ್ನಾಗಿ ಮಾರ್ಪಡಿಸುತ್ತಾರೆ. ಸಂಪರ್ಕದಲ್ಲಿರುವ ದೇವಸ್ಥಾನದ ಆಡಳಿತ ಮಂಡಳಿಯವರೂ ಸಹ ಈ  ಭಜನಾ ಮಂಡಳಿ ಅವರನ್ನ ಅಷ್ಟೇ ಆದರ‌ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. 
ಕಳೆದ ಹಲವು ದಶಕಗಳಿಂದ ಗಜೇಂದ್ರಗಡದ ಭಜನಾ ಮಂಡಳಿಗೆ ಅವಕಾಶವೇ ಸಿಕ್ಕಿರಲಿಲ್ಲ. ಈಗ ಅವರಿಗೆ ಅವಕಾಶ ಸಿಕ್ಕಿದೆ‌ ಎಂದರೆ, ಶ್ರೀ ಹನುಮಂತ ಕೆಂಚಿ ಅವರ ಶ್ರಮವನ್ನ ಪರಿಗಣಿಸಲೇಬೇಕು.
ಒಂದೆ ಕೆಲಸ ಹಲವು ವರ್ಷ ಮಾಡಿದರೇ, ಕಾಲ ಉರುಳಿದಂತೆ ಉತ್ಸಾಹ ಕಡಿಮೆಯಾಗುತ್ತದೆ. ಆದ್ರೆ,  ಕೆಂಚಿ ಅವರು ಮಾತ್ರ ಯುವಕರನ್ನು ನಾಚಿಸುವ ಉತ್ಸಾಹ ಅವರಲ್ಲಿದೆ. ಪುಟ್ಟ ಮಕ್ಕಳಿಂದ‌ ಹಿಡಿದು ದೊಡ್ಡವರ ವರೆಗೂ ಎಲ್ಲರೂ ಭಜನಾ ಮಂಡಳಿಯಲ್ಲಿದ್ದಾರೆ. ಆದರೇ, ಎಲ್ಲರೊಂದಿಗೂ ಅಷ್ಟೇ ಆದರತೆಯಿಂದಿರುತ್ತಾರೆ ಹನುಮಂತ ಕೆಂಚಿ ದಂಪತಿಗಳು...
ಹನುಮಂತ ಕೆಂಚಿ ಅವರು ವಿದ್ಯಾರ್ಥಿಗಳನ್ನ ರೂಪಿಸಿದರೇ, ತಾಯಿ ಪ್ರೀತಿಯನ್ನ ಅವರ ಧರ್ಮ ಪತ್ನಿ ಗೌರಿ ಕೆಂಚಿ ಅವರು ಊಣ ಬಡಿಸುತ್ತಾರೆ.
ಹೀಗೆ ಅವರ ಪರಿವಾರ ಹಲವು ಪ್ರತಿಭೆಗಳನ್ನ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ.  ಗಜೇಂದ್ರಗಡದ ಕೀರ್ತಿ ಸದಾ ಹೆಚ್ಚಲಿ ಎಂದು ಶುಭ ಹಾರೈಸೋಣ...
Post a Comment

Post a Comment