ಸಲೀನಾ 18ರ ಸಂಭ್ರಮಕ್ಕೆ ಹರಿದುಬಂದ ಶುಭಾಶಯದ ಮಹಾಪೂರ
ಬಿಜಾಪುರದ ಬಬಲೇಶ್ವರ ತಾಲೂಕಿಲನ ಸುತಗುಂಡಿಯಲ್ಲಿ ಸಲೀನಾ ಅವರ ಹುಟ್ಟುಹಬ್ಬವನ್ನ ಸಡಗರ ಸಂಭ್ರಮದಿಂದ ಆಚರಿಸಿದರು. ಬಡ ಕುಟುಂಬದಲ್ಲಿ ಜನಿಸಿದ ಉಮರ್ ಕುಟುಂಬಕ್ಕೆ ಸಲೀನಾ ಜನನದ ಬಳಿಕವೇ ಕಷ್ಟಗಳು ದೂರವಾದ್ವು ಎಂದು ಹೇಳುತ್ತಾರೆ. ಸಲೀನಾ ಹುಟ್ಟಿದ ಬಳಿಕ ಉಮರ್ ಮುಲ್ಲಾ ಮುಟ್ಟಿದ್ದೆಲ್ಲವೂ ಚಿನ್ನವಾಗಿದೆ. ಸದ್ದಿಲ್ಲದೇ ಸಮಾಜಸೇವೆಯಲ್ಲಿ ತೊಡಗಿರುವ ಅವರು, ಪ್ರತಿ ವರ್ಷ ಅನ್ನ ಸಂತರ್ಪಣೆ ಮಾಡುತ್ತಾರೆ. ಸಹಾಯ ಕೇಳಿ ಬಂದವರಿಗೆ ಬರಿಗೈಲಿ ಕಳಿಸದ ಇವರು,
ಸುತಗುಂಡಿ ಗ್ರಾಮದ ಹೆಮ್ಮೆಯ ವ್ಯಕ್ತಿಯಾದ ಇವರು, ಸಮಾಜಮುಖಿ ಚಿಂತನೆಗಳ ಮೂಲಕ ಜನಮನ ಗೆದ್ದಿದ್ದಾರೆ. ಮೂಲತಃ ಮುಸ್ಲಿಂ ಸಮುದಾಯಕ್ಕೆ ಸೇರಿದ ಉಮರ್ ಕೃಷಿ ಕ್ಷೇತ್ರದಲ್ಲಿ ಹೊಸತನವನ್ನು ಅಳವಡಿಸಿಕೊಂಡು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ. "ಕಿಸಾನ್ ಹೈಟೇಕ್ ನರ್ಸರಿ" ರೈತರಿಗೆ ಗುಣಮಟ್ಟದ ಸಸಿಗಳನ್ನು ಒದಗಿಸುವ ಮೂಲಕ ಕೃಷಿ ಅಭಿವೃದ್ಧಿಗೆ ನೆರವಾಗುತ್ತಿದೆ. ರೈತರೊಂದಿಗೆ ಸದಾ ಬೆರೆಯುವ ಇವರು ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶ್ರಮಿಸುತ್ತಿದ್ದಾರೆ. ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದು, ಯುವಕರಿಗೆ ಸ್ಪೂರ್ತಿ. ಸುತಗುಂಡಿ ಗ್ರಾಮದ ಹೆಸರನ್ನು ಜಿಲ್ಲೆಗೆ ಸಿಮೀತವಾಗದೇ ರಾಜ್ಯ, ಹೊರರಾಜ್ಯ, ವಿದೇಶಗಳಲ್ಲೂ ಗ್ರಾಮದ ಹೆಸರನ್ನ ಬೆಳಗಿಸಿದ್ದಾರೆ.
ಸಮಾಜ ಸೇವೆ, ಕೃಷಿ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಮೂಲಕ ಜನರ ಮೆಚ್ಚುಗೆ ಗಳಿಸಿರುವ ಉಮರ್ ಮುಲ್ಲಾ ಅವರ ಪುತ್ರಿ ಇಂದು 18ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಹೀಗೆ ಸಲೀನಾ ಹುಟ್ಟುಹಬ್ಬಕ್ಕೆ ಸುತಗುಂಡಿ ಗ್ರಾಮದ ಗುರುಹಿರಿಯರು, ಬಬಲೇಶ್ವರದ ವ್ಯಾಪಾರಸ್ಥರು, ಉಮರ್ ಕುಟುಂಬ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಇದೇ ಸಂದರ್ಭದಲ್ಲಿ ಕುಮಾರಿ ಸಲೀನಾ ಅವರ ಚಿಕ್ಕಪ್ಪ & ಚಿಕ್ಕಮ್ಮನವರಾದ ಲಾಡಜಿ ಮುಲ್ಲಾ & ಸುಪ್ರಿಯಾ ಮುಲ್ಲಾ ಅವರು ಇಂದು ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ಬೇಕಾದ ಕಿಟ್ ಗಳನ್ನು ಹಂಚಿದ್ದಾರೆ. ಮತ್ತು ನರ್ಸರಿ ಕೆಲಸದವರಿಗೂ ಸಿಹಿ ತಿಂಡಿಯನ್ನು ಹಂಚಿ ಹುಟ್ಟು ಹಬ್ಬ ಆಚರಿಸಿದ್ದಾರೆ.



Post a Comment