-->
Bookmark

Gajendragad: ತುಳಜಾ ಭವಾನಿ ಶಿಕ್ಷಣ ಸಂಸ್ಥೆಯಲ್ಲಿ ಯೋಗ ದಿನ : ಆರೋಗ್ಯವೇ ಭಾಗ್ಯ ಎಂದ ಲಾಲಪ್ಪ ರಾಠೋಡ್

ತುಳಜಾ ಭವಾನಿ ಶಿಕ್ಷಣ ಸಂಸ್ಥೆಯಲ್ಲಿ ಯೋಗ ದಿನ : ಆರೋಗ್ಯವೇ ಭಾಗ್ಯ ಎಂದ ಲಾಲಪ್ಪ ರಾಠೋಡ್

Gajendragad ; 
ಅಂತಾರಾಷ್ಟ್ರೀಯ ಯೋಗ ದಿನವನ್ನ ಗಜೇಂದ್ರಗಡ ಪಟ್ಟಣದ ಶ್ರೀ ತುಳಜಾ ಭವಾನಿ ಶಿಕ್ಷಣ ಸಂಸ್ಥೆಯಲ್ಲಿ ಆಚರಿಸಲಾಯ್ತು. ಬೆಳ್ಳಂ‌ಬೆಳಗ್ಗೆ ಮಕ್ಕಳು, ಶಾಲಾ ಸಿಬ್ಬಂದಿಗಳು ಯೋಗ ಮಾಡಿ, ಆರೋಗ್ಯದ ಮಹತ್ವ ಸಾರಿದ್ರು... 
ಆಧುನಿಕ ಯುಗದಲ್ಲಿ ಆಯೋಗ್ಯ ಎಂಬುದು ದುಡ್ಡು ಕೊಟ್ಟು ಖರೀದಿಸಲಾಗದ ವಸ್ತು. ಆರೋಗ್ಯವನ್ನ ಕಾಪಾಡಿಕೊಳ್ಳಿ ಎಂದು ಶಿಕ್ಷಣ ಸಂಸ್ಥೆ ಸಂಸ್ಥಾಪಕರಾದ ಲಾಲಪ್ಪ ರಾಠೋಡ್ ಮಕ್ಕಳಿಗೆ ಕಿವಿ ಮಾತು ಹೇಳಿದ್ರು.. 
ಶಾಲೆ ಸಂಸ್ಥಾಪಕರಾದ ಲಾಲಪ್ಪ ರಾಠೋಡ್ ಮತ್ತು ಲೋಕಪ್ಪ ರಾಠೋಡ್ ಬಡ ಮಕ್ಕಳ ಭವಿಷ್ಯ ರೂಪಿಸುತ್ತಿದ್ದಾರೆ. ಶಾಲೆ ಮತ್ತು ಡಿಗ್ರಿ ಕಾಲೇಜ್ ನಡೆಸುತ್ತಿರುವ ಶಿಕ್ಷಣ ಸಂಸ್ಥೆ ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಕ್ರಾಂತಿಗೆ ಮುಂದಾಗಿದೆ.
ಹೆಚ್ ಎಂ ಆರ್. ಎನ್ ರೇಖಾ ಮಾನೆ, ಮಂಜುಳಾ ಭಜಂತ್ರಿ, ವೈ.ಎಲ್ ನದಾಫ್, ಸಾವಿತ್ರಿ ಹಿರೇಮನಿ, ಸುನಿತಾ ಹವಾಲ್ದಾರ್, ಭಾಗ್ಯಾ ಅದಾಪೂರ್, ಉಮಾ‌ ಯಂಕಂಚಿ, ಸರಸ್ವತಿ ರಾಠೋಡ್, ರುದ್ರಪ್ಪ ಚವ್ಹಾಣ್, ದೇವಕ್ಕ ಚವ್ಹಾಣ್, ಲಕ್ಷ್ಮೀ ಗಣವಾರಿ ಮತ್ತು ವಿದ್ಯಾರ್ಥಿಗಳು ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು.
Post a Comment

Post a Comment