-->
Bookmark

Gajendragad : ಪ್ರಪಂಚದ ಎಲ್ಲಾ ಸಾಹಿತ್ಯದ ಮೂಲಬೇರು ಜನಪದ ಸಾಹಿತ್ಯ : ಡಾ. ಮಹಾಂತೇಶ್ ನೆಲಗನಿ

Gajendragad : ಪ್ರಪಂಚದ ಎಲ್ಲಾ ಸಾಹಿತ್ಯದ ಮೂಲಬೇರು ಜನಪದ ಸಾಹಿತ್ಯ : ಡಾ. ಮಹಾಂತೇಶ್ ನೆಲಗನಿ

ಗಜೇಂದ್ರಗಡ : (May_16_2025)
ಪ್ರಪಂಚದ ಎಲ್ಲಾ ಸಾಹಿತ್ಯಕ್ಕೂ ಜನಪದ ಸಾಹಿತ್ಯವೇ ಮೂಲಬೇರು ಎಂದು ಕೊಪ್ಪಳದ ಸರ್ಕಾರಿ ಪದವಿ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಡಾ. ಮಹಾಂತೇಶ್ ನೆಲಗಣಿ ಹೇಳಿದರು. ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಎಸ್ ಎಂ ಭೂಮರಡ್ಡಿ ಕಲಾ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಜಾನಪದ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದ ಅವರು, ಪ್ರಪಂಚದ ಎಲ್ಲಾ ಸಾಹಿತ್ಯಕ್ಕೂ ಜನಪದ ಸಾಹಿತ್ಯವೇ ಮೂಲಭಾಗವಾಗಿದ್ದು, ಜನಪದ ಸಾಹಿತ್ಯವು ಇಂದಿನ ಯುವ ಪೀಳಿಗೆಗೆ ಅವಶ್ಯವಾಗಿದೆ ಎಂದರು. ಉಡುಗೆ, ತೊಡುಗೆ, ಆಹಾರ ಕ್ರಮ, ನೀತಿ, ಸಂಪ್ರದಾಯ, ಪರಂಪರೆ, ಹಾಡು, ಕಥೆ, ಕವನ ಇವೆಲ್ಲವುಗಳ ಸಮಾಗಮವಾಗಿರುವ ಜನಪದ ಸಾಹಿತ್ಯವು, ಇಂದಿನ ಯುವ ಜನಾಂಗದಿಂದ ದೂರ ಸರಿಯುತ್ತಿರುವುದು ದುರಂತವೇ ಸರಿ ಎಂದು ಅಭಿಪ್ರಾಯ ಪಟ್ಟರು. 

ಜೊತೆಗೆ ಕನ್ನಡ ನಾಡಿನ ವೈಶಿಷ್ಟ್ಯ ಪೂರ್ಣವಾದ ಜನಪದ ಸಾಹಿತ್ಯವನ್ನು ಅಂದಿನ ಆಂಗ್ಲರ ಗವರ್ನರ್ ಜನರಲ್ ಆಗಿದ್ದ, ಜೆ ಎಫ್ ಪ್ಲೀಟ್ ಅವರು ಸಂಗ್ರಹಿಸುವ ಮೊದಲ ಪ್ರಯತ್ನವನ್ನು ಮಾಡಿದರು ಎಂದು ಇತಿಹಾಸವನ್ನ ಮೆಲುಕು ಹಾಕಿದರು. 

ಜನಪದ ಸಾಹಿತ್ಯವು ಜನರ ಮನಸ್ಸಿನ ನೋವು ನಲಿವು, ಎಲ್ಲಾ ಅನುಭವಗಳ ಸಮ್ಮಿಶ್ರಣ ವಾಗಿದ್ದು, ಅವುಗಳಲ್ಲಿ ಜೀವನದ ನೀತಿ ಬೋದನೆಗಳು, ಹಾಗೆಯೇ ಸಂಸಾರ, ಸಂಸ್ಕಾರ, ಸಾಮಾಜಿಕ ಮೌಲ್ಯಗಳು, ಗುರು ಹಿರಿಯರನ್ನ ಗೌರವಿಸುವ ಕಲೆ, ಎಲ್ಲವುಗಳನ್ನ ಮೈಗೂಡಿಸಿಕೊಂಡಿರುವ ಜನಪದ ಸಾಹಿತ್ಯ ಇಂದಿನ ಯುವ ಪೀಳಿಗೆಯ ಆಧಾರವಾಗಬೇಕಾಗಿಕಿದೆ. ಆದ್ರೆ, ಯುವ ಜನತೆಗೆ ಅದರ ತಿಳುವಳಿಕೆಯು ಕೂಡ ಇಲ್ಲದಾಗಿರುವುದು ದುರಂತವೇ ಸರಿ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಎಂ.ಬಿ ಡಿಗ್ರಿ ಕಾಲೇಜ್ ಪ್ರಿನ್ಸಿಪಲ್ ಡಾ. ಎಸ್ ಎನ್ ಶಿವರಡ್ಡಿ,  ಲಾವಣಿ, ಅಂತಿ ಜೋಗುಳ, ಶೋಭಾನೆ ಕುಟ್ಟುವ ಹಾಡು, ಬೀಸುವ ಹಾಡು, ಹೀಗೆ ಜನಪದ ಸಾಹಿತ್ಯದ ಆಗರವಾಗಿರುವ ಕನ್ನಡ ನಾಡಿನಲ್ಲಿ ಇಂದು ಜನಪದ ಸಾಹಿತ್ಯದ ತಿಳುವಳಿಕೆಯಿಂದ ಯುವ ಪೀಳಿಗೆಯು ದೂರ ಸರಿಯುತ್ತಿದೆ. ಜನಪದ ಸಾಹಿತ್ಯವನ್ನು ಉಳಿಸಿ, ಬೆಳೆಸುವ ಜವಾಬ್ದಾರಿಯಿಂದ ಯುವ ಜನತೆ  ನುಣುಚಿಕೊಳ್ಳುತ್ತಿದ್ದು, ಇದರಿಂದ ಪ್ರಾಚೀನ ಕಾಲದ ಮೌಲ್ಯಯುತವಾದ ಸಾಹಿತ್ಯವು ಮುಂದಿನ ಪೀಳಿಗೆಯಿಂದ ಸಂಪೂರ್ಣವಾಗಿ ದೂರವಾಗುವ ಆತಂಕ ಎದುರಾಗಿದ್ದು, ಅದನ್ನು ಹೋಗಲಾಡಿಸಿ, ಜನಪದ ಸಾಹಿತ್ಯವನ್ನು ಮತ್ತೆ ಇಂದಿನ ಯುವ ಪೀಳಿಗೆಯ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ, ಬದುಕಿನ ಅನುಭವಗಳನ್ನ ಅನುಭವಿಸುತ್ತಾ, ಅದರಿಂದ ಹಲವಾರು ಬಗೆಯ ಸಾಹಿತ್ಯಿಕ ರಚನೆ ಮಾಡುತ್ತಾ, ಮುಂದಿನ ಪೀಳಿಗೆಗೆ ಜನಪದ ಸಾಹಿತ್ಯವನ್ನು ಕೊಟ್ಟು ಹೋಗುವ ಜವಾಬ್ದಾರಿ ಇಂದಿನ ಯುವಶಕ್ತಿಯ ಮೇಲಿದೆ ಎಂಬುದನ್ನು ಅರಿಯಬೇಕು ಎಂದರು 

ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಉಪನ್ಯಾಸಕರಾದ ಶ್ರೀ ಬಿ ವಿ ಮುನವಳ್ಳಿ ಅವರು ಶಾಲಾ ಕಾಲೇಜುಗಳ ಹಂತದಲ್ಲಿ ಇಂತಹ ಕಾರ್ಯಕ್ರಮಗಳನ್ನು ಮಾಡುವುದರ ಜೊತೆಗೆ ಪದವಿ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಜನಪದ ಸಾಹಿತ್ಯದ ರಸಾನುಭವನ ಉಣಬಡಿಸುತ್ತಾ, ಅವರನ್ನು ಕೂಡ ಜನಪದ ಸಾಹಿತ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡುವುದರ ಜೊತೆಗೆ, ಜನಪದ ಬದುಕಿನ ಸೊಗಡನ್ನ ಮನವರಿಕೆ ಮಾಡುತ್ತಾ, ಅವರು ಆ ಪ್ರಾಚೀನರ ಬದುಕಿನ ಕಲೆಯನ್ನು ತಿಳಿಯುವಂತಾಗಬೇಕು. ಈ ರೀತಿ ಬದುಕನ್ನ ಕಟ್ಟಿಕೊಳ್ಳಲು ಇಂತಹ ಕಾರ್ಯಕ್ರಮಗಳನ್ನ ಎಲ್ಲಾ ಕಾಲೇಜುಗಳಲ್ಲಿ ಏರ್ಪಡಿಸಬಹುದು ಎಂದು ಯುನಿವರ್ಸಿಟಿಗೆ ಒತ್ತಾಯಿಸಿದರು.

ಎನ್ ಎಸ್ ಎಸ್ ಅಧಿಕಾರಿಗಳಾದ ಎಸ್ ಕೆ ಕಟ್ಟಿಮನಿ ಮಾತನಾಡುತ್ತಾ, ಪದವಿ ಕಾಲೇಜಿನ ವಿದ್ಯಾರ್ಥಿಗಳು ಜಾನಪದ ಉತ್ಸವಗಳಂತ ಕಾರ್ಯಕ್ರಮಗಳಲ್ಲಿ  ಉತ್ಸಾಹದಿಂದ ಪಾಲ್ಗೊಳ್ಳುಬೇಕು. ಜನಪದ ಸಾಹಿತ್ಯದ ರಸಾನುಭವನ ಅನುಭವಿಸುವಂತಹ ಆಗಬೇಕು. ಅದರಿಂದ ಮುಂದಿನ ಪೀಳಿಗೆಯಲ್ಲಿ ಜನಪದ ಸಾಹಿತ್ಯದ ಅರಿವು ಮೂಡಿಸುವಂತ ಹಲವಾರು ಕಾರ್ಯಕ್ರಮಗಳನ್ನು ಇಂದು ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ಈ ರೀತಿಯ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಬೇಕು.  ಯುವ ಪೀಳಿಗೆಯಲ್ಲಿ ಜನಪದ ಸಾಹಿತ್ಯದ ಸೊಗಡನ್ನು ಬೆಳೆಸುವಂತೆ ಮಾಡಬೇಕು ಎಂದರು. 

ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಉಡುಗಳನ್ನು ಧರಿಸಿದ್ದು, ಕಣ್ಮನ ಸೆಳೆಯಿತು. ಕೆಕೆ ಸರ್ಕಲ್ ನಿಂದ ಆರಂಭವಾದ ಕುಂಭ ಮೆರವಣಿಗೆ ಕಾಲೇಜಿನ ಆವರಣ ತಲುಪಿತು.  

ಸಮಾರಂಭದಲ್ಲಿ ಡಾ. ಎಸ್ ಹೆಚ್ ಪವಾರ್, ಎಲ್ ಕೆ ವದ್ನಾಳ್, ಎಲ್ ಕೆ ಹಿರೇಮಠ, ಎಂ ಎಲ್ ಕೋಟಿ, ಹರೀಶ್ ಪವಾರ್, ಮರ್ತುಜಾ ಮಳಗಾವಿ,  ಶ್ರೀಮತಿ ಎಂ ಬಿ ಮುಲ್ಲಾ, ಮಹದೇವಿ ವಕ್ರಾಣಿ, ಕವಿತಾ ಬಂಡಿ, ಯುಎನ್ ತಿಮ್ಮನಗೌಡ, ಶ್ರೀಮತಿ ಎಸ್ ವಿ ಪತ್ತಾರ್, ಸುರೇಶ್ ಪ್ರತಾಪ್, ಸಂಗಮೇಶ್ ಉಪ್ಪಿನಬೆಟಗೇರಿ, ಹೆಚ್.ಎಸ್. ನರೇಗಲ್ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
Post a Comment

Post a Comment