-->
Bookmark

Gajendragad : ರಾಹುಲ್ ಗಾಂಧಿ ಅನರ್ಹತೆಗೆ ಖಂಡನೆ : ಪಟ್ಟಣದಲ್ಲಿ ಕೈ ಪಾಳಯದಿಂದ ಮೌನ ಪ್ರತಿಭಟನೆ


Gajendragad : 

ರಾಹುಲ್ ಗಾಂಧಿ ಅನರ್ಹತೆಗೆ ಖಂಡನೆ : ಪಟ್ಟಣದಲ್ಲಿ :ಕೈ” ಪಾಳಯದಿಂದ ಮೌನ ಪ್ರತಿಭಟನೆ 
ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ಸ್ಥಾನದ ಅನರ್ಹತೆ ಖಂಡಿಸಿ ಪಟ್ಟಣದಲ್ಲಿ ಕಾಂಗ್ರೆಸ್ ಮೌನ ಪ್ರತಿಭಟನೆ ನಡೆಸಿತು. ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮುಂಜಾನೆ 10 ಗಂಟೆಯಿAದ ಸಂಜೆ 5 ಗಂಟೆ ವರೆಗೆ ಮೌನವಾಗಿ ಪ್ರತಿಭಟನೆ ನಡೆಸಿದರು. ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್ ಮತ್ತು ನರೇಗಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ, ಮಾತನಾಡಿದ ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ಘೋರ್ಪಡೆ, ಬಿಜೆಪಿ, ರಾಹುಲ್ ಗಾಂಧಿ ಅವರ ಮೇಲೆ ಹಗೆತನ ಸಾಧಿಸುತ್ತಿದೆ. ದಬ್ಬಾಳಿಕೆ ಮಾಡುತ್ತಿದೆ. ಅವರನ್ನ ದೋಷಿ ಎಂದು ಸಾಬೀತು ಮಾಡಿ, ಅನರ್ಹ ಮಾಡಿದ್ದಾರೆ, ಇದರ ವಿರುದ್ಧ ಮೌನ ಪ್ರತಿಭಟನೆ ಮಾಡುವ ಮುಖಾಂತರ ರಾಹುಲ್ ಗಾಂಧಿ ಅವರಿಗೆ ನೈತಿಕ ಬೆಂಬಲ ನೀಡುವ ಮೂಲಕ ಅವರೊಂದಿಗೆ, ದೇಶದ ಕಾಂಗ್ರೆಸ್ ಪಕ್ಷ ಕಾರ್ಯಕರ್ತರು ಇದ್ದಾರೆ. ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಅವರಿಗೆ ಬೆಂಬಲ ಸೂಚಿಸುತ್ತೇವೆ. ದೇಶದ ಜನರು ಇತ್ತ ಕಡೆ ಗಮನ ಹರಿಸಬೇಕು. ಬಿಜೆಪಿ ಸೇಡಿನ ರಾಜಕೀಯ ಮಾಡುವುದರ ಮೂಲಕ ತೆಜೋವಧೆ ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ದೇಶಾದ್ಯಂತ ಪ್ರತಿಭಟನೆ ಮಾಡಲಿದ್ದೇವೆ. ರಾಜಕೀಯ ದ್ವೇಷ ಸಲ್ಲದು, ಬಿಜೆಪಿ ನಡೆಯನ್ನ ಖಂಡಿಸಿ, ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಪಕ್ಷಗಳ ಮೇಲೆ ಗೂಬೆ ಕೂರಿಸಿ, ರಾಜಕೀಯ ಮಾಡುತ್ತಿದೆ. ಮಹಾತ್ಮಾ ಗಾಂಧಿಜೀ ಹಾಕಿಕೊಟ್ಟ ಹಾದಿಯಲ್ಲೆ ಸಾಗುತ್ತಿದ್ದೇವೆ. ಹೀಗಾಗಿ, ಮೌನವಾಗಿ ಪ್ರತಿಭಟನೆಯನ್ನ ಹಮ್ಮಿಕೊಂಡಿದ್ದೇವೆ ಎಂದು ಶಿವರಾಜ್ ಘೋರ್ಪಡೆ ಸ್ಪಷ್ಟಪಡಿಸಿದರು. 
ಇನ್ನೂ, ನರೇಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಬೆಟಗೇರಿ ಮಾತನಾಡಿ, ಬಿಜೆಪಿ ರಾಹುಲ್ ಗಾಂಧಿ ಮೇಲೆ ಇಲ್ಲಸಲ್ಲದ ಆರೋಪ ಮಾಡಿ, ಲೋಕಸಭೆ ಸದಸ್ಯತ್ವದಿಂದ ಅನರ್ಹ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ, ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ, ಕಾಶ್ಮೀರದ ವರೆಗೆ ಪಾದಯಾತ್ರೆ ಮಾಡಿದ್ದರು. ಬಿಜೆಪಿ ಹುನ್ನಾರ ಮಾಡಿ ಅವರನ್ನ ಅನರ್ಹಗೊಳಿಸಿದ್ದು, ಖಂಡನಾರ್ಹ. ಅಧಿಕಾರದ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಶರಣಪ್ಪ ಬೆಟಗೇರಿ ಬಿಜೆಪಿ ನಡೆಯನ್ನ ಖಂಡಿಸಿದರು.  
ಪ್ರತಿಭಟನೆಯಲ್ಲಿ, ಮಿಥುನ್ ಪಾಟೀಲ್,  ಶಿವರಾಜ್ ಗೋರ್ಪಡೆ,  ಶರಣಪ್ಪ ಬೆಟಿಗೇರಿ,  ಮುರ್ತುಜಾ ಡಾಲಾಯತ್, ರಾಜು ಸಾಂಗ್ಲೀಕಾರ್, ವೆಂಕಟೇಶ್ ಮುದುಗಲ್, ಶ್ರೀಧರ್ ಬಿದರಳ್ಳಿ,  ಪ್ರಶಾಂತ್ ರಾಠೋಡ್,  ಬಸವರಾಜ್ ಚನ್ನಿ, ಎ ಸಿ ಪಾಟೀಲ್, ಚನ್ನಬಸಪ್ಪ ಹಡಪದ್, ಶರಣಪ್ಪ ಚಳಗೇರಿ, ಶಶಿಧರ್ ಹೂಗಾರ್, ಶಾರದಾ ರಾಥೋಡ್, ಸುಮಂಗಲಾ ಇಟಗಿ ಸೇರಿದಂತೆ ಕಾಂಗ್ರೆಸ್ ಪಾಳಯವೇ ಹಾಜರಿತ್ತು.
Post a Comment

Post a Comment