-->
Bookmark

Bagalakote / Hunagund : ವೈದ್ಯಕೀಯ ಲೋಕದಲ್ಲಿ ತಮ್ಮದೆ ಛಾಪು ಮೂಡಿಸುತ್ತಿರುವ ಡಾ.‌ನೀಲಮ್ಮ

Bagalakote / Hunagund : 
ವೈದ್ಯಕೀಯ ಲೋಕದಲ್ಲಿ ತಮ್ಮದೆ ಛಾಪು ಮೂಡಿಸುತ್ತಿರುವ ಡಾ.‌ನೀಲಮ್ಮ 

ವೈದ್ಯಕೀಯ ಕ್ಷೇತ್ರಕ್ಕೆ ಡಾ. ನೀಲಮ್ಮ ಸಂಗಮ್ ಕೊಡುಗೆ ಅಪಾರ

ಆದಿಹಾಳ್ ಗ್ರಾಮದ ಕೀರ್ತಿ ಹೆಚ್ಚಿಸಿದ ಕಿರಿಯ ವೈದ್ಯೆ ಡಾ.‌ನೀಲಮ್ಮ ಸಂಗಮ್ 

ಬಾಗಲಕೋಟೆ / ಹುನಗುಂದ : (Jul_22_2026)

ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಕುಂದು ಕೊರತೆಗಳನ್ನ ಕಂಡು ಬೆಳೆದ ಡಾ. ನೀಲಮ್ಮ ಸಂಗಮ್ ಅವರು ವೈದ್ಯಕೀಯ ಸೇವೆ ಮಾಡಲು ಇದಕ್ಕಿಂತ ಉತ್ತಮ ವೇದಿಕೆ ಮತ್ತು ಸಮಾಜ ಸೇವೆ ಮಾಡುವ ಕನಸು ತಂದೆಯಿಂದ ಕಲಿತ ಇವರು. ಬೆಳಗಾವಿಯಲ್ಲಿ ಬಿ.ಹೆಚ್.ಎಂ.ಎಸ್ ಪದವಿಯನ್ನ ಮುಗಿಸಿದ ಬಳಿಕ, ಅಶೋಕ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲೂ ಕೆಲಸ ಮಾಡಿ‌ ಸೈ ಎನಿಸಿಕೊಂಡಿದ್ದಾರೆ.  

ಬೆಳಗಾವಿಯ ನೋಮಾನಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೀಕ್ಷಕರಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ಬಾಗಲಕೋಟೆ ನಗರದ ಪ್ರತಿಷ್ಠಿತ ತೊಟ್ಟಿಲು, ಶಿರೂರು, ಹೆರಂಜಲ್ ಹೆರಿಗೆ ಮತ್ತು ಪ್ರಸೂತಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. 

ಹುನಗುಂದ ತಾಲೂಕಿನ ಆದಿಹಾಳದವರಾದಲ್ಲಿ ನೆಲೆಸಿರುವ ಇವರು, ವೈದ್ಯಕೀಯ ಕ್ಷೇತ್ರದಲ್ಲಿ ಉದಯೋನ್ಮುಖ ತಾರೆಯಾಗಿದ್ದಾರೆ. ತಮಗೆ ಸಿಕ್ಕ ಅವಕಾಶಗಳನ್ನ ಬಳಸಿಕೊಂಡು ಕೌಶಲ್ಯ ಮೆರೆದಿರುವ ಇವರು, ಅನೇಕ ಕರ್ನಾಟಕ ವೈದ್ಯಕೀಯ ಮಂಡಳಿಯಲ್ಲೂ ನೊಂದಾತಿತರಾಗಿದ್ದಾರೆ. 

ತಂದೆ ಹಾಕಿಕೊಟ್ಟ ಮಾರ್ಗದಲ್ಲೆ ನಡೆಯುವ ಡಾ. ನೀಲಮ್ಮ ಸಂಗಮ್ ತಮ್ಮೂರಿನ ಕೀರ್ತಿ ಪತಾಕೆಯನ್ನ ಮುಗಿಲೆತ್ತರಕ್ಕೆ ಹಾರಿಸಿದ್ದಾರೆ. ತಮಗೆ ವಹಿಸಿದ ಕೆಲಸವನ್ನ ಅಚ್ಚುಕಟ್ಟಾಗಿ ನಿಭಾಯಿಸಿ, ಶಹಬ್ಬಾಶ್ ಎನಿಸಿಕೊಂಡಿದ್ದಾರೆ. 

ಪ್ರತಿದಿನ ತಮ್ಮೂರಿನಿಂದ ಬಾಗಲಕೋಟೆಯ ಹೆರಂಜಲ್ ಆಸ್ಪತ್ರೆಗೆ ಬಂದು ಸೇವೆ ಸಲ್ಲಿಸುತ್ತಿದ್ದಾರೆ. ಎಮರ್ಜೆನ್ಸಿಯಲ್ಲೂ ಕಾರ್ಯನಿರ್ವಹಿಸುವ ಡಾ. ನೀಲಮ್ಮ ಹೆಸರಿಗೆ ತಕ್ಕಂತೆ ಆದರ್ಶವನ್ನಿಟ್ಟುಕೊಂಡಿದ್ದು, ಕುಟುಂಬದಲ್ಲಿ ಎಲ್ಲರಿಗೂ ಪ್ರೀಯರು, ಕೂಡು ಕುಟುಂಬದಲ್ಲಿ ಬೆಳೆದ ನೀಲಮ್ಮ ಶಾಂತ ಸ್ವಭಾವದವರಾಗಿದ್ದಾರೆ.
Post a Comment

Post a Comment