-->
Bookmark

Gajendragad : ಸಿಬಿಎಸ್ಈ ಶಾಲೆ ಹತ್ತನೇ ತರಗತಿ ವಿದ್ಯಾರ್ಥಿಗಳ ಉತ್ತಮ ಸಾಧನೆ

Gajendragad : ಸಿಬಿಎಸ್ಈ ಶಾಲೆ ಹತ್ತನೇ ತರಗತಿ ವಿದ್ಯಾರ್ಥಿಗಳ ಉತ್ತಮ ಸಾಧನೆ

ಗಜೇಂದ್ರಗಡ : (May_14_2024)
ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಜಗದ್ಗುರು ತೋಂಟದಾರ್ಯ ಸಿ ಬಿ ಎಸ್ ಈ ಶಾಲೆ ಹತ್ತನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ.

ಶಾಲೆಗೆ ಪ್ರಥಮ ಸ್ಥಾನವನ್ನು ಕುಮಾರಿ. ಅದಿತಿ ವಿಜಯ್ ಪಾಟೀಲ್ (87.00%) , ದ್ವಿತೀಯ ಸ್ಥಾನವನ್ನು ತಬಸ್ಸುಮ್ ರಜಾಕಸಾಬ್ ಹುನಗುಂದ (85.80%) ಹಾಗೂ ತೃತೀಯ ಸ್ಥಾನವನ್ನು ಅಂಕಿತ್ ಆದಪ್ಪಾ ಬುದಿಹಾಳ ( 82.40%) ಮತ್ತು ಸಂಜಯ್ ಕೆ ರಾಜುರ (82.40%) ಗಳಿಸಿ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.
ಪರೀಕ್ಷೆಗೆ ಹಾಜರಾದ ಒಟ್ಟು 90 ವಿದ್ಯಾರ್ಥಿಗಳಲ್ಲಿ 18 ಡಿಸ್ಟಿಂಕ್ಷನ್, 20 ಪ್ರಥಮ ಶ್ರೇಣಿ, 35 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶಾಲೆಯ ಒಟ್ಟು ಫಲಿತಾಂಶ 99% ರಷ್ಟಾಗಿದೆ.
ಸಾಧನೆಗೈದ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಶ್ರೀ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರೊ. ಶಿವಾನಂದ ಪಟ್ಟಣಶೆಟ್ಟರ್, ಶಾಲೆಯ ಪ್ರಾಚಾರ್ಯರು ಹಾಗೂ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರಾದ ಶಿವಕುಮಾರ ಕೋಶ್ಗಿ, ಮಹಾಂತೇಶ ಬೀಜಕಲ್, ಪ್ರವೀಣ್ ಹೊಸಮನಿ, ಲಕ್ಷ್ಮಿ ಒಡ್ಸುಮಠ, ವೀರೇಶ್ ಅಂಗಡಿ, ಶಿವಕುಮಾರ ಹಿರೇಮಠ, ಗುರುರಾಜ ಜಿ ಎಚ್, ಪ್ರಶಾಂತ್ ಎಚ್,ಶಾರದಾ ಅಂಬೋರೆ, ನಾಗರತ್ನ ಕಡ್ಡಿ ,ಸುನಿಲಶೆಟ್ಟಿ ಯಾವಗಲ್, ಮಲ್ಲನಗೌಡ ಗೌಡರ್, ಶಿವಗಂಗಾ ಅಂಗಡಿ, ಈರಣ್ಣ ಮಲಕನ್ನವರ್ ಹಾಗೂ ಶರಣಪ್ಪ ಕುಂಬಾರ್ ಮತ್ತು ಮೇಲ್ವಿಚಾರಕರಾದ ಶರಣು ಅಂಗಡಿ ಹಾಗೂ ವ್ಯವಸ್ಥಾಪಕರಾದ ಅಶೋಕ್ ಅಂಗಡಿ ಮತ್ತು ಭೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.
Post a Comment

Post a Comment