ಗಜೇಂದ್ರಗಡ : (Jun_16_2026)
ಶ್ರೀ ಉಮಲೆಪ್ಪ ಶಿವಪ್ಪ ರಾಠೋಡ್ ಇಹಲೋಕ ತ್ಯಜಿಸಿದ್ದಾರೆ. ಸುಮಾರು 70 ವಯಸ್ಸಾಗಿತ್ತು. ಗಜೇಂದ್ರಗಡ ಪಟ್ಟಣದ ಸೇವಾಲಾಲ್ ನಗರ ತಾಂಡಾದ ಮುಖ್ಯಸ್ಥರಾಗಿಯೂ ಗುರುತಿಸಿಕೊಂಡಿದ್ದರು. ಆಸ್ತಿ ಪಾಸ್ತಿ ಇದ್ದರೂ, ಯಾವತ್ತು ತೋರಿಸಲಿಲ್ಲ. ಸರಳ ಸಜ್ಜನ ವ್ಯಕ್ತಿಯಾಗಿದ್ದರು. ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ಬಾಲು ರಾಠೋಡ್ ಅವರ ತಂದೆಯವರಾಗಿದ್ದು, ಸಿಪಿಐಎಂ ಗದಗ ಜಿಲ್ಲಾ ಘಟಕದಿಂದಲೂ ಸಂತಾಪ ಸೂಚಿಸಿದ್ದಾರೆ.
ಐವರು ಗಂಡು ಮಕ್ಕಳು ಮತ್ತು ಐವರು ಹೆಣ್ಣು ಮಕ್ಕಳು ಸೇರಿಂತೆ ಅನೇಕ ಅಪಾರ ಬಾಂಧವರನ್ನ ಅಗಲಿದ್ದಾರೆ.
ಇನ್ನೂ, ಉಮಲೆಪ್ಪ ನಿಧನಕ್ಕೆ ತೇಜಪ್ಪ ಈಶ್ವರಪ್ಪ ರಾಠೋಡ್, ಡಾ. ಜಗನ್ನಾಥ್ ರಾಠೋಡ್
ಪಾಂಡಪ್ಪ ರಾಠೋಡ್, ಲಾಲಪ್ಪ ರಾಠೋಡ್, ತಾರಾಸಿಂಗ್ ರಾಠೋಡ್, ಪ್ರಶಾಂತ್ ರಾಠೋಡ್, ಚಿಕ್ಕ ಮಕ್ಕಳ ತಜ್ಞರಾದ ಡಾ. ಶಿವಕುಮಾರ್ ರಾಠೋಡ್, ಮಹೇಶ್ ರಾಠೋಡ್, ರಾಘು ತಾರಾಸಿಂಗ್ ರಾಠೋಡ್, ಸುನಿಲ್ ತಾರಾಸಿಂಗ್ ರಾಠೋಡ್, ಯಮನಪ್ಪ ಶಿವಪ್ಪ ರಾಠೋಡ್, ಕುಂಟೋಜಿ ಗ್ರಾ.ಪಂ ಅಧ್ಯಕ್ಷರಾದ ಪೂನವ್ವ ರಾಠೋಡ್, ವಿರೇಶ್ ರಾಠೋಡ್, ಅರ್ಜುನ್ ರಾಠೋಡ್, ಕಾಲಕಾಲೇಶ್ವರದವರಾದ ಸೋಮಪ್ಪ ರಾಠೋಡ್, ಕಣವಿ ತಾಂಡಾದ ಕುಮಾರ್ ರಾಠೋಡ್ ಸಮಾಜದ ಮುಖಂಡರಾದ ಕೃಷ್ಣಪ್ಪ ರಾಠೋಡ್, ಶರಣಪ್ಪ ರಾಠೋಡ್, ಸೇರಿದಂತೆ ಗಜೇಂದ್ರಗಡ ಸೇರಿದಂತೆ ಸುತ್ತಮುತ್ತಲ ತಾಂಡಾದ ಗುರು ಹಿರಿಯರು ಸಂತಾಪ ಸೂಚಿಸಿದ್ದಾರೆ. ಗಜೇಂದ್ರಗಡದ ಬಸವೇಶ್ವರ ನಗರದ ಸ್ವ ಗ್ರಹದಲ್ಲಿ ನಿರವ ಮೌನ ಆವರಿಸಿದೆ.
ಜೂನ್ 17 ರಂದು ಗಜೇಂದ್ರಗಡದಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.



Post a Comment