ರಾಜ್ಯದಲ್ಲಿ ಮುಸ್ಲೀಂಮರ ಬಗ್ಗೆ ಅವಹೇಳನ ಮಾಡುವ ಮಠಗಳ ಮಧ್ಯೆ, ಮುಸ್ಲೀಂ ಸಮಾಜದ ಧರ್ಮಗುರುಗಳ ಮನೆಗೆ ಹಾಲಕೆರೆಯ ಶ್ರೀಮಠದ ಮ.ನಿ.ಪ್ರ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ತೆರಳಿದರು. ತೆರಳಿ, ಪಟ್ಟಣದಲ್ಲಿ ನಡೆಯುತ್ತಿರುವ ಬಸವ ಪುರಾಣಕ್ಕೆ ಆಹ್ವಾನಿಸಿದರು. ಅಲ್ಲದೇ, ಪಟ್ಟಣದಲ್ಲಿ ಪಾದಯಾತ್ರೆ ನಡೆಸಿದರು. ಪ್ರಮುಖ ಬೀದಿಗಳಲ್ಲಿ ರಂಗೋಲಿ ಬಿಡಿಸಿ, ಶ್ರೀಗಳನ್ನ ಆಹ್ವಾನಿಸಿದರು. ಒಂದು ತಿಂಗಳುಗಳ ಕಾಲ ನಡೆಯುವ ಪುರಾಣದ ಗತ ವೈಭವ ನೋಡಲು ಎರಡು ಕಣ್ಣುಗಳು ಸಾಲದು. ಇಂತಹ ಕಣ್ಮನ ಸೆಳೆಯುವ ಧಾರ್ಮಿಕ ಕಾರ್ಯಕ್ರಮ ಹಿಂದೆಂದು ನೋಡಲಾಗಿಲ್ಲ ಎಂಬ ಅಭ್ರಿಪ್ರಾಯವನ್ನ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಇನ್ನೂ, ಹಾಲಕೆರೆಯ ಶ್ರೀ ಮಠವೂ, ಅಕ್ಷರ ದಾಸೋಹದ ಜೊತೆಗೆ ಬಾಂಧವ್ಯ ಬೆಸೆಯುವುದನ್ನ, ಸಮಾಜದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳುವುದನ್ನ, ರಾಜ್ಯದ ಇತರೇ ಮಠದ ಪೀಠಧಿಪತಿಗಳಿಗೆ ಮತ್ತು ದೇಶದಕ್ಕೆ ಮಾದರಿಯಾಗುವ ಕಾರ್ಯ ಮಾಡುತ್ತಿರುವ ಹಾಲಕೆರೆ ಮಠಕ್ಕೆ ಶತಕೋಟಿ ನಮನಗಳು...
ಇವನಾರವ, ಇವನಾರವ,
ಇವನಾರವನೆಂದೆನಿಸದಿರಯ್ಯಾ
ಇವ ನಮ್ಮವ, ಇವ ನಮ್ಮವ,
ಇವನಮ್ಮವನೆಂದೆನಿಸಯ್ಯಾ.
ಕೂಡಲಸಂಗಮದೇವಾ
ನಿಮ್ಮ ಮನೆಯ ಮಗನೆಂದೆನಿಸಯ್ಯಾ.
ಈ ವಚನಕ್ಕೆ ಮತ್ತೊಂದು ಹೆಸರೇ, ಹಾಲಕೆರೆಮಠ ಎಂದರೆ ತಪ್ಪಾಗಲಾರದು...
ಕೃಷ್ಣ ರಾಠೋಡ್
ಸಂಪಾದಕರು,
ಕಿರಾ ನ್ಯೂಸ್ ಕನ್ನಡ,
ಗಜೇಂದ್ರಗಡ.
Post a Comment