-->
Bookmark

Gajendragad : ಮಕ್ಕಳಲ್ಲಿ ಆತ್ಮವಿಶ್ವಾಸ & ಸೃಜನಶೀಲತೆ ಬೆಳೆಸಲು ಸಂಗೀತ ಮಹತ್ವದ ಪಾತ್ರ ವಹಿಸುತ್ತದೆ : ಡಾ. ಶ್ರೀರಾಮ್ ಕಾಸರ್

Gajendragad : ಮಕ್ಕಳಲ್ಲಿ ಆತ್ಮವಿಶ್ವಾಸ & ಸೃಜನಶೀಲತೆ ಬೆಳೆಸಲು ಸಂಗೀತ ಮಹತ್ವದ ಪಾತ್ರ ವಹಿಸುತ್ತದೆ :  ಡಾ. ಶ್ರೀರಾಮ್ ಕಾಸರ್

ಗಜೇಂದ್ರಗಡ : (Jun_01_2026)
 
ಗದಗ ಜಿಲ್ಲೆಯ ಗಜೇಂದ್ರಗಡ 
ಪಟ್ಟಣದ ಸ್ವರ ಸಂಗಮ ಸಂಗೀತ ಪಾಠಶಾಲೆಯಲ್ಲಿ ಆಯೋಜಿಸಲಾಗಿದ್ದ ಬೇಸಿಗೆ ಸಂಗೀತ ಶಿಬಿರದ ಸಮಾರೋಪ ಸಮಾರಂಭ ಸಡಗರ ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಡಿನ‌ ಹೆಸರಾಂತ ಡಾ. ಶ್ರೀರಾಮ್ ಕಾಸರ್, ಸಂಗೀತವು ಕೇವಲ ಕಲೆಯಲ್ಲ, ಅದು ವ್ಯಕ್ತಿತ್ವ ವಿಕಸನದ ಸಾಧನವಾಗಿದೆ. ಮಕ್ಕಳಲ್ಲಿ ಶಿಸ್ತು, ಏಕಾಗ್ರತೆ ಹಾಗೂ ಆತ್ಮವಿಶ್ವಾಸ ಬೆಳೆಸುವಲ್ಲಿ ಸಂಗೀತದ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಆಂಜನೇಯ ಭಜಮಾ ಮಂಡಳಿ ಅಧ್ಯಕ್ಷರಾದ ಹನುಮಂತ್ ಕೆಂಚಿ ಮಾತನಾಡಿ, ಸಂಗೀತವು ಮನಸ್ಸಿಗೆ ನೆಮ್ಮದಿ ನೀಡುವುದರ ಜೊತೆಗೆ ಮಕ್ಕಳಲ್ಲಿನ ಪ್ರತಿಭೆ ಹೊರತರುವ ಶಕ್ತಿ ಹೊಂದಿದೆ. ಇಂತಹ ಶಿಬಿರಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದ್ದು, ಪೋಷಕರು ಮಕ್ಕಳನ್ನು ಕಲೆ ಮತ್ತು ಸಂಸ್ಕೃತಿ ಕಲಿಸಿ, ಬೆಳೆಸಲು ಪ್ರೋತ್ಸಾಹಿಸಬೇಕು ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. 

ಇದೇ ಸಂದರ್ಭದಲ್ಲಿ  ಜನಪದ ಗಾಯಕ ರಾಮಕೃಷ್ಣ ಪೂಜಾರ್, ತಬಲವಾದಕ ಧನರಾಜ್ ಕರ್ಣೆ, ಸಂಗೀತ ಶಿಕ್ಷಕಿ ಪ್ರಗತಿ ರಾಯಬಾಗಿ, ಮುರ್ತುಜಾ ಮಳಗಾವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Post a Comment

Post a Comment