-->
Bookmark

Gajendragad : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಕೋಶಾಧ್ಯಕ್ಷರ ನೇತೃತ್ವದಲ್ಲಿ ನವರಾತ್ರಿ ಸಡಗರಬದಲಾದ ಕಾಲಘಟ್ಟದಲ್ಲಿ ಮಹಿಳಾಮಣಿಗಳಿಂದ ಒಗ್ಗಟ್ಟೂ ಪ್ರದರ್ಶನ ಒಂದೆ ಬಾಣದಲ್ಲಿ ಮೂರು ಹಕ್ಕಿಗಳನ್ನ ಹೊಡೆದ ಚುನಾವಣಾ ಚತುರೆ ಶ್ರೀಮತಿ ಸಂಯುಕ್ತ ಬಂಡಿ ದೂರವಾಗಿದ್ದ ಮಹಿಳೆಯರು ಈಗ ಜಿ.ಪಂ ಮತ್ತು ತಾ.ಪಂ ಆಕಾಂಕ್ಷಿಗಳಾಗಿ ಪರಿವರ್ತನೆ...? ಕೈ ಪಾಳಯದಿಂದ ಸದ್ದಿಲ್ಲದೇ, ತಮ್ಮತ್ತ ಸೆಳೆಯುವ ತಂತ್ರ...?

Gajendragad : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಕೋಶಾಧ್ಯಕ್ಷರ ನೇತೃತ್ವದಲ್ಲಿ ನವರಾತ್ರಿ ಸಡಗರ

ಬದಲಾದ ಕಾಲಘಟ್ಟದಲ್ಲಿ ಮಹಿಳಾಮಣಿಗಳಿಂದ ಒಗ್ಗಟ್ಟೂ ಪ್ರದರ್ಶನ 

ಒಂದೆ ಬಾಣದಲ್ಲಿ ಮೂರು ಹಕ್ಕಿಗಳನ್ನ ಹೊಡೆದ ಚುನಾವಣಾ ಚತುರೆ ಶ್ರೀಮತಿ ಸಂಯುಕ್ತ ಬಂಡಿ 

ದೂರವಾಗಿದ್ದ ಮಹಿಳೆಯರು ಈಗ ಜಿ.ಪಂ ಮತ್ತು ತಾ.ಪಂ ಆಕಾಂಕ್ಷಿಗಳಾಗಿ ಪರಿವರ್ತನೆ...? 

ಕೈ ಪಾಳಯದಿಂದ ಸದ್ದಿಲ್ಲದೇ, ತಮ್ಮತ್ತ ಸೆಳೆಯುವ ತಂತ್ರ...? 

ಗಜೇಂದ್ರಗಡ : (11_10_2026)
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಕೋಶಾಧ್ಯಕ್ಷರ ನೇತೃತ್ವದಲ್ಲಿ ನವರಾತ್ರಿ ಹಬ್ಬವನ್ನ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬದಲಾದ ಕಾಲಘಟ್ಟದಲ್ಲಿ ಮಹಿಳೆಯರು ಒಗ್ಗಟ್ಟೂ ಪ್ರದರ್ಶಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳು ಹತ್ತಿರವಾಗುತ್ತಿವೆ. ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಮೀಸಲಾತಿಗಳು ಪ್ರಕಟವಾಗುತ್ತಿವೆ. ಕೆಲವು ಕಡೆ ಮೀಸಲಾತಿ ಫೈನಲ್ ಆಗಿದ್ದು, ಆಕ್ಷೇಪಣೆ ಸಲ್ಲಿಸಲು ದಿನಾಂಕ ನಿಗದಿಯಾಗಿದೆ. ಹೀಗಿರುವಾಗ ಮಾಜಿ ಸಚಿವರಾಗಿರುವ ಕಳಕಪ್ಪ ಬಂಡಿ ಅವರ ಧರ್ಮ ಪತ್ನಿ ನೇತೃತ್ವದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವ ಹಲವು ರಾಜಕೀಯ ಊಹಾಪೂಹಗಳಿಗೆ ಎಡೆಮಾಡಿಕೊಟ್ಟಿದೆ. 

ಸ್ಥಳೀಯ ಬಿಜೆಪಿಯಿಂದ ದೂರವಾಗಿದ್ದ ಮಹಿಳೆಯರು ಈಗ ಜಿ.ಪಂ ಮತ್ತು ತಾ.ಪಂ ಆಕಾಂಕ್ಷಿಗಳಾಗಿ ಪರಿವರ್ತನೆಗೊಳ್ಳಲಿದ್ದಾರೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ. ಕಮಲ ಪಾಳಯದಲ್ಲಿ ಮನೆಯೊಂದು ಮೂರು ಬಾಗಿಲು ಎನ್ನುತ್ತಿರುವಾಗಲೇ, ಚುನಾವಣಾ ಚಾಣಾಕ್ಷತೆಯನ್ನ ಶ್ರೀಮತಿ ಸಂಯುಕ್ತ ಬಂಡಿ ಅವರು ತೋರಿದ್ದಾರೆ. ಒಂದೆ ಬಾಣದಲ್ಲಿ ಮೂರು ಹಕ್ಕಿಗಳನ್ನ ಹೊಡೆದಿದ್ದಾರೆ. ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ. ಎದುರಾಳಿಗಳನ್ನ ಜೊತೆಗೆ ಗುಡ್ಡೆಹಾಕಿ ಶಕ್ತಿ ಕೇಂದ್ರ ಎನ್ನುವುದನ್ನ proof ಮಾಡಿದ್ದಾರೆ. ಅಲ್ಲದೆ, ಕೈ ಪಾಳಯದಿಂದ ಸದ್ದಿಲ್ಲದೇ, ತಮ್ಮತ್ತ ಸೆಳೆದಿದ್ದಾರೆ. 

ಆದ್ರೆ, ರಾಜಕೀಯ ಚದುರಂಗದಾಟದಲ್ಲಿ ಯಾರು ಶತ್ರುಗಳಲ್ಲ ಯಾರು ಮಿತ್ರರು ಅಲ್ಲ ಎಂಬ ಮಾತು ಸ್ಥಳೀಯವಾಗಿ ಮತ್ತೊಮ್ಮೆ ಸಾಬೀತಾದಂತಾಗಿದೆ. ಜೊತೆಗೆ ಈ ಎಲ್ಲ ಲೆಕ್ಕಾಚಾರಗಳು ಸರಿಯಾಗಿದೆಯಾ ಅಥವಾ ಲೆಕ್ಕಾಚಾರ ಕೆಳಗಾಗಿ ಜೊತೆಗಿದ್ದವರು ಮತ್ತೆ ವಿರೋಧಿಗಳಾಗುತ್ತಾರಾ ಎಂಬುದನ್ನ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಟಿಕೇಟ್ ಹಂಚಿಕೆ ನಿರ್ಧರಿಸಲಿದೆ. ಆದ್ರೆ, ಚುನಾವಣಾ ಚತುರರಾಗಿರುವ ಶ್ರೀಮತಿ ಸಂಯುಕ್ತ ಬಂಡಿ ಅವರ ನಡೆಯನ್ನ ಮೆಚ್ಚಲೆಬೇಕು...! 

ಕೃಷ್ಣ ರಾಠೋಡ್ 
ಸಂಪಾದಕರು, 
ಕಿರಾ ನ್ಯೂಸ್ ಕನ್ನಡ 
ಗಜೇಂದ್ರಗಡ 
ಮೊ : 8197474996
Post a Comment

Post a Comment