ಗಂಗಾವತಿ : (19_May_2025)
ರಾಜ್ಯವೇ ಬೆಚ್ಚಿ ಬೀಳಿಸಿರುವ ಖೋಟಾನೋಟು ಚಲಾವಣೆ ಮಾಡಿದಾಗ ಐವರು ಆರೋಪಿತರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ವ್ಯಕ್ತಿಯೂ ಇದರಲ್ಲಿ ಶಾಮಿಲಾಗಿರುವುದು ಬೆಳಕಿಗೆ ಬಂದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ಬಾರ & ರೆಸ್ಟೊರೆಂಟ್ ನಲ್ಲಿ ನಕಲಿ ನೋಟು ಚಲಾಯಿಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿ, ತನಿಖೆ ನಡೆಸಿದಾಗ ಐವರು ಸಂಶಯಾಸ್ಪದ ವ್ಯಕ್ತಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಹೊಸಪೇಟೆಯ 33 ವರ್ಷದ ಖಲಂದರ್ ಖಾನ್, ಸಂಡೂರಿನ 56 ವರ್ಷದ ಬಿ. ನೂರಮುಸ್ತಫ ಖಾಜಾ ಅಮೀನಸಾಬ್, ಗದಗ ಜಿಲ್ಲೆಯ ಗಜೇಂದ್ರಗಡದ 43 ವರ್ಷದ ವಿರೇಶ್ ನಾರಾಯಣಪ್ಪ ಸಿಲವೇರಿ, ಬಾಗಲಕೋಟೆ ಜಿಲ್ಲೆಯ ಕೆರೂರು ಗ್ರಾಮದ 43 ವರ್ಷದ ಸರ್ಫರಾಜ್ ಮಹಮ್ಮದ್ ಕಲಾದಗಿ, ಮತ್ತು 36 ವರ್ಷದ ಅಬ್ದುಲ್ ರಜಾಕ್ ತಂದೆ ಹುಸೇನಸಾಬ್ ನದಾಫ್ ಬಿಂಕದಕಟ್ಟೆ ಗ್ರಾಮದವರು ಎಂದು ಗುರುತಿಸಲಾಗಿದೆ.
ಈ ಆರೋಪಿತರನ್ನ ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ಖೋಟಾ ನೋಟು ಕೃತ್ಯವನ್ನ ಒಪ್ಪಿಕೊಂಡಿದ್ದು, 78500 ಮೌಲ್ಯದ 500 ಮುಖ ಬೆಲೆಯ 157 ಖೋಟಾ ನೋಟುಗಳು ಸಿಕ್ಕಿವೆ. ಜೊತೆಗೆ 36500 ಮುಖಬೆಲೆಯ ನೈಜ ನೋಟುಗಳು ಪತ್ತೆಯಾಗಿವೆ. ಒಂದು ಮಹಿಂದ್ರಾ ಕಾರ್, ಒಂದು ಪಲ್ಸರ್ ಬೈಕ್, 5 ಮೊಬೈಲ್ ಗಳನ್ನ ವಶಕ್ಕೆ ಪಡೆಯಲಾಗಿದೆ. ಖೋಟಾ ನೋಟು ಚಲಾವಣೆ ಮಾಡುತ್ತಿರುವ ಜಾಲ ಕೃತ್ಯಕ್ಕೆ ಬಳಸಿದ ಸಾಧನ ಸಾಮಗ್ರಿಗಳ ಪತ್ತೆ ಕಾರ್ಯ ಜಾರಿಯಲ್ಲಿರುತ್ತದೆ ಎಂದು ಕೊಪ್ಪಳ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಹೆಮಂತ್ ಕುಮಾರ್ ಆರ್ ಮಾಹಿತಿ ನೀಡಿದ್ದಾರೆ.
ಇನ್ನೂ, ಹೇಮಂತಕುಮಾರ್ ಆರ್ ಅವರೊಂದಿಗೆ ಗಂಗಾವತಿ ಡಿಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್, ಮಾರ್ಗದರ್ಶನದಲ್ಲಿ ಗಂಗಾವತಿ ನಗರ ಠಾಣೆ ಪಿಐ ಪ್ರಕಾಶ್ ಮಾಳಿ, ಮತ್ತು ಹೆಚ್ ಸಿ, ಸಿಬ್ಬಂದಿಗಳಾದ ಚಿರಂಜಿವಿ, ವಿಶ್ವನಾಥ್, ಮರಿಶಾಂತಗೌಡ, ರಾಘವೇಂದ್ರ, ಸುಭಾಷ್ ಮತ್ತು ಪಿಸಿ ರವರಾದ ಗ್ಯಾನಪ್ಪ, ಮೈಲಾರಪ್ಪ, ವಿಶ್ವಾನಾಥ್, ದುರುಗಪ್ಪ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು ಎಂದು ಪ್ರಕಟಣೆ ಹೊರಡಿಸಿದ್ದಾರೆ.
Post a Comment