ಬೆಳಗಾವಿ : (Dec_25_2025)
ಕರ್ನಾಟಕದ ಅತಿ ದೊಡ್ಡ ಜಿಲ್ಲೆಯಾದ ಬೆಳಗಾವಿ ಹಾಗೂ ವ್ಯಾಪಕವಾದ ಕಬ್ಬು ಬೆಳೆಗಾರಿಕೆಯ ಕಾರಣದಿಂದ ಇದನ್ನು "ಕರ್ನಾಟಕದ ಸಕ್ಕರೆ ಪಾತ್ರೆ" ಎಂದು ಕರೆಯಲಾಗುತ್ತದೆ. ಇಂತಹ ಜಿಲ್ಲೆಯಲ್ಲಿ ಎರಡನೆ ಬಾರಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ 29ನೇ ಕರ್ನಾಟಕ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರೇಟ್ ಡಿಸೆಂಬರ್ 27ರಿಂದ ಜನೆವರಿ 01ರ ವರೆಗೆ ಬೆಳಗಾವಿಯಲ್ಲಿ ನಡೆಯಲಿದೆ. ಬೆಳಗಾವಿ ತಾಲೂಕಿನ ಹೊನಗಾ ಗ್ರಾಮದ ಫಿನಿಕ್ಸ್ ಪಬ್ಲಿಕ್ ಶಾಲೆಯಲ್ಲಿ ನಡೆಯಲಿದೆ. ಜಾಂಬೋರೇಟ್ ರಾಜ್ಯ ಮುಖ್ಯ ಆಯುಕ್ತರಾದ ಶ್ರೀ ಪಿ. ಜಿ. ಆರ್. ಸಿಂಧ್ಯ ಅವರ ನೇತೃತ್ವದಲ್ಲಿ ನಡೆಯಲಿದೆ .ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸ್ಕೌಟ್ಸ್, ಮತ್ತು ಗೈಡ್ಸ್, ರೋವರ್ ಮತ್ತು ರೇಂಜರ್ಗಳು ಸೇರಿ 5 ಸಾವಿರಕ್ಕೂ ಅಧಿಕ ಮಕ್ಕಳು ಪಾಲ್ಗೊಳ್ಳಲಿದ್ದಾರೆ. ಪ್ರತಿ 4 ವರ್ಷಕ್ಕೊಮ್ಮೆ ಜಾಂಬೋರೇಟ್ ಏರ್ಪಡಿಸಲಾಗುತ್ತದೆ. ಇನ್ನೂಂದು ವಿಶೇಷವೆಂದರೆ "2001ರಲ್ಲಿ 24ನೇ ಜಾಂಬೋರೇಟ್ ಬೆಳಗಾವಿಯಲ್ಲಿ ನಡೆದಿತ್ತು. 24 ವರ್ಷಗಳ ಬಳಿಕ ಈಗ ಮತ್ತೆ ಬೆಳಗಾವಿಯಲ್ಲೇ 29ನೇ ಜಾಂಬೋರೇಟ್ ನಡೆಯುತ್ತಿದೆ."
ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಸತೀಶ ಜಾರಕಿಹೊಳಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರ.
ಜಾಂಬೋರೇಟ್ನಲ್ಲಿ ಮಕ್ಕಳಿಗೆ ನಾಯಕತ್ವ, ಶಿಸ್ತು, ಸೌಹಾರ್ದತೆ, ದೇಶಭಕ್ತಿ, ಸಹಜೀವನ ಕೌಶಲ್ಯಗಳ ಕಲಿಕೆ, ಸಾಹಸ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ."ದಿ. ಶ್ರೀಮತಿ ಸಾಲುಮರದ ತಿಮ್ಮಕ್ಕನವರ ಪರಿಸರ ಸಂರಕ್ಷಣೆ ಕುರಿತು ಅರಿವು ಮೂಡಿಸಲಾಗುತ್ತದೆ." ಜಾಂಬೋರೇಟ್ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ.



Post a Comment