ಗಜೇಂದ್ರಗಡ: (May_21_2025)
ನಗರದ ಶ್ರೀ ಬೆನಕಪ್ಪ ಶಂಕ್ರಪ್ಪ ಸಿಂಹಾಸನದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಇಂದು ಸತತ ನಾಲ್ಕನೆ ವರ್ಷವೂ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ 76 ಘಟಕಗಳಷ್ಟು ರಕ್ತ ಸಂಗ್ರಹಣೆಯಾಗಿದೆ. ಗದಗದಲ್ಲಿರುವ ಗದಗ ವೈದ್ಯಕೀಯ ಸಂಸ್ಥೆಯ ರಕ್ತನಿಧಿ ಕೇಂದ್ರದವರು ಈ ಕಾರ್ಯಕ್ರಮದಲ್ಲಿ ದಾನಿಗಳಿಂದ ರಕ್ತ ಸಂಗ್ರಹಿಸಿದರು. ಮಹಾವಿದ್ಯಾಲಯದ 40 ನೆ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಶಿಬಿರದಲ್ಲಿ ನಗರದ 30ಕ್ಕೂ ಹೆಚ್ಚು ನಾಗರೀಕರು, ಹಿರಿಯ ವಿದ್ಯಾರ್ಥಿಗಳು, ಪ್ರಸ್ತುತ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಸಹಾ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಭೂದಾನಿಗಳಾದ ಸಿಂಹಾಸನದ ಕುಟುಂಬಸ್ಥರು ರಕ್ತದಾನಿಗಳಿಗೆ ಫಲ ವಿತರಣೆ ಮಾಡಿದರು. ಉದ್ಘಾಟನಾ ಸಮಾರಂಭದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ಮಹೇಂದ್ರ ಜಿ, GIMS ನ ಡಾ. ಯಲ್ಲಾಲಿಂಗ, ರೋಗಶಾಸ್ತ್ರಜ್ಞರು, ಶ್ರೀ M.B ಪಾಟೀಲ್, ಸಮಾಲೋಚಕರು, ರಕ್ತನಿಧಿ ಕೇಂದ್ರದ ಅಧೀಕ್ಷಕರಾದ ಶ್ರೀ ಫಿರೋಜ್, IQAC ಸಂಚಾಲಕರಾದ ಶ್ರೀ ಹನುಮೇಶ್ ಹಾಗೂ Redcross ಸಂಚಾಲಕರಾದ ಶ್ರೀ ಹಿತೇಶ್ ಬಿ ಅವರು ಅಲ್ಲದೇ ಮಹಾವಿದ್ಯಾಲಯದ ಸಕಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Post a Comment