-->
Bookmark

CET ಫಲಿತಾಂಶ : ಬಾಲಕಿಯರೇ ಮೇಲು

ಸಿಇಟಿ ಫಲಿತಾಂಶ : ಬಾಲಕಿಯರೇ ಮೇಲು 

ಬೆಂಗಳೂರು : 

2023-24ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟವಾಗಿದ್ದು, ಎಲ್ಲ ವಿಭಾಗಗಳಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಪರೀಕ್ಷೆಗೆ ಹಾಜರಾಗಿದ್ದ 2,44,345 ವಿದ್ಯಾರ್ಥಿಗಳಲ್ಲಿ ಎಂಜಿನಿಯರ್ ಕೋರ್ಸ್‌ಗೆ 2,03,381, ಕೃಷಿ ವಿಜ್ಞಾನಕ್ಕೆ 1,64,187, ಪಶುಸಂಗೋಪನೆಗೆ 1,66,756, ಯೋಗ ಮತ್ತು ನ್ಯಾಚುರೋಪತಿಗೆ 1,66,746, ಬಿ ಫಾರ್ಮಾಕ್ಕೆ 2,06,191 ಹಾಗೂ 2,06,340 ವಿದ್ಯಾರ್ಥಿಗಳು ಡಿ ಫಾರ್ಮಾ ಕೋರ್ಸ್ ಗಳಿಗೆ ಅರ್ಹತೆ ಪಡೆದಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಜಾಲತಾಣ http://kea.kar.nic.inನಲ್ಲಿ ದೊರೆಯಲಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಹೇಳಿದ್ದಾರೆ.


Post a Comment

Post a Comment