-->
Bookmark

Gajendragad : ಬಿರುಗಾಳಿ ಸಹಿತ ಮಳೆಗೆ ಹಾರಿಹೋದ ಮನೆ ಮೇಲ್ಚಾವಣಿ, ಲಕ್ಷಾಂತರ ರೂಪಾಯಿ ಬೆಳೆ ನಾಶ

Gajendragad : ಬಿರುಗಾಳಿ ಸಹಿತ ಮಳೆಗೆ ಹಾರಿಹೋದ ಮನೆ ಮೇಲ್ಚಾವಣಿ, ಲಕ್ಷಾಂತರ ರೂಪಾಯಿ ಬೆಳೆ ನಾಶ 

ಗಜೇಂದ್ರಗಡ : (Apr_28_2025)

ಜೆಡಿಎಸ್ ಗದಗ ಜಿಲ್ಲಾಧ್ಯಕ್ಷ ಮಕ್ತುಮಸಾಬ್ ಮುಧೋಳ್ ಅವರ ತೋಟದ ಮನೆ ಮಳೆಗೆ ಆಹುತಿಯಾಗಿದೆ. ಗುಡುಗು_ಸಿಡಿಲಿನೊಂದಿಗೆ ಸುರಿದ ಧಾರಾಕಾರ ಮಳೆ ಮತ್ತು ಬಿರುಗಾಳಿಗೆ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ಇತ್ತಿಚೆಗೆ ಹೊಲದಲ್ಲಿ ಮನೆ ಇರಲಿ, ಕೆಲಸಗಾರರಿಗೆ ಮತ್ತು ನಮಗೂ ಅನುಕೂಲವಾಗಲಿ ಎಂಬ ಕಾರಣಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಮನೆ ಮಾಡಿದ್ವಿ. ಮಳೆಗೆ ಮನೆಗೆ ಹಾನಿಯಾಗಿದ್ದು, ನೋವುಂಟಾಗಿದೆ ಎಂದು ಮಕ್ತುಮಸಾಬ್ ಮುಧೋಳ್ ತಮ್ಮ ನೋವನ್ನ ಹಂಚಿಕೊಂಡರು. 

ಇನ್ನೂ, ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಪಪ್ಪಾಯ ಸಹ ಸಂಪೂರ್ಣ ನಾಶವಾಗಿದೆ ಎಂದು ತಮ್ಮ ಅಳಲನ್ನ ತೋಡಿಕೊಂಡರು. ಅಂದಾಜು ನಾಲ್ಕೈದು ಲಕ್ಷಯಾಗಿದೆ ಎಂದು ಹೇಳಿದ್ದಾರೆ. 

ಸರ್ಕಾರದಿಂದ ಅನುದಾನದ ನಿರೀಕ್ಷೆಯಲ್ಲಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ, ಪರಿಹಾರ ಕೊಡಿಸಿ ಎಂದು ಮಕ್ತುಮಸಾಬ್ ಮುಧೋಳ್ ಮನವಿ ಮಾಡಿದ್ದಾರೆ. 

ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ ಹೊಲ ಇದಾಗಿದೆ.
Post a Comment

Post a Comment