ಗಜೇಂದ್ರಗಡ : (Apr_25_2025)
ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದಿರುವ ಉಗ್ರರ ದಾಳಿ ಅತ್ಯಂತ ಖಂಡನೀಯವಾಗಿದ್ದು, ಭಾರತ ನಿಶ್ಚಿತವಾಗಿ ಇದಕ್ಕೆ ತಕ್ಕ ಉತ್ತರ ನೀಡಲಿದೆ ಎಂದು ಜೆಡಿಎಸ್ ಗದಗ ಜಿಲ್ಲಾಧ್ಯಕ್ಷ ಮಕ್ತುಮಸಾಬ್ ಮುಧೋಳ್ ಹೇಳಿದ್ದಾರೆ.
ಗಜೇಂದ್ರಗಡದಲ್ಲಿ ಮಾತನಾಡಿದ ಅವರು,
ಉಗ್ರರ ಈ ಅಮಾನುಷ ದಾಳಿಯಲ್ಲಿ ಮೃತರಾದ ಅಮಾಯಕ ಪ್ರವಾಸಿಗರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದರು. ಮೃತರ ಕುಟುಂಬಗಳ ಈ ಸಂಕಷ್ಟದ ಸಮಯದಲ್ಲಿ ಇಡೀ ದೇಶವೇ ನಿಮ್ಮ ಜೊತೆ ಇರಲಿದೆ. "ಪಾಪಿ"ಸ್ತಾನದ ಕೃತ್ಯ ಈಡಿ ವಿಶ್ವಕ್ಕೆ ತೋರಿಸುವ ಅಗತ್ಯ ಇದೆ. ವಿಶ್ವದ ರಾಷ್ಟ್ರಗಳಿಂದ ಅದು ಈಗಾಗಲೇ ಭಯೋತ್ಪಾದಕ ದೇಶವೆಂಬ ಬಿರುದು ಪಡೆದುಕೊಂಡಿದೆ. ಭಾರತದ ಶಕ್ತಿಯ ಬಗ್ಗೆ ಪಾಕಿಸ್ತಾನಕ್ಕೆ ಅರಿವಿಲ್ಲ ಅನಿಸುತ್ತದೆ. ಈಗ ಭಾರತ ಪ್ರತಿ ದಾಳಿ ಮಾಡಲಿದೆ. ಭಾತರ ಒಂದು ರಾಷ್ಟ್ರ, ನಾವೆಲ್ಲ ಒಂದು. ದೇಶದಲ್ಲಿ ಭಯೋತ್ಪಾದಕ ದಾಳಿ ಸಹಿಸಲಾಗದು ಎಂದು ಮಕ್ತುಮಸಾಬ್ ಮುಧೋಳ್ ಸ್ಪಷ್ಟಪಡಿಸಿದರು.
2019ರಲ್ಲಿ ಪುಲ್ವಾಮಾ ದಾಳಿಯ ನಂತರ ಕಣಿವೆಯಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ.
Post a Comment