ಗಜೇಂದ್ರಗಡ : ( Oct_14_2026)
ಪ್ರಾಣ ಹೋದರು ಕಾಂಗ್ರೆಸ್ ಪಕ್ಷ ತ್ಯಜಿಸುವ ಮಾತಿಲ್ಲ ಎಂದು ಶ್ರೀಮತಿ ಮಂಜುಳಾ ರೇವಡಿ ಹೇಳಿದ್ದಾರೆ. ಕಿರಾ ನ್ಯೂಸ್ ಕನ್ನಡದೊಂದಿಗೆ ಮಾತನಾಡಿದ ಅವರು,
ನಾನು ಟಿಕೇಟ್ ಸಂಬಂಧ ಹೋಗಿಲ್ಲ. ನಾನು ಹೊಳ್ಳಿ ಬಿಜೆಪಿಗೆ ಬರುವುದಿಲ್ಲ.
ಧರ್ಮದ ಕೆಲಸದಲ್ಲಿ ರಾಜಕೀಯ ಮಾಡುತ್ತಿರುವುದು ಬೇಸರ ತಂದಿದೆ ಎಂದಿದ್ದಾರೆ
ಧರ್ಮದ ವಿಷಯದಲ್ಲಿ ನಾವೆಲ್ಲರೂ ಒಂದೆ, ದೇವರಲ್ಲಿ ನಂಬಿಕೆ ಇಟ್ಟವರು. ನಾವು ಪೂಜಾ ಕೈಂಕರ್ಯಕ್ಕೆ ಸಾತ್ ನೀಡಿದ್ದೇನೆ ಹೊರತು ಟಿಕೇಟ್ ಆಕಾಂಕ್ಷಿಯಾಗಿ ಅಲ್ಲ. ಬಿಜೆಪಿ ಪಕ್ಷದಿಂದ ಟಿಕೇಟ್ ನೀಡುವ ಆಹ್ವಾನ ಬಂದಿಲ್ಲ. ಟಿಕೇಟ್ ಕೊಡುತ್ತೇವೆ ಎಂದು ಎಲ್ಲೂ ಹೇಳಿಲ್ಲ. ಧರ್ಮದ ವಿಷಯದಲ್ಲಿ ರಾಜಕೀಯ ತಂದಿದ್ದು ಮನಸ್ಸಿಗೆ ನೋವಾಗಿದೆ. ಧರ್ಮದ ಕೆಲಸಕ್ಕೆ ರಾಜಕೀಯ ಬಣ್ಣ ಹಚ್ಚುವ ಅಗತ್ಯ ವಿಲ್ಲ ಎಂದಿದ್ದಾರೆ.
ಲೋಕಕಲ್ಯಾಣಕ್ಕಾಗಿ, ಸಮಾಜದ ಒಳಿತಿಗಾಗಿ, ಸಂಸ್ಕೃತಿ, ಪರಂಪರೆಗಾಗಿ, ದೈವಿ ಆರಾಧನೆಯಲ್ಲಿ ಪಾಲ್ಗೊಂಡಿದ್ದೇನೆ ಹೊರತು ರಾಜಕೀಯ ಲಾಭಕ್ಕಾಗಿ ಅಲ್ಲ ಎಂದು ಶ್ರೀಮತಿ ಮಂಜುಳಾ ರೇವಡಿ ಸ್ಪಷ್ಟಪಡಿಸಿದ್ದಾರೆ.
ಟಿಕೇಟ್ ಫೈನಲ್ ಲೀಸ್ಟ್ ಬರೋವರೆಗೂ ಈ ಬಗ್ಗೆ ಮಾತನಾಡುವುದಿಲ್ಲ. ಜಿ.ಎಸ್ ಪಾಟೀಲ್ ಸಾಹೆಬ್ರು ಸಾವಿರ ಮಂದಿ ಹೇಳಿದ್ರು ಕೇಳುವುದಿಲ್ಲ. ಅವರ ನಿರ್ಧಾರವೇ ಅಂತಿಮ ನಿರ್ಧಾರ. ಅವರ ನಿರ್ಧಾರಕ್ಕೆ ನಾನು ಸದಾ ಬದ್ಧ ಎಂದಿದ್ದಾರೆ ಶ್ರೀಮತಿ ಮಂಜುಳಾ ರೇವಡಿ. ಈ ಮೂಲಕ ನಾನು ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ ಎಂದು ಸ್ಪಸ್ಟ ಸಂದೇಶ ರವಾನಿಸಿದ್ದಾರೆ.



Post a Comment