-->
Bookmark

Bubballi : " ಏನ್ ಸುಖ ಐತಣ್ಣಾ" - ಆಲ್ಬಂ ಸಾಂಗ್ ಚಿತ್ರೀಕರಣ

Bubballi : " ಏನ್ ಸುಖ ಐತಣ್ಣಾ" - ಆಲ್ಬಂ ಸಾಂಗ್ ಚಿತ್ರೀಕರಣ
ಹುಬ್ಬಳ್ಳಿ: (Jan_02_2026)

ಸದಾ ಕ್ರಿಯಾಶೀಲ ಚಟುವಟಿಕೆಯಲ್ಲಿರುವ ಮೂಲತ: ಗದಗನವರಾದ ವಿಕ್ರಮ್ ಕುಮಠಾ ಇದೀಗ ಹೊಸತನದ ಪ್ರಯೋಗದ ಮೂಲಕ "ಏನ್ ಸುಖ ಐತಣ್ಣಾ " ಆಲ್ಬಂ ಸಾಂಗ್ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ.
     ಮೊಟ್ಟ ಮೊದಲ ಸಲ ತಾವು ಸಂಪೂರ್ಣ ಗ್ರೀನ್‌ಸ್ಕ್ರೀನ್‌ದಲ್ಲೇ ಹಾಡನ್ನು ಎರಡು ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇನೆ. ಇದು ನನಗೆ ಹೊಸದಾದರೂ  ಚಾಲೆಂಜ್‌ ಆಗಿ ತೆಗೆದುಕೊಂಡು ಚಿತ್ರೀಕರಣ ಮಾಡಿರುವೆ. ಕಲಾವಿದರು ತುಂಬಾ ಸಹಕಾರ ನೀಡಿದ್ದಾರೆ ಎಂದು ವಿಕ್ರಮ್ ಹೇಳಿದರು.
      ಛಾಯಾಗ್ರಹಣ ಪ್ರಜ್ವಲ್ ಹರೀಶ್, ಯೋಗೇಶ್, ಅಡ್ವೋಕೇಟ್ ಗುರುಲಿಂಗ ಸಮಗೊಂಡ ಅವರ ಸಾಹಿತ್ಯ ರಚನೆಗೆ ನಿಷದ ಭಟ್ ಸಂಗೀತ ಸಂಯೋಜಿಸಿದ್ದಾರೆ. ಸುಜಾತಾ ಆರಾಧ್ಯಮಠ, ವಿಕ್ರಮ್ ಕುಮಠಾ ಧ್ವನಿ ನೀಡಿದ್ದಾರೆ. ಪಾತ್ರವರ್ಗದಲ್ಲಿ ಸಂತೋಷ ಪಾಟೀಲ, ಸಂಜನಾ ಹೆಗಡೆ, ಪ್ರಶಾಂತ ಪವಾರ, ಸುಮನ್ ಸುರೇಬಾನ, ರೋಹಿತ್‌ ಗೋಸಿ, ಮಾನ್ಯ ಬಾಂದೇಕರ ಅಭಿನಯಿಸಿದ್ದಾರೆ. ನಿರ್ಮಲಾ ಪ್ಯಾಟಿ ಪ್ರಸಾಧನ, ಮ್ಯೂಜಿಕ್ ಆಪರೇಟರ್ ಪ್ರೀತಮ್ ಕುಮಠಾ, ಕೋರಿಯೋಗ್ರಾಫಿ ಸಂತೋಷ ಪಾಟೀಲ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಅವರದಿದ್ದು, ಸಹ ನಿರ್ದೇಶನ ಭಾವನಾ ಶಿಂಧೆ, ನಿರ್ದೇಶನ ವಿಕ್ರಮ್ ಕುಮಠಾ ಮಾಡಿದ್ದಾರೆ. ಅಡ್ವೋಕೇಟ್ ಗುರುಲಿಂಗ ಸಮಗೊಂಡ, ಅಡ್ವೋಕೇಟ್ ಆದರ್ಶ ಸಮಗೊಂಡ ನಿರ್ಮಾಪಕರಾಗಿದ್ದಾರೆ.
**
-ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬
Post a Comment

Post a Comment