ಇಂದು ಗಜೇಂದ್ರಗಡ ನಗರದ ಪರಿವಿಕ್ಷಣಾ ಮಂದಿರ (ಐಬಿ) ನಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ ಎಫ್ ಐ, ಹಾಗೂ ಗಜೇಂದ್ರಗಡ ತಾಲೂಕಿನ ಹಂಡೇವಜೀರ ಸಮಾಜದ ಪಾಲಕರು ಇಂದು ಪತ್ರಿಕಾ ಪ್ರಕಟಣೆ ಮೂಲಕ ಗಜೇಂದ್ರಗಡ ತಾಲೂಕು ಆಡಳಿತಕ್ಕೆ ಹಂಡೇವಜೀರ ಸಮಾಜದ ವಿದ್ಯಾರ್ಥಿಗಳಿಗೆ ಶಿಕ್ಷಣದ ಸಲುವಾಗಿ ಜಾತಿ ಆದಾಯ ಪ್ರಮಾಣ ಪತ್ರ ಪ್ರವರ್ಗ ೨ಎ ಮೀಸಲಾತಿ ಕಲ್ಪಿಸಲು ಒತ್ತಾಯಿಸಿ ದಿನಾಂಕ :-21/4/2026 ರಂದು ಹೋರಾಟ ಹಮ್ಮಿಕೊಂಡಿದ್ದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಾಯಿತು.
*ಈ ಸಂದರ್ಭದಲ್ಲಿ ಎಸ್ ಎಫ್ ಐ ಸಂಘಟನೆಯ ಜಿಲ್ಲಾಧ್ಯಕ್ಷರಾದ ಚಂದ್ರು ರಾಠೋಡ* ಮಾತನಾಡಿ ಈಗಾಗಲೇ ರಾಜ್ಯದಲ್ಲಿ ಹಂಡೇವಜೀರ ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ಪ್ರವರ್ಗ 2ಎ ಮೀಸಲಾತಿ ನೀಡುತ್ತಿದ್ದು ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕು ದಂಡಾಧಿಕಾರಿಗಳು ಹುಸಿಕಾರಣ ಹೇಳಿ ಅರ್ಜಿಗಳನ್ನು ತಿರಸ್ಕರಿಸಿ ಪ್ರವರ್ಗ 3ಬಿ ಮೀಸಲಾತಿ ನೀಡುತ್ತಿದ್ದಾರೆ ಇದು ಸರ್ಕಾರದ, ರಾಜ್ಯಪಾಲರ ಆದೇಶಗಳನ್ನು ಗಾಳಿಗೆ ತುರುತ್ತಿದ್ದಾರೆ. ಪ್ರಸ್ತುತ ವಿದ್ಯಾರ್ಥಿಗಳ ಶಾಲಾ ದಾಖಲಾತಿಯಲ್ಲಿ ಹಂಡೇವಜೀರ ಅಂತ ದೃಢಿಕರಣವಿದ್ದು, ಹಾಗೂ ಇದರ ಹಿಂದೆ ತಾವೇ ಮತ್ತು ಹಿಂದಿನ ತಹಸೀಲ್ದಾರ ತಹಶೀಲ್ದಾರ್ ಅವರು ಪ್ರವರ್ಗ 2ಎ ಮೀಸಲಾತಿ ನೀಡಿರುತ್ತಿರಿ ಇದು ವಿದ್ಯಾರ್ಥಿಗಳನ್ನ ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರವನ್ನು ಮಾನ್ಯ ತಹಶೀಲ್ದಾರರು ಮಾಡುತ್ತಿದ್ದಾರೆ ಇದು ಸರಿಯಾದ ಕ್ರಮವಲ್ಲ ಹಂಡೇವಜೀರ ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ಪ್ರವರ್ಗ 2ಎ ಮೀಸಲಾತಿ ನೀಡದಿದ್ದರೆ 21ರಂದು ವಿದ್ಯಾರ್ಥಿಗಳು, ಪಾಲಕರು ಹೋರಾಟ ರೂಪಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
*ಹಂಡೇವಜೀರ ಸಮಾಜದ ಗಜೇಂದ್ರಗಡ ತಾಲೂಕಾಧ್ಯಕ್ಷ ಬಸವರಾಜ ಅಡುರಾಜುರ* ಮಾತನಾಡಿ ಗಜೇಂದ್ರಗಡ ತಾಲೂಕಿನಲ್ಲಿ ಹಂಡೇವಜೀರ ಸಮುದಾಯಕ್ಕೆ ಸೇರಿದ ಸಾಕಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಆದರೆ ಅವರಿಗೆ ಮಾನ್ಯ ತಾಲೂಕು ತಹಶೀಲ್ದಾರರು ಜಾತಿ ಆದಾಯ ಪ್ರಮಾಣಪತ್ರ ಒದಗಿಸಿದೆ ಕೇವಲ ನೆಪವೊಡ್ಡಿ ಇವತ್ತು ಹಂಡೇವಜೀರ ಸಮುದಾಯವನ್ನು ಕಡೆಗಣಿಸುತ್ತಿರುವುದು ಸರಿಯಾಗಿ ಕ್ರಮವಲ್ಲ. ಅಂಬೇಡ್ಕರ್ ಅವರು ಭಾರತದ ಸಂವಿಧಾನದಲ್ಲಿ ಎಲ್ಲರಿಗೂ ಸಮಾನವಾಗಿ ಅವಕಾಶಗಳನ್ನು ಕಲ್ಪಿಸಲಾಗಿದೆ ಆದರೆ ಮಾನ್ಯ ಗಜೇಂದ್ರಗಡ ತಾಲೂಕು ತಹಶೀಲ್ದಾರ್ ಅವರು ಕಾನೂನು ವ್ಯವಸ್ಥೆಯನ್ನು ಗಾಳಿಗೆ ತೂರಿ ತಮ್ಮ ಇಷ್ಟಬಂದಂತೆ ಮಾಡುತ್ತಿದ್ದಾರೆ ಆದ್ದರಿಂದ ಇಡೀ ಗಜೇಂದ್ರಗಡ ತಾಲೂಕಿನ ಹಂಡೇವಜೀರ ಸಮಾಜದ ಎಲ್ಲಾ ವಿದ್ಯಾರ್ಥಿಗಳು, ಪಾಲಕರು ಸೇರಿ ಹೋರಾಟ ಹಮ್ಮಿಕೊಳ್ಳುತ್ತಿದ್ದೆವೆ.
*ಎಸ್ ಎಫ್ ಐ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಗಣೇಶ ರಾಠೋಡ* ಮಾತನಾಡಿ ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಜಾತಿ ಆದಾಯ ಪ್ರಮಾಣಪತ್ರ ತುಂಬಾ ಅವಶ್ಯಕವಾಗಿದ್ದು ಇದನ್ನು ತಾಲೂಕಾಡಳಿತ ಅ,ಅರ್ಥಮಾಡಿಕೋಳ್ಳದೆ ಸತಾಯಿಸುತ್ತಿರುವುದು ಇದು ಜನ ವಿರೋಧಿ ನೀತಿಯನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ ಇದನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿ ಇದೆ ತಿಂಗಳ *ದಿನಾಂಕ:21/04/2026* ರಂದು ಗಜೇಂದ್ರಗಡ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಹೋರಾಟದ ಸ್ಥಳಕ್ಕೆ ಮಾನ್ಯ ತಹಶೀಲ್ದಾರ್ ಅವರು ಬಂದು ಸಮಸ್ಯೆ ಸರಿಪಡಿಸಲು ಮುಂದಾಗಬೇಕೆಂದು ವಿನಂತಿಸಲಾಯಿತು ಈ ಸಂದರ್ಭದಲ್ಲಿ ಚಂದ್ರು ರಾಠೋಡ, ಸುರೇಶಗೌಡ ಪಾಟೀಲ, ಗಣೇಶ ರಾಠೋಡ, ಬಸವರಾಜ ಅಡೂರಾಜೂರ, ಶರಣಗೌಡ ಪಾಟೀಲ, ಮುತ್ತಪ್ಪ ಶರನಗೌಡ ಪಾಟೀಲ, ರಾಮನಗೌಡ ಪಾಟೀಲ, ಚಂದ್ರಗೌಡ ಪಾಟೀಲ, ಮಹಾಂತೇಶ ಪಾಟೀಲ, ನಿಂಗನಗೌಡ ಪಾಟೀಲ, ಸಂಗನಗೌಡ ಪಾಟೀಲ,ಸಕ್ರಪ್ಪ ಕುಡಗುದ್ರಿ,ಬಸನಗೌಡ ನರಗುಂದ,ಯಲ್ಲನಗೌಡ ಪಾಟೀಲ,ಈರನಗೌಡ ಪಾಟೀಲ, ಗವಿಸಿದ್ದಪ್ಪ ಪಾಟೀಲ, ಇದ್ದರು.



Post a Comment