-->
Bookmark

Karwar : ಬಾಲ್ಯದ ಗೆಳತಿ ಮಡದಿಯಾದಾಗ ಮಕ್ಕಳಿಗೆ ತೋರುವ ಪ್ರೀತಿ...!

Karwar : ಬಾಲ್ಯದ ಗೆಳತಿ ಮಡದಿಯಾದಾಗ ಮಕ್ಕಳಿಗೆ ತೋರುವ ಪ್ರೀತಿ...!

ಕಾರವಾರ : (Jul_23_2026)
ನಗರದ ಪ್ರತಿಷ್ಠಿತ ಬಾಲ ಮಂದಿರ ಶಾಲೆಗೆ ಹೋಗುವ ನರ್ಸರಿ ಮಗುವಿಗಾಗಿ ರಾತ್ರಿ 3 ಗಂಟೆ ವರೆಗೆ ಕ್ರಾಫ್ಟ್ ಮಾಡಲಾಯ್ತು.  ಏನು ಅರಿಯದ ಕಂದಮ್ಮನ (ಕನಿ ಕೃಷ್ಣ ರಾಠೋಡ್ ) ಬಗ್ಗೆ ತಲೆ ಕೆಡಿಸಿಕೊಳ್ಳಬೇಡಾ, ಮಕ್ಕಳಿಗೆ ಏನು ತಿಳಿಯುವುದಿಲ್ಲ. ಇನ್ನೂ ಮೂರು ವರ್ಷ ಆಗಿಲ್ಲ ಎಂಬ ವಾದ ನನ್ನದಾಗಿತ್ತು.‌ ಹೀಗೆ ಹೇಳುತ್ತಿದ್ದಂತೆ ಮನೆ ರಣಾಂಗಣವಾಗಿತ್ತು. ಆದ್ರೂ ಜಗಳ ಮಾಡಿ‌ ಥರ್ಮಾಕಾಲ್ ತರಿಸಿ, ಕನಿಗೆ ರೈನಿ ಡೇ ವಿಷೇಶ ಕ್ರಾಫ್ಟ್ ರೆಡಿಮಾಡಿ ಕೊಟ್ಟ ಶ್ರೀಮತಿ ಕವಿತಾ ಕೃಷ್ಣ ರಾಠೋಡ್ ಬಿ.ಎಡ್ ಮಾಡಿದ್ದಾರೆ. 
ಮಕ್ಕಳ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಶಾಲೆಯ ಮೇಲಿನ ಆಸಕ್ತಿ ಕಳೆದುಕೊಳ್ಳಬಾರದೆಂದು ಈ ರೀತಿ ಕ್ರಾಫ್ಟ್ ಮಾಡಿದ್ದಾರೆ. ಮತ್ತು ಮುತ್ತಿನಂತಹ ಅಕ್ಷರಗಳನ್ನ ಪೋಣಿಸುವ ರೀತಿ ಬರೆಯುವುದು ಕವಿತಾ ಶಾಲಾ, ಕಾಲೇಜು ದಿನಗಳಿಂದಲೇ ಸೆಳೆಯುತ್ತಿತ್ತು. ಬರವಣಿಗೆ ಪ್ರೀತಿಸುವ ನನಗೆ ಯಾವತ್ತು ಬೆಂಬಲಿಸುವ ಮಡದಿಯ ತಾಳ್ಮೆ, ಸಹನೆ ಪ್ರೀತಿಗೆ ಏನೆಂದರೂ ಕಡಿಮೆ ಎನಿಸುತ್ತದೆ...!
Post a Comment

Post a Comment