-->
Bookmark

Gajendragad : ವಿಂಡ್ ಪವರ್ ವಾಹನ ಬಿದ್ದು, ವಾಹನ ಸಂಚಾರಕ್ಕೆ ಅಡೆ ತಡೆ : ಕಣ್ಮುಚ್ಚಿ ಕುಳಿತ ಆಡಳಿತ ವರ್ಗ

Gajendragad : ವಿಂಡ್ ಪವರ್ ವಾಹನ ಬಿದ್ದು, ವಾಹನ ಸಂಚಾರಕ್ಕೆ ಅಡೆ ತಡೆ : ಕಣ್ಮುಚ್ಚಿ ಕುಳಿತ ಆಡಳಿತ ವರ್ಗ 
ಗಜೇಂದ್ರಗಡ : (May_26_2025)
ಇತ್ತಿಚೆಗೆ ಗಜೇಂದ್ರಗಡ ಗುಡ್ಡದ ಮೇಲೆ ಅಳವಡಿಸಿರುವ ಫ್ಯಾನ್ ಬಿದ್ದು, ಘಟನೆ ಮಾಸುವ ಮುನ್ನವೇ ಮತ್ತೊಂದು ಅವಾಂತರ ನಡೆದಿದೆ. ಗಜೇಂದ್ರಗಡದಿಂದ ಕುಂಟೋಜಿ ಕಡೆಗೆ ಹೋಗುವ ಮಾರ್ಗದಲ್ಲಿ ಗೌಡಗೇರಿ ಕ್ರಾಸ್ ಬಳಿ ವಿಂಡ್ ಕಂಪನಿಯ ವಾಹನ ಬಿದ್ದು ಸಂಚಾರಕ್ಕೆ ಅಡೆ ತಡೆ ಉಂಡಾಗಿದೆ. 
ಗಜೇಂದ್ರಗಡ ಮತ್ತು ರೋಣ ಸೇರಿದಂತೆ ಜಿಲ್ಲೆಯಾದ್ಯಂತ ವಿಂಡ್ ಕಂಪನಿಯ ವಾಹನಗಳ ಕಾಟ ಜೋರಾಗಿದೆ. ಇವರಿಗೆ ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ. ಇಲ್ಲಿ ರೈತರಿಗೆ ತೊಂದರೆಯಾಗಿ ಸಾಲು ಸಾಲು ದೂರುಗಳು ಬಂದರೂ ಕ್ಯಾರೆ ಎನ್ನದೇ, ಇಂತಹ ದುರ್ಘಟನೆಗಳು ನಡೆಯುತ್ತಿವೆ. ಇದೆಲ್ಲದಕ್ಕೂ ಕಡಿವಾಣ ಹಾಕುವವರು ಯಾರು ಇಲ್ಲದಂತಾಗಿದೆ. ಈಗ ಗೌಡಗೇರಿ ಕ್ರಾಸ್ ಬಳಿ ವಾಹನ ಬಿದ್ದು, ಸಂಚಾರಕ್ಕೆ ತೊಂದರೆಯುಂಟಾಗಿದೆ. 
ವಾಹನ ಸವಾರರು ಪಕ್ಕದ ಹೊಲದಿಂದ ಸಂಚಾರ ಮಾಡುತ್ತಿದ್ದಾರೆ. ಆಡಳಿತ ನಡೆಸುವವರು, ಅಧಿಕಾರಿಗಳು, ಕಣ್ಮುಚ್ಚಿ ಕುಳಿತಿರುವುದು ವಿರ್ಯಾಸ...
Post a Comment

Post a Comment