ಬೆಂಗಳೂರು : (Jun_17_2026)
ದಿಕ್ಷೀತಾ ಎಂಟರ್ ಪ್ರೈಸೆಸ್ ಬೆಂಗಳೂರು ಅವರ ‘ಕಾಲಘಟ್ಟ’ ಕನ್ನಡ ಚಲನಚಿತ್ರದ “ಸಮಯವು ನಿನ್ನ ಬದುಕಿನ ಮಾಲೀಕ, ಕಾಲಕ್ಕೆ ಗೌರವ ಕೊಡಬೇಕು ಜನಕ” ಹಾಡು ಬಿಡುಗಡೆಯಾಗಿ ಯ್ಯೂಟೂಬ್ದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.
ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಥಾಹಂದರ ಹೊಂದಿರುವ ‘ಕಾಲಘಟ್ಟ’ ಚಿತ್ರದ ಎರಡನೇ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿ ೧೮೦ಕೆ ವೀಕ್ಷಣೆ ಪಡೆದು ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಅರ್ಥಪೂರ್ಣ ಸಾಲುಗಳ ಮೂಲಕ ಸಮಯದ ಮಹತ್ವವನ್ನು ಸಾರುವ ಈ ಹಾಡು ಎಲ್ಲರ ಮನ ಮುಟ್ಟುತ್ತಿದೆ. ಈ ಹಾಡಿಗೆ ಋಷಿ ಸಾಹಿತ್ಯ ರಚಿಸಿದ್ದು, ಗಾಯಕ ಮಹೇಶ ತಮ್ಮ ಮಧುರ ಕಂಠದ ಮೂಲಕ ಹಾಡಿಗೆ ಜೀವ ತುಂಬಿದ್ದಾರೆ. ಸಂಗೀತ ನಿರ್ದೇಶಕ ಎ.ಎಂ.ನೀಲ್ ಅವರ ಸಂಗೀತ ಸಂಯೋಜನೆ ಹಾಡಿನ ವಿಶೇಷ ಆಕರ್ಷಣೆಯಾಗಿದೆ. “ಕಾಲದ ಮಹತ್ವವನ್ನು ಪ್ರತಿಯೊಬ್ಬರಿಗೂ ನೆನಪಿಸುವ ಉದ್ದೇಶದಿಂದ ಈ ಹಾಡನ್ನು ರೂಪಿಸಿದ್ದೇವೆ. ಯುವಜನತೆಗೆ ಹಾಗೂ ಕುಟುಂಬದ ಎಲ್ಲರಿಗೂ ಇದು ಉತ್ತಮ ಸಂದೇಶ ನೀಡಲಿದೆ” ಎಂದು ನಿರ್ದೇಶಕ ಕೆ.ಪ್ರಕಾಶ ಅಂಬಳೆ ಹೇಳುತ್ತಾರೆ.
ಚಿತ್ರದಲ್ಲಿ ನಾಯಕನಾಗಿ ಅಭಿದಾಸ್ ಹಾಗೂ ನಿತಿಲ್ ಅಭಿನಯಿಸಿದ್ದು, ನಾಯಕಿಯರಾಗಿ ಖುಷಿ ಮತ್ತು ಮೇಘ ಕಾಣಿಸಿಕೊಂಡಿದ್ದಾರೆ. ಚಿತ್ರರಂಗದ ಹಿರಿಯ ಕಲಾವಿದರಾದ ಶೋಭರಾಜ್, ಭವ್ಯ, ರಮೇಶ್ ಭಟ್, ಪ್ರಶಾಂತ್ ರವಿ , ಮಂಡ್ಯ ಸೀತಾರಾಮ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು , ಕಾಮಿಡಿ ಕಲಾವಿದರು ಹಾಗೂ ಅನೇಕ ರಂಗಭೂಮಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ-ಸದಾಶಿವ ಹಿರೇಮಠ-ರಾಜ್ ಕಡೂರ್, ಸಂಗೀತ ಎ.ಎಂ.ನೀಲ್, ಸಂಕಲನ ವೆಂಕಿ ಯುಡಿವಿ, ಸಾಹಸ ಮಾಸ್ಮಾದ, ಸಾಹಿತ್ಯ ನಮ್ ಋಷಿ, ಸ್ಯಾಂಕಿ, ಸಿದ್ದುಶಿವರಾಮ್, ಪ್ರಸಾಧನ ವಿಜಯ್, ಪಿಆರ್ ಓ- ಹರೀಶ್ ಅರಸು, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ್ ಹಂಡಿಗಿ, ಪ್ರಚಾರ ವಿನ್ಯಾಸ ಆರ್.ಕ್ರಿಯೇಟಿವ್, ನಿರ್ದೇಶನ ತಂಡ ಗಣೇಶ್,ರವಿ, ಸಾಗರ್ ಇದ್ದು, ಕಥೆ-ಚಿತ್ರಕಥೆ-ಸಂಭಾಷಣೆ ಜೊತೆಗೆ ನಿರ್ದೇಶನವನ್ನು ಕೆ. ಪ್ರಕಾಶ್ ಅಂಬಳೆ ಮಾಡಿದ್ದಾರೆ. ಲಯನ್ ಚಿಕ್ಕೇಗೌಡ, ಟಿ.ಸಿ ತಳಗವಾಡಿ ನಿರ್ಮಾಪಕರಾಗಿದ್ದಾರೆ.ಇದೆ ಜೂ.೧೯ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ನೋಡಿ ಪ್ರೋತ್ಸಾಹಿಸಬೇಕೆಂದು ನಿರ್ಮಾಪಕರು ಕೋರಿದ್ದಾರೆ.
***
-ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬



Post a Comment