ಗಜೇಂದ್ರಗಡ : (May_08_2025)
ಪಹಲ್ಲಾಮ್‌ನಲ್ಲಿ ಭಾರತೀಯ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಗೆ 'ಆಪರೇಷನ್ ಸಿಂಧೂರ'ದ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ ಭಾರತ. ಬುಧವಾರ ಅಂದರೆ, ಮೇ 7ರ ನಸುಕಿನ ವೇಳೆ ಕ್ಷಿಪಣಿಗಳ ಮೂಲಕ ಸೇನೆಯು ಈ ದಾಳಿ ನಡೆಸಿತ್ತು. ಭಯೋತ್ಪಾದಕರಿಗೆ ಭಾರತ ಸಿಂಹ ಸ್ವಪ್ನವಾಗಿ ಕಾಡಲಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಜಯಕರ್ನಾಟಕ ಸಂಘಟನೆ ಗದಗ ಜಿಲ್ಲಾಧ್ಯಕ್ಷ ರಫೀಕ್ ತೋರಗಲ್ಲ ಹೇಳಿದ್ದಾರೆ.
ಭದ್ರತಾ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಭಯೋತ್ಪಾದಕರಿಗೆ ಪ್ರಚೋದನೆ, ಕುಮ್ಮಕ್ಕು ನೀಡುವವರಿಗೆ ಅವರ ಗಡಿಯೋಳಗೆ ನುಗ್ಗಿ ಹೊಡೆದುರುಳಿಸುವ ಸಾಮರ್ಥ್ಯ ಭಾರತದ್ದಾಗಿದೆ. ಭಾರತ ನಡೆಸಿದ ದಾಳಿಯಲ್ಲಿ
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಾದ್ಯಂತ ಲಷ್ಕರ್-ಎ-ತಯಬಾ ಅಂದ್ರೆ ಎಲ್‌ಇಟಿ ಮತ್ತು ಜೈಶ್-ಎ-ಮೊಹಮ್ಮದ್ ಅಂದ್ರೆ ಜೆಇಎಂ ಉಗ್ರ ಸಂಘಟನೆಗಳ ನೆಲೆಗಳನ್ನು ಧ್ವಂಸ ಮಾಡಿ, ಭಯೋತ್ಪಾದಕರ 9 ನೆಲೆಗಳ ಮೇಲೆ ದಾಳಿ ನಡೆದಿದ್ದು, ನಮ್ಮ ಸೇನೆಗೆ ಸಲ್ಲುವ ಗೌರವ. ನಮ್ಮಸೇನೆಯ ಸಾಧನೆ ಎಷ್ಟು ಕೊಂಡಾಡಿದರೂ ಸಾಲದು ಎಂದು ರಫೀಕ್ ತೋರಗಲ್ಲ ಹೇಳಿದ್ದಾರೆ.
Post a Comment