-->
Bookmark

crime : ಪತ್ನಿಯನ್ನ ಕಳುಹಿಸಿಲ್ಲ ಎಂದು ಅತ್ತೆಗೆ ಚಾಕು ಇರಿತ : ಮನೋಜ್ ಬಂಧನ

ಪತ್ನಿಯನ್ನ ಕಳುಹಿಸಿಲ್ಲ ಎಂದು ಅತ್ತೆಗೆ ಚಾಕು ಇರಿತ : ಮನೋಜ್ ಬಂಧನ

ಬೆಂಗಳೂರು

ಪತ್ನಿಯನ್ನು ತಮ್ಮೊಂದಿಗೆ ಕಳುಹಿಸಲಿಲ್ಲವೆಂಬ ಕಾರಣಕ್ಕೆ ಅತ್ತೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಆರೋಪದಡಿ ಮನೋಜ್ ಕುಮಾರ್ (28) ಅವರನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

'ಇಬ್ಬಲೂರಿನಲ್ಲಿ ಜೂನ್ 8ರಂದು ನಡೆದಿರುವ ಘಟನೆಯಲ್ಲಿ ಗೀತಾ (49) ಗಾಯಗೊಂಡಿದ್ದಾರೆ. ಅವರ ಹೇಳಿಕೆ ಹಾಗೂ ಮಗಳು ವರ್ಷಿತಾ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಅಳಿಯ ಮನೋಜ್‌ಕುಮಾರ್‌ನನ್ನು ಬಂಧಿಸಲಾಗಿದೆ' ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

`ಮಂಡ್ಯದ ಗೀತಾ ಅವರ ಮಗಳು ವರ್ಷಿತಾ, ಕೋಲಾರದ ಮನೋಜ್‌ನನ್ನು ಪ್ರೀತಿಸಿ ಮದುವೆಯಾಗಿದ್ದರು. 

ಕ್ಯಾಬ್ ಚಾಲಕನಾಗಿದ್ದ ಮನೋಜ್, ಪತ್ನಿ ವರ್ಷಿತಾ ಜೊತೆ ಇಬ್ಬಲೂರಿನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. 

ಮದ್ಯವ್ಯಸನಿ ಆಗಿದ್ದ ಮನೋಜ್, ನಿತ್ಯವೂ ಕುಡಿದು ಬಂದು ಪತ್ನಿಗೆ ಹೊಡೆಯುತ್ತಿದ್ದ. ಬೇಸತ್ತ ಪತ್ನಿ, ವರ್ಷದ ಹಿಂದೆಯೇ ಗಂಡನ ಮನೆ ತೊರೆದು ತವರು ಮನೆ ಸೇರಿದ್ರು. 

`ತವರು ಮನೆಗೆ ಹೋಗಿದ್ದ ಮನೋಜ್, 'ಮದ್ಯ ಕುಡಿಯುವುದಿಲ್ಲ. ಪತ್ನಿಗೆ ಹೊಡೆಯುವುದಿಲ್ಲ' ಎಂದು ಹೇಳಿ ವರ್ಷಿತಾ ಅವರನ್ನು ಬೆಂಗಳೂರಿಗೆ ಕರೆತಂದಿದ್ದ. ಆದ್ರೆ, ಹಳೇ ಚಾಳಿ ಮುಂದುವರಿಸಿದ್ದ ಮನೋಜ್ ನಿಂದ ಬೇಸತ್ತ ವರ್ಷಿತಾ, ಪೋಷಕರಿಗೆ ವಿಷಯ ತಿಳಿಸಿದ್ರು. 

ಮಗಳ ಮನೆಗೆ ಹತ್ತಿರವಿದ್ದರೆ, ಪತಿ ಹೆದರುತ್ತಾನೆಂದು ತಿಳಿದು ಪೋಷಕರು ಬೆಂಗಳೂರಿಗೆ ಬಂದು ಇಬ್ಬಲೂರಿನಲ್ಲಿ ಪ್ರತ್ಯೇಕವಾಗಿ ನೆಲೆಸಿದ್ರು. 

'ಕೆಲ ತಿಂಗಳ ಹಿಂದೆಯಷ್ಟೇ ವರ್ಷಿತಾ ಪುನಃ ಪತಿ ಜೊತೆ ಜಗಳ ಮಾಡಿ ತವರು ಮನೆಗೆ ಬಂದಿದ್ರು. ವಾಪಸ್ ಹೋಗಲ್ಲ ಎಂದು ಪಟ್ಟು ಹಿಡಿದಿದ್ರು.  ಜೂನ್ 8ರಂದು ಇಬ್ಬಲೂರಿನಲ್ಲಿರುವ ತವರು ಮನೆಗೆ ಬಂದಿದ್ದ ಆರೋಪಿ, ಪತ್ನಿಯನ್ನು ಕಳುಹಿಸುವಂತೆ ಒತ್ತಾಯಿಸಿದ್ದಾನೆ. ಆದ್ರೆ, ಅತ್ತೆ ಗೀತಾ ಒಪ್ಪಿರಲಿಲ್ಲ. ಅತ್ತೆ ಒಪ್ಪದಿದ್ದಾಗ, ಕೋಪಗೊಂಡ  ಮನೋಜ್, ಗೀತಾ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ರು..‌

`ಸಹಾಯಕ್ಕೆ ಹೋಗಿದ್ದ ಸ್ಥಳೀಯರು ಗೀತಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. 

ಆರೋಪಿ ಮನೋಜ್ ನನ್ನ ಪೊಲೀಸರು ಬಂಧಿಸಿದ್ದು,  ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ತಿಳಿದು ಬಂದಿದೆ.
Post a Comment

Post a Comment