ಗದಗ :
ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣಾ ಪ್ರಚಾರದ ನಿಮಿತ್ತ ರೋಣ ಕ್ಷೇತ್ರದ ಯುವ ನಾಯಕರಾದ ಮಿಥುನ್ ಜಿ. ಪಾಟೀಲ ಹಾಗೂ ಅಕ್ಷಯ್ ಪಾಟೀಲ್ ಅವರು ಕ್ಷೇತ್ರಾದ್ಯಂತ ತೀವ್ರ ಸಂಚಾರ ನಡೆಸಿ, ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಅವರ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪದವೀಧರ ಮತದಾರರನ್ನು ಭೇಟಿ ಮಾಡಿ ಸಭೆ ಉದ್ದೇಶಿಸಿ ಮಾತನಾಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯುವ ನಾಯಕ ಮಿಥುನ್ ಜಿ. ಪಾಟೀಲ್, ಪಶ್ಚಿಮ ಪದವೀಧರ ಮತಕ್ಷೇತ್ರದಲ್ಲಿ ಪದವೀಧರರು ಹಾಗೂ ಶಿಕ್ಷಕರ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಬಲ್ಲ ಸಮರ್ಥ ಹಾಗೂ ಅನುಭವೀ ನಾಯಕ ಮೋಹನ್ ಲಿಂಬಿಕಾಯಿ ಅವರು. ಅವರ ಅನುಭವ ಮತ್ತು ರಾಜಕೀಯ ಬದ್ಧತೆ ಪದವೀಧರರ ಹಕ್ಕುಗಳ ರಕ್ಷಣೆಗೆ ಅತ್ಯಗತ್ಯವಾಗಿದೆ. ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳು ಹಾಗೂ ಪದವೀಧರರ ಕಲ್ಯಾಣದ ದೃಷ್ಟಿಯಿಂದ ಈ ಬಾರಿ ಮೋಹನ್ ಲಿಂಬಿಕಾಯಿ ಅವರನ್ನು ಮೊದಲ ಪ್ರಾಶಸ್ತ್ಯದ ಮತ ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು, ಎಂದು ಮನವಿ ಮಾಡಿದರು.
ಅಕ್ಷಯ್ ಐ.ಪಾಟೀಲ್ ಮಾತನಾಡಿ, ಪ್ರತಿ ಮನೆ ಮನೆಗೂ ತೆರಳಿ ಪದವೀಧರ ಮತದಾರರನ್ನು ತಲುಪುವುದು ನಮ್ಮ ಮೊದಲ ಕರ್ತವ್ಯವಾಗಿದೆ. ಯುವಜನರ ಉದ್ಯೋಗ, ಶೈಕ್ಷಣಿಕ ಸಮಸ್ಯೆಗಳು ಮತ್ತು ಪದವೀಧರರ ಹಕ್ಕುಗಳಿಗಾಗಿ ಕಾಂಗ್ರೆಸ್ ಪಕ್ಷ ನಿರಂತರವಾಗಿ ಹೋರಾಡುತ್ತಾ ಬಂದಿದೆ. ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಿ ಮೋಹನ್ ಲಿಂಬಿಕಾಯಿ ಅವರ ಗೆಲುವನ್ನು ಸುಲಭಗೊಳಿಸಬೇಕು, ಎಂದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.
ಆರ್.ಬಿ.ಬಸವರಡ್ಡೇರ, ವೀರಣ್ಣ ಶೆಟ್ಟರ, ಶರಣಪ್ಪ ಬೆಟಗೇರಿ, ಯೂಸುಫ್ ಇಟಗಿ, ಬಸವರಾಜ ನವಲಗುಂದ, ಗಿರೀಶ ಗೌಡ ಪಾಟೀಲ, ಬಸವರಾಜ ಪಲ್ಲೇದ , ಸುರೇಶ ಬಸವರಡ್ಡೇರ, ರಾಮನಗೌಡ ಹಲಕುರ್ಕಿ, ಗುರಣ್ಣ ಅವರಡ್ಡಿ, ಸುರೇಶ ಶಿರೋಳ, ಎಂ ಕೆ ಅಂಗಡಿ, ಶಿವಣ್ಣ ಗುಗ್ಗರಿ, ಅಂದಪ್ಪ ವೀರಾಪುರ, ಅಜ್ಜಪ್ಪಗೌಡ ಪಾಟೀಲ, ಮಲ್ಲು ಯಲ್ಲರಡ್ಡಿ, ಎಚ್ ಟಿ ದ್ವಾಸಲ್, ಬಸವರಾಜ ತಳವಾರ, ಮಹಾಂತೇಶ ತಳವಾರ, ಎಂ ಡಿ ಬಸವರಡ್ಡೇರ, ಶರಣಪ್ಪಗೌಡ ಮಾದಿನೂರ, ಭೀಮರಡ್ಡಿ ಅವರಡ್ಡಿ, ಭೀಮಣ್ಣ ಕಂಬಳಿ, ಪ್ರಕಾಶ ಪಾಟೀಲ, ಮಲ್ಲು ಶಿರೋಳ, ಬಸವರಾಜ ಚವಡಿ, ಎಸ್.ಬಿ ಯಲ್ಲರಡ್ಡಿ, ಶಾಧಿಕ ತಹಶಿಲ್ದಾರ, ಎಂ ಎಸ್ ಕಂಬಳಿ, ನವೀನ ರಾಮಣ್ಣವರ, ಬಸವರಾಜ ತಳಬಾಳ, ನಾಗರಾಜ ತಳಕಲ್, ಸೋಮು ಶಿರೋಳ, ಮಂಜು ಚಿತ್ತರಗಿ, ಚನ್ನಬಸು ಹೂಗಾರ, ಬಾಬು ಬನ್ನಿಕೊಪ್ಪ, ಬಸವರಾಜ ಇಟಗಿ, ದೇವನಗೌಡ ಮುನೇನಕೊಪ್ಪ, ರಮೇಶ ಮುಂದಿನಮನಿ, ದೇವಣ್ಣ ಬಿಲ್ಲ, ಬಸವರಾಜ ಗುಗ್ಗರಿ, ಸಂತೋಷ ಕಲ್ಲೇಶ್ವಾಣಿ , ಶರಣಪ್ಪ ಚಿಕ್ಕೇನಕೊಪ್ಪ, ಭೀಮಣ್ಣ ಚಿಕ್ಕೇನಕೊಪ್ಪ 'ಮಲ್ಲಯ್ಯ ಮಠಪತಿ, ಅಂದಪ್ಪ ದ್ವಾಸಲ, ಮತ್ತು ಸ್ಥಳೀಯ ಕಾಂಗ್ರೆಸ್ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು,ಯುವ ಕಾರ್ಯಕರ್ತರು, ಪದವೀಧರ ಮತದಾರರು ಉಪಸ್ಥಿತರಿದ್ದು, ಚುನಾವಣೆಯಲ್ಲಿ ಅಭ್ಯರ್ಥಿಯ ಪರವಾಗಿ ಶ್ರಮಿಸುವ ಒಮ್ಮತದ ನಿರ್ಧಾರ ಕೈಗೊಂಡರು.



Post a Comment