-->
Bookmark

Gajendragad : ಬಿಎಸ್.ಎಸ್ ಕಾಲೇಜಿನಲ್ಲಿ‌ ಯೋಗ ಶಿಬಿರ - ಗಮನ ಸೆಳೆದ ವಿರೇಶ್ ಗಾಳಿ ಯೋಗ

ಬಿಎಸ್.ಎಸ್ ಕಾಲೇಜಿನಲ್ಲಿ‌ ಯೋಗ ಶಿಬಿರ - ಗಮನ ಸೆಳೆದ ವಿರೇಶ್ ಗಾಳಿ ಯೋಗ 

ಗಜೇಂದ್ರಗಡ
ಯೋಗ, ದೇಹವನ್ನ‌ ಸದೃಢವಾಗಿಸಿದರೇ, ಮನಸ್ಸಿನ ಏಕಾಗೃತೆಗೆ ಸಹಕಾರಿಯಾಗಿದೆ. ಇಂದಿನ ಯುಗದಲ್ಲಿ ಎಲ್ಲರಿಗೂ ಏಕಾಗ್ರತೆಯ ಕೊರತೆ ಎದುರಾಗಿದೆ. ತಾವು ಬಯಸಿದ್ದು ಥಟ್ ಅಂತಾ ಆಗಬೇಕು. ಇಲ್ಲವಾದರೇ ಹತಾಶೆಗೊಳಗಾಗುತ್ತಾರೆ. ಗುರಿ ಸಾಧನೆಗೆ ಮೈ ಮನಸ್ಸು ಶಾಂತವಾಗಿರಬೇಕು. ಅದಕ್ಕೆ ಯೋಗ ಸಹಕಾರಿಯಾಗಿದೆ. ಇನ್ನೂ, ಜೂನ್ ೨೧ ರಂದು ವಿಶ್ವಾದ್ಯಂತ ಯೋಗ ದಿನಾಚರಣೆಗೆ ಸಕಲ ಸಿದ್ಧತೆ ನಡೆದಿದೆ. ಗಜೇಂದ್ರಗಡದ ಬಿ.ಎಸ್. ಎಸ್ ಕಾಲೇಜಿನಲ್ಲಿ ಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ. ಯೋಗ ಪಟು ವೀರೇಶ್ ಗಾಳಿ ನೇತೃತ್ವದಲ್ಲಿ ನಡೆಯುತ್ತಿದೆ. ಪ್ರಾಚಾರ್ಯ ಮಹೇಂದ್ರ ಜಿ ಅವರು ಮಾನವೀಯತೆಗಾಗಿ ಯೋಗ ಎಂಬ ಧ್ಯೆಯದೊಂದಿಗೆ  ಶಿಬಿರಕ್ಕೆ ಚಾಲನೆ‌ ನೀಡಿದ್ರು. ವಿರೇಶ್ ಅವರ ಯೋಗ ನೋಡಿ ವಿದ್ಯಾರ್ಥಿಗಳು ಆಶ್ಚರ್ಯ ಚಕಿತರಾದ್ರು.. ಏಳು ದಿನ ನಡೆಯುವ ಈ ಶಿಬಿರ ಜೂನ್ ೨೧ ರ ಯೋಗ ದಿನ ದಂದು ಕೊನೆಹೊಳ್ಳಲಿದೆ. 
 ಪ್ರಚಾರ್ಯ ಮಹೇಂದ್ರ ಜಿ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಮಂಜುನಾಥ್ ಸೋಮನಕಟ್ಟಿ, ಸೇರಿದಂತೆ ಕಾಲೇಜಿನ ಬೊಧಕ ಬೊಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಭಾಗವಹಿಸಿದ್ರು...
Post a Comment

Post a Comment