-->
Bookmark

Gajendragad : ಕಾಲಕಾಲೇಶ್ವರ ಸರ್ಕಾರಿ ಶಾಲೆಗೆ ಬೇಕಿದೆ ಶಾಶ್ವತ ಪರಿಹಾರ : ಗ್ರಾಮಸ್ಥರು

Gajendragad : ಕಾಲಕಾಲೇಶ್ವರ ಸರ್ಕಾರಿ ಶಾಲೆಗೆ ಬೇಕಿದೆ ಶಾಶ್ವತ ಪರಿಹಾರ : ಗ್ರಾಮಸ್ಥರು 
ಗಜೇಂದ್ರಗಡ : (Jul_04_2024)

ಕಾಲಕಾಲೇಶ್ವರ ಶಾಲೆಯಲ್ಲಿ ಮಗುವಿಗೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಕಿ 
ಆರ್. ವ್ಹಿ ಬದಾಮಿ ಅವರಿಗೆ ನೊಟೀಸ್ ನೀಡಿದ್ದಾರೆ. 

ಆದ್ರೆ, ಈ ಹಿಂದೆ ಈ‌ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿತ್ತು. ಈ‌ಮಧ್ಯೆ, ಕಠಾರಿ ಮತ್ತು ಆರ್. ವಿ. ಬದಾಮಿ ಅವರು ಯಾವಾಗ ಇಲ್ಲಿ ವಕ್ಕರಿಸಿದ್ರೋ, ಈ ಶಾಲೆಯ ಹಣೆ ಬರಹವೇ ಬದಲಾಯಿಸಿದ್ದಾರೆ. ಸರಿಯಾರಿ ಬರೆಯಲು ಬಾರದ, ತಮ್ಮ ಮಾನಸಿಕ ಒತ್ತಡವನ್ನ ಮಕ್ಕಳ ಮೇಲೆ‌ ಹೇರುವ ಇಂತಹ ಶಿಕ್ಷಕರು ಸ್ವಯಂ ನಿವೃತ್ತಿ ಪಡೆದು ಮನೆಯಲ್ಲಿರುವುದು ಲೇಸು. 

ಈ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರು ಸಹ ಹಾಗೆ ಅನಕ್ಷರಸ್ಥರಿದ್ದಾರೆ. ಕಳೆದ ಹಕವು ವರ್ಷಗಳಿಂದ ಈ ಶಾಲೆಯ ಬಗ್ಗೆ  ಕೇಳುತ್ತಲೇ ಬಂದಿದ್ದೇವೆ. 

ಈ ಇಬ್ಬರು ಶಿಕ್ಷಕರು ಕಾಲಕಾಲೇಶ್ವರದಲ್ಲಿ ಹುಡುಗರಿಗೆ ಕಲಿಯುವ ವಾತಾವರಣ ಹದಗೆಡಿಸುತ್ತಿದ್ದಾರೆ. ಇವರ ಮುಗ್ದತೆಯನ್ನ ಊರಿನ ಕೆಲ ಮುಖಂಡರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ ಎಂಬ ಆರೋಪವೂ ಇದೆ. ಈ ಮಧ್ಯೆ, ಕಾಲಕಾಲೇಶ್ವರ ಗ್ರಾಮದವರಿಗೆ ಈ ಶಾಲೆ ಉಳಿಸಿಕೊಳ್ಳುವ ಇರಾದೆ ಕೇವಲ ಬಾಯಿ ಮಾತಿಗೆ ಸೀಮಿತವಾದಂತಿದೆ. ಇಲ್ಲಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಬದಲು ಶಾಶ್ವತ ಪರಿಹಾರ ಹುಡುಕಬೇಕಿದೆ. 

ಶಾಲೆಯಲ್ಲಿ ತಯಾರಿಸುವ ಊಟದಲ್ಲಿ ಅವ್ಯವಹಾರ, ಶಾಲೆಗೆ ನೀಡುವ ಅಡುಗೆ ಸಿಲಿಂಡರ್ ಪ್ರತಿಷ್ಠಿತ ರಾಜಕಾರಣಿಗಳ ಮನೆಗೆ ಒಯ್ಯುವ ಆರೋಪಗಳು ಇಲ್ಲಿವೆ. ಈ ಶಾಲೆಯ ವ್ಯವಸ್ಥೆ ಸರಿ ಇಲ್ಲದ ಕಾರಣ, ತಮ್ಮ ತಮ್ಮ‌ಮನೆಯ ಬೇಳೆ ಬೆಯಿಕೊಳ್ಳುವವರ ಸಂಖ್ಯೆಗೆನೂ ಕಡಿಮೆ ಇಲ್ಲ ಎಂಬುದು ಜಗಜ್ಜಾಹಿರವಾಗಿದೆ.

ಈ ಹಿಂದಿನ ಎಸ್.ಡಿ.ಎಂ.ಸಿ ಸದಸ್ಯರು ತಮಗೆ ಬೇಕಾದಂತೆ ಪರಿಸ್ಥಿತಿ ಹೊಂದಿಸಿಕೊಳ್ಳುತ್ತಾರೆ. ಕಳೆದ ಸಾಲಿಗಿಂತ ಈ ವರ್ಷ ವಿದ್ಯಾರ್ಥಿಗಳ ಸಂಖ್ಯೆ ತುಸು ಹೆಚ್ಚಾಗಿದೆ. ಈಗಲಾದರೂ, ಅಧಿಕಾರಿಗಳು ಶಾಶ್ವತ ಪರಿಹಾರ ಕಂಡುಕೊಳ್ಳುತ್ತಾರೋ ಅಥವಾ ತಮಗೆ ಬೇಡವಾದ ಕೂಸು ಎಂದು ಜಾರಿಕೊಳ್ಳುವ ಕುರುಡು ನಡೆ ಅನುಸರಿಸುತ್ತಾರೋ ಕಾದು ನೋಡ‌ಬೇಕಿದೆ.
Post a Comment

Post a Comment