-->
Bookmark

GS Patil : ಸ್ವಾತಂತ್ರ್ಯ ನಂತರ ಮೊದಲ ಬಾರಿ ಬಸ್ ಕಂಡ ಗ್ರಾಮ : ಶಾಸಕ ಜಿ.ಎಸ್.‌ ಪಾಟೀಲ್

ಸ್ವಾತಂತ್ರ್ಯ ನಂತರ ಮೊದಲ ಬಾರಿ ಬಸ್ ಕಂಡ ಗ್ರಾಮ :  ಶಾಸಕ ಜಿ.ಎಸ್.‌ ಪಾಟೀಲ್

ಗಜೇಂದ್ರಗಡ : 
ಸ್ವಾತಂತ್ರ್ಯ ದೊರಕಿ ಏಳು ವರೆ ದಶಕ ಕಳೆದರೂ ರೋಣ ಕ್ಷೇತ್ರ ಮೂಲ ಸೌರ‍್ಯ ವಂಚಿತ ದ್ಯಾಮುಣಸಿ ಗ್ರಾಮಕ್ಕೆ ಸಾರಿಗೆ ಸಂಸ್ಥೆಯ ಬಸ್ ಸೌಕರ್ಯ ಪ್ರಾರಂಭಿಸಲಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು. 
ಗಜೇಂದ್ರಗಡ ಪಟ್ಟಣದ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಿಂದ ದ್ಯಾಮುಣಸಿ ಗ್ರಾಮಕ್ಕೆ ತೆರಳುವ ನೂತನ ಬಸ್ ಸಂಚಾರಕ್ಕೆ ಅವರು ಹಸಿರು ನಿಶಾನೆ ತೋರಿಸಿ ಮಾತನಾಡಿದರು.

ಸೂಡಿ ಗ್ರಾ.ಪಂ ವ್ಯಾಪ್ತಿಯ ದ್ಯಾಮುಣಸಿ ಗ್ರಾಮದ ಸುತ್ತಲೂ ಹಳ್ಳಗಳು ಆವರಿಸಿದೆ. ಮಳೆ ಆದಾಗ ಗ್ರಾಮ ನಡುಗಡ್ಡೆಯಾಗಿರುತ್ತದೆ. ಶಾಲಾ ತೆರಳುವ ಮಕ್ಕಳು, ಮಹಿಳೆಯರು, ಗ್ರಾಮಸ್ಥರು ತೊಂದರೆ ಅನುಭವಿದ್ದಾರೆ. ತಾವೂ ಹಿಂದೆ ಶಾಸಕರಾಗಿದ್ದಾಗ ಗ್ರಾಮಕ್ಕೆ ಸಂಚರಿಸುವ ರಸ್ತೆಗೆ ನಾಲ್ಕು ಕೋಟಿ ಅನುದಾನ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿತ್ತು. ಬಳಿಕ ಹಿಂದಿನ ಜನಪ್ರತಿನಿಧಿಗಳು ಕಡೆಗಣಿಸಿದ್ದರು. ಈಗ ಮತ್ತೆ ಅಂತಹ ಗ್ರಾಮಗಳಿಗೆ ರಸ್ತೆ, ಬಸ್ ಸಂಚಾರ ಪುನರ್ ಆರಂಭಿಲಸಾಗಿದೆ. ಗ್ರಾಮಸ್ಥರು ಕಲ್ಪಿಸಿದ ಯೋಜನೆಗಳ ಸದ್ಭಳಿಕೆ ಮಾಡಕೊಳ್ಳಲು ಮುಂದಾಗಿ ಎಂದರು. 


ಡಿಪೋ ವ್ಯವಸ್ಥಾಪಕ ಚಂದ್ರಶೇಖರ ಲೋಕಂಡೆ, ಶಿವರಾಜ ಘೊರ್ಪಡೆ, ಹೆಚ್.ಎಸ್. ಸೊಂಪುರ, ವಿರಣ್ಣಾ ಶೆಟ್ಟರ್, ಮುರ್ತುಜಾ ಡಾಲಾ ಯತ್, ಯಲ್ಲಪ್ಪ ಬಂಕದ, ಮಾರುತಿ ಕಲ್ಲೊಡ್ಡರ್, ಬಸವರಾಜ ಚೆನ್ನಿ, ಶ್ರೀಧರ ಬಿದರಳ್ಳಿ, ರಾಜು ಸಾಂಗ್ಲಿಕರ್, ವೆಂಕಟೇಶ್ ಮುದ್ಗಲ್, ನೀಲಮ್ಮಾ ಬಳೂಟಗಿ, ರೇಣುಕಾ ಮೆಣದಾಳ, ವಿಠುಬಾಯಿ ರಂಗ್ರೇಜಿ, ಜಯಶ್ರೀ ಪವಾರ, ಅರ್ಜುನ ರಾಠೋಡ್, ಸಿದ್ದು ಗೊಂಗಡಶೆಟ್ಟಿ ಮಠ, ಎ.ಬಿ. ತಹಶೀಲ್ದಾರ, ಎ.ಡಿ. ಕೊಲಕಾರ, ಬಸವರಾಜ್ ನವಲಗುಂದ್, ವಿ.ಬಿ. ಸೊಮನಕಟ್ಟಿಮಠ ಸೇರುದಂತೆ ಇನ್ನಿತರಿದ್ದರು.

(ವೀಡಿಯೋ ನೋಡಿ) - SUBSCRIBE ಮಾಡಿ
Post a Comment

Post a Comment