-->
Bookmark

Bengaluru : ವೈದಿಕ ಶಿರೋಮಣಿ ಮತ್ತೊಮ್ಮೆ ಗಜೇಂದ್ರಗಡಕ್ಕೆ

Bengaluru : 
ವೈದಿಕ ಶಿರೋಮಣಿ ಮತ್ತೊಮ್ಮೆ  ಗಜೇಂದ್ರಗಡಕ್ಕೆ 


 ಬೆಂಗಳೂರು ಮಹಾ ನಗರದಲ್ಲಿ ಕಳೆದ ಮೂರು ದಿನಗಳಿಂದ ನಡೆದ 6ನೇ ವರ್ಷದ ವೀರಶೈವ ಅರ್ಚಕ, ಪುರೋಹಿತ, ಆಗಮಿಕರ ಕಾರ್ಯಗಾರದಲ್ಲಿ ಸಾಧಕರಿಗೆ ಪ್ರಶಸ್ತಿಪ್ರಧಾನ ಸಮಾರಂಭ ಇಂದು ಮುಕ್ತಾಯವಾಗಿತು.
ವೈದಿಕ ಚಾರಿಟೇಬಲ್ ಟ್ರಸ್ಟ್ ಮಹಾಲಕ್ಷ್ಮಿ ಗುರುಕುಲ ಬೆಂಗಳೂರು ಇವರ ಆಶ್ರಯದಲ್ಲಿ ನಡೆದ ಕಾರ್ಯಗಾರವನ್ನು ಯಡಿಯೂರು ಮಹಾ ಕ್ಷೇತ್ರದ ಷ. ಬ್ರ. ಶ್ರೀರೇಣುಕಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟನೆ ಮಾಡಿದರು.
ಶ್ರೀ ಗಳು ಪುರೋಹಿತರಕುರಿತು ವೀರಶೈವ ಧರ್ಮ ಬಹಳ ಪುರಾತನವಾಗಿದ್ದು  ವೀರಶೈವಆಗಮ ಆಧಾರವಾಗಿದ್ದು....ನಮ್ಮ ಧರ್ಮಆಚಾರ, ಇಷ್ಟಲಿಂಗ ಪೂಜೆ,ಷೋಡಷ ಸಂಸ್ಕಾರ ಗಳನ್ನು ಆಚಾರ ವಿಚಾರಗಳನ್ನು  ಒಳಗೊಂಡಿದೆ ಪುರೋಹಿತರಾದ ತಾವು ವೇದಾಭ್ಯಾಸಮಾಡಿ ಭಕ್ತರ ಪ್ರೀತಿಗೆ ಪಾತ್ರರಾಗಬೇಕೆಂದು ತಿಳಿಸಿದರು. ನಿತ್ಯ ಇಷ್ಟಲಿಂಗ ಪೂಜೆಮಾಡುತ್ತಾ ತಮ್ಮ ಊರು,ನಗರಗಳಲ್ಲಿ ಧರ್ಮ ಉಪದೇಶ ಧರ್ಮ ಜಾಗೃತಿ ಮಾಡುತ್ತಾ ಭಕ್ತರಿಗೆ ನೀವೇ ಗುರುವಾಗಿ ಕಲ್ಪವೃಕ್ಷ ವಾಗಬೇಕು ಭಕ್ತರ ಭಕ್ತಿ ಪ್ರೀತಿಗೆ ಪಾತ್ರರಾಗಬೇಕೆಂದು ಹೇಳಿದರು.
ಈ ಕಾರ್ಯಗಾರದಲ್ಲಿ 60 ವರ್ಷ್ ತುಂಬಿದ ದಂಪತಿಗಳಿಗೆ   ಷಷ್ಠಿ ಪೂರ್ತಿ ಆಚರಿಸಲಾಯಿತು.
ಇದಕ್ಕೆ ಶಾಸ್ತ್ರದಲ್ಲಿ ಉಗ್ರರಥ ಶಾಂತಿ ಎಂದು ಕರೆಯುತ್ತಾರೆ.
ಈ ಶಾಂತಿ ಕಾರ್ಯವನ್ನು ವೀರಶೈವ ಆಗಮದ ಪ್ರಕಾರ ಹೇಗೆ ಮಾಡಬೇಕು ಎಂದು ವೀರಶೈವ ವೇದ ಪಂಡಿತರಿಂದ ಪ್ರಾಯೋಗಿಕವಾಗಿ ತೋರಿಸಲಾಯಿತು. ಈ ಕಾರ್ಯದಲ್ಲಿ ದಂಪತಿಗಳಾದ ಶ್ರೀಮತಿ ಶಕುಂತಲಾ ಹಾಗೂ ನಾಗರಾಜು ಬೆಂಗಳೂರು ಇವರು ಸಾವಿರಾರು ಅರ್ಚಕರ ಪುರೋಹಿತರ ಆಶೀರ್ವಾದ ಪಡೆದದ್ದು ವಿಶೇಷವಾಗಿತು.
ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ, ಮಂಡಲಗಳನ್ನು ಹಾಗೂ ಕಳಶಲಂಕಾರಗಳನ್ನು ವಿಶೇಷ ವಾಗಿ ಹುಡಲಾಗಿತ್ತು. ಗುರುಪೂಜೆ,ಗಣಪತಿ,ಗಂಗಾ, ಸ್ವಸ್ತಿ ಪುಣ್ಯಾಹವಾಚನ, ನಾಂದಿಸಮಾರದಾನ, ಸಪ್ತಚಿರಂಜೀವಿ, ನವಗ್ರಹಪೂಜಾ ಹೀಗೆ ವೀರಶೈವ ಆಗಮ ಶಾಸ್ತ್ರದ ಪ್ರಕಾರ 3ದಿನ ಷಷ್ಠಿಪೂರ್ತಿ ಪೂಜಾ ಕಾರ್ಯಕ್ರಮವನ್ನು ಮಹಾರಾಷ್ಟದ ವೇ. ಬ್ರ. ವಿದ್ವಾನ್. ಶ್ರೀಡಾ. ಶಿ ವಯೋಗಿ. ಸಂದಗೋಳಿಮಠ
ಶ್ರೀ ಸೋಮನಾಥ ಶಾಸ್ತ್ರಿ. ಹಿರೇಮಠ
ಬಸವರಾಜ್ ಶಾಸ್ತ್ರೀ. ಪುರಾನಿಕ್
ರಾಜಶೇಖರಶಾಸ್ತ್ರೀ  ನಡೆಶಿಕೊಟ್ಟರು.
ಮಹಾರಾಷ್ಟ್ರ ಸೊಲ್ಲಾಪುರದ ಭಾರ್ಷಿ ಮಠದ ಷ. ಬ್ರ. ಶ್ರೀಮಣಿಕಂಠ ಶಿವಾಚಾರ್ಯಮಹಾಸ್ವಾಮಿಗಳು ಪುರೋಹಿತರಿಗೆ ಷಷ್ಟಿ ಪೂರ್ತಿ ಉಗ್ರರಥ ಶಾಂತಿ ವಿಧಾನ, ಉದ್ದೇಶ, ಫಲಶ್ರುತಿಗಳ ಬಗ್ಗೆ ಉಪನ್ಯಾಸ ದಯಪಾಲಿಸಿದರು.
ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಶಿದ ರಾಜಗುರು ಕೆಳದಿಯ ಭುವನಗಿರಿ ಮಹಾಸಂಸ್ಥಾನಮಠದ ಷ. ಬ್ರ. ಮರುಳಶಿದ್ದ ಶಿವಾಚಾರ್ಯಮಹಾಸ್ವಾಮಿಗಳು ಮಾತನಾಡಿ
ಜಂಗಮರು ಜಗದೊದ್ದಾರಕ್ಕೆ ಬಂದವರು ನಿಮ್ಮಿಂದ ಭಕ್ತರ ಕಷ್ಟಗಳು ದೂರವಾಗಬೇಕು. ನೀವು ವೇದ ಅಭ್ಯಾಸ ಮಾಡಿ ಸಮಾಜದ ಪ್ರೀತಿಗಳಿಸಬೇಕು. ಎಂದು ಹೇಳಿದರು. ಕಲಬುರಗಿ ಆಂದೋಲದ ಷ. ಬ್ರ. ಶಿದ್ದಲಿಂಗ ಸ್ವಾಮಿಗಳು ಪುರಾತನ ವೀರಶೈವಧರ್ಮವನ್ನು ಹಾಡಿ ಹೊಗಳಿ ನಮ್ಮ ದೇಶ ಹಿಂದೂ ಸಂಪ್ರುದಾಯ ಆಚರಣೆಯಲ್ಲಿ ಅನಾಧಿಕಾಲದಿಂದಲೂ ತನ್ನದೇ ಅದ ಧಾರ್ಮಿಕ ಇತಿಹಾಸ ಹೊಂದಿದ ಹಿಂದೂ ರಾಷ್ಟ್ರವಾಗಿದೆ ದುರ್ದೈವ ಪಾಶ್ಚಿಮಾತ್ಯ ಸಂಪ್ರದಾಯನೋಡಿ ಮನಸಿಗೆ ನೋವಾಗುತ್ತದೆ, ಹಿಂದೆ ಪರಕಿಯರ ದಾಳಿ ಒಳಗಾದರೂ ನಮ್ಮ ದೇಶ ಹಿಂದೆ,ಭೂತ, ಭವಿಷ್ಯತ್, ವರ್ತಮಾನ ಕಾಲದಲ್ಲಿಯೂ ಹಿಂದುರಾಷ್ಟ್ರ ವಾಗಿಯೇ ಇರುತ್ತದೆ..... ಧರ್ಮಕ್ಕೆ ಧಕ್ಕೆ ಬಂದಾಗ ಮತ್ತೆ ಭಗವಂತ ಯಾರದೋರುಪದಲ್ಲಿ ಹುಟ್ಟಿ ಬರುತ್ತಾನೆ..... ಈ ದಿಸೆಯಲ್ಲಿ ಪುರೋಹಿತರ ಪಾತ್ರ ಮುಖ್ಯ ಸಂಪ್ರದಾಯಗಳನ್ನು ಉಳಿಸಿ ಬೆಳೆಸಿ ಎಂದು ಹೇಳಿದರು
ಟ್ರಸ್ಟ್ ಅಧ್ಯಕ್ಷರಾದ ವೇ. ಬ್ರ. ಶ್ರೀ ರಾಜಕುಮಾರ ಶಾಸ್ತ್ರಿಗಳ ಅಧ್ಯಕ್ಷತೆಯಲ್ಲಿ 3ದಿನಗಳ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಮಹಾರಾಷ್ಟ, ಅಂದ್ರ, ತೆಲಂಗಾಣ, ತಮಿಳುನಾಡು, ಕರ್ನಾಟಕ ದ 30 ಜಿಲ್ಲೆ ಗಳಿಂದ  ಆಗಮಿಸಿದ ಅರ್ಚಕರ ಪುರೋಹಿತರಿಗೆ ವಂದನಾರ್ಪಣೆ ಮಾಡಿದರು.
Post a Comment

Post a Comment