ಗಜೇಂದ್ರಗಡ : (March_03_2026)
ತಾಲೂಕ ತಹಶೀಲ್ದಾರ್ ಕೀರಣಕುಮಾರ್ ಕುಲಕರ್ಣಿ ಅವರಿಗೆ ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ ಎಫ್ ಐ ಸಂಘಟನೆ ಹಾಗೂ ವಿದ್ಯಾರ್ಥಿಗಳ ಪಾಲಕರು ಜಂಟಿಯಾಗಿ, ಕರ್ನಾಟಕ ರಾಜ್ಯದ ಹಂಡೇವಜೀರ ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ಪ್ರವರ್ಗ 2ಎ ಮೀಸಲಾತಿ ಜಾತಿ ಪ್ರಮಾಣ ಪತ್ರ ಒದಗಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್ ಎಫ್ ಐ ಸಂಘಟನೆಯ ಜಿಲ್ಲಾಧ್ಯಕ್ಷರಾದ ಚಂದ್ರು ರಾಠೋಡ್ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ಹಂಡೇವಜೀರ ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ಪ್ರವರ್ಗ 2ಎ ಮೀಸಲಾತಿ ನೀಡುತ್ತಿದ್ದು, ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕು ದಂಡಾಧಿಕಾರಿಗಳು ಹುಸಿಕಾರಣ ಹೇಳಿ ಅರ್ಜಿಗಳನ್ನು ತಿರಸ್ಕರಿಸಿ ಪ್ರವರ್ಗ 3ಬಿ ಮೀಸಲಾತಿ ನೀಡುತ್ತಿದ್ದಾರೆ. ಇದು ಸರ್ಕಾರದ, ರಾಜ್ಯಪಾಲರ ಆದೇಶಗಳನ್ನು ಗಾಳಿಗೆ ತೂರುತ್ತಿದ್ದಾರೆ. ಪ್ರಸ್ತುತ ವಿದ್ಯಾರ್ಥಿಗಳ ಶಾಲಾ ದಾಖಲಾತಿಯಲ್ಲಿ ಹಂಡೇವಜೀರ ಅಂತ ದೃಢಿಕರಣವಿದೆ. ಆದ್ರೆ, ಇಲ್ಲಿ ವಿದ್ಯಾರ್ಥಿಗಳನ್ನ ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರವನ್ನು ಮಾನ್ಯ ತಹಶೀಲ್ದಾರರು ಮಾಡುತ್ತಿದ್ದಾರೆ ಇದು ಸರಿಯಾದ ಕ್ರಮವಲ್ಲ ಹಂಡೇವಜೀರ ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ಪ್ರವರ್ಗ 2ಎ ಮೀಸಲಾತಿ ನೀಡದಿದ್ದರೆ, ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾಲಕರಾದ ಅಂದನಗೌಡರ್ ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕಷ್ಟ ಪಟ್ಟು ಕೂಲಿ ನಾಲಿ ಮಾಡಿ ಶಿಕ್ಷಣ ಕೋಡಿಸುತ್ತಿದ್ದೆವೆ. ಆದ್ರೆ, ತಾವುಗಳು ವೈಯ್ಯಕ್ತಿಕ ಸಬೂಬು ಕಾರಣ ಹೇಳಿ ವಿದ್ಯಾರ್ಥಿಗಳ ಜೀವನದ ಜೊತೆ ಆಟವಾಡುವುದು ಸರಿಯಲ್ಲ. ನಮ್ಮ ಮಕ್ಕಳ ಭವಿಷ್ಯ ಹಾಳಾದ್ರೆ, ಅದಕ್ಕೆ ನೇರವಾಗಿ ಮಾನ್ಯ ತಾಲೂಕ ತಹಶೀಲ್ದಾರರು ಕಾರಣವಾಗುತ್ತಾರೆ ಎಂದು ಹೇಳಿದರು.
ಶರಣಗೌಡರ್ ಪಾಟೀಲ್ ಮಾತನಾಡಿ, ಮಾನ್ಯ ತಾಲೂಕ ದಂಡಾಧಿಕಾರಿಗಳು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ. ಈ ಹಿಂದೆ ಶಾಲಾ ದಾಖಲಾತಿ ಹಾಗೂ ಪರಿಶೀಲನೆ ಮಾಡಿ ಪ್ರವರ್ಗ 2ಎ ಮೀಸಲಾತಿ ಕೋಟ್ಟಿದ್ದಾರೆ. ಆದ್ರೆ ಇಂದು ವೈಯಕ್ತಿಕವಾಗಿ ನಮ್ಮ ಮಕ್ಕಳ ಶಿಕ್ಷಣ ಹಾಳು ಮಾಡುತ್ತಿದ್ದಾರೆ. ಇದು ಸರಿಯಾದ ವ್ಯವಧಾನ ಅಲ್ಲ ಎಂದು ಕಣ್ಣೀರು ಹಾಕಿದರು.
ಮಾನ್ಯ ತಾಲೂಕ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ನಂತರ ಮನವಿ ಸಲ್ಲಿಸಿ ಮುಂದಿನ ಹತ್ತು ದಿನಗಳಲ್ಲಿ ಸಮಸ್ಯೆ ಬಗೆ ಹರಿಸದಿದ್ದರೇ, ವಿದ್ಯಾರ್ಥಿಗಳು ಹಾಗೂ ಕುಟುಂಬ ಸಮೇತ ತಹಶೀಲ್ದಾರ್ ಕಚೇರಿ ಎದುರು ಧರಣಿ ಹೋರಾಟ ನಡೆಸಲಾಗುವುದು ಎಂದು ತಹಶೀಲ್ದಾರ ಅವರಿಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ಎಫ್ ಐ ಸಂಘಟನೆ ಜಿಲ್ಲಾಧ್ಯಕ್ಷರಾದ ಚಂದ್ರು ರಾಠೋಡ, ಪಾಲಕರಾದ ಅಂದನಗೌಡರ ಪಾಟೀಲ್, ಶರಣಗೌಡರ ಪಾಟೀಲ್, ವೀರಭದ್ರಗೌಡರ ಪಾಟೀಲ್, ನಿಂಗನಗೌಡರ ಪಾಟೀಲ,ರಾಜೂರ ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಗೌಡ ಪಾಟೀಲ್, ವಿದ್ಯಾರ್ಥಿ ಸಂಘದ ಗಜೇಂದ್ರಗಡ ತಾಲೂಕ ಅಧ್ಯಕ್ಷರಾದ ಅನಿಲ್ ಆರ್, ಶರಣು ಮಾಟರಂಗಿ, ರಾಜು ಪಾಟೀಲ್, ಕಳಕೇಶ್ ರಾಠೋಡ್,ಚಂದ್ರಗೌಡ ಪಾಟೀಲ್, ಮಾಂತಗೌಡರ್, ಯಲ್ಲನಗೌಡ, ಗಂಗನಗೌಡ, ಉಮೇಶ್ ಗೌಡ, ನಿಂಗನಗೌಡ ಹಾಗೂ ಮಹಿಳೆಯರು ವಿದ್ಯಾರ್ಥಿಗಳು ಭಾಗವಹಿಸಿದ್ದರು.



Post a Comment