-->
Bookmark

Gajendragad : ಮಕ್ಕಳಿಗೆ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ಅಗತ್ಯ - ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳ ಅಭಿಮತ


Gajendragad : 

ಮಕ್ಕಳಿಗೆ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ಅಗತ್ಯ -  ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳ ಅಭಿಮತ 

ಕಾಲೇಜು ವಿದ್ಯಾರ್ಥಿಗಳಲ್ಲಿ ಬುದ್ಧಿ ಶಕ್ತಿಗೆ ಕೊರತೆಯಿಲ್ಲ. ಆದರೆ, ಸಂಸ್ಕಾರದ ಹಾಗೂ ಗುಣಾತ್ಮಕ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಮಕ್ಕಳಿಗೆ ಕಲಿಕೆಯ ಹಂತದಲ್ಲೇ ಉತ್ತಮ ಸಂಸ್ಕಾರ ನೀಡಬೇಕು ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.
ಗಜೇಂದ್ರಗಡ ಪಟ್ಟಣದ ಪುರ್ತಗೇರಿ ಕ್ರಾಸ್‌ ಬಳಿ ಇರುವ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ವಿವಿಧ ಸಾಂಘಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಸಾನಿಧಯ ವಹಿಸಿ ಆಶೀರ್ವಚನ ನೀಡಿದರು.

ಮನುಷ್ಯ ಶೈಕ್ಷಣಿಕವಾಗಿ ಎಷ್ಟೇ ಎತ್ತರಕ್ಕೆ ಬೆಳೆದರೂ ಅವನಲ್ಲಿ ಸಂಸ್ಕಾರವಿಲ್ಲದಿದ್ದರೆ ಆ ವ್ಯಕ್ತಿ ಸಮಾಜದ ಅತ್ಯಂತ ಕಟ್ಟಕಡೆಯ ವ್ಯಕ್ತಿಯಾಗಿರುತ್ತಾನೆ. ಅದಕ್ಕಾಗಿ ಅಕ್ಷರದ ಜೊತೆಗೆ ಮಾನವೀಯ ಮೌಲ್ಯಗಳನ್ನು ಒಳಗೊಂಡ ವಿದ್ಯಾರ್ಥಿಯು ಸಮಾಜಕ್ಕೆ ಬೇಕಾಗಿದ್ದಾನೆ ಎಂದರು. ನಮ್ಮ ಮಠದ ಅಂಗ ಸಂಸ್ಥೆಗಳಲ್ಲಿ ಕಲಿಯು ಮಕ್ಕಳು ʼಉತ್ತಮ ಫಲಿತಾಂಶವನ್ನು ದಾಖಲಿಸುವ ಮೂಲಕ ಮಠಕ್ಕೆ ಸಾಧನೆಯ ಕಾಣಿಕೆಯನ್ನುʼ ನೀಡಬೇಕು ಎಂದರು. ಬದುಕಿನ ಸಾವಿರಾರು ಕನಸುಗಳಿಗೆ ಬೆಳಕು ಸಿಗುತ್ತದೆ ಎಂದು ಹಾಲಕೆರೆ ಮಠದ ಕಾಲೇಜುಗಳಿಗೆ ಪಾಲಕರು ತಮ್ಮ ಮಕ್ಕಳನ್ನು ಕಳುಹಿಸುತ್ತಾರೆ ಆದ್ದರಿಂದ ವಿದ್ಯಾರ್ಥಿಗಳು ಇಲ್ಲಿನ ಉಪನ್ಯಾಸಕರ ಮಾರ್ಗದರ್ಶನ ಪಡೆದು ತಮ್ಮ ಜೀವನದ ಗುರಿಯನ್ನು ಸಾಧಿಸಲು ಮುಂದಾಗಬೇಕು ಎಂದರು. 
ವಿಶೇಷ ಉಪನ್ಯಾಸ ನೀಡಿದ ಆಕಾಶವಾಣಿ ಕಲಾವಿದರಾದ ಚಂದ್ರಶೇಖರ ಎಂ. ವಡಿಗೇರಿ, ಮಕ್ಕಳ ಮನಸ್ಸು ಬಿಳಿ ಹಾಳೆ ಇದ್ದಹಾಗೆ ಅದರಲ್ಲಿ ಉಪನ್ಯಾಸಕರು ಏನು ಕಲಿಸುತ್ತಾರೋ ಅದೆ ಮೂಡುತ್ತದೆ, ಕಲಿಸುವ ಮೊದಲು ಯೋಚನೆ ಮಾಡಿ, ಉತ್ತಮ ತಯಾರಿ ನಡೆಸಿ, ಬೋಧನೆ ಮಾಡಿರಿ ಹಾಗೂ ಮಕ್ಕಳಿಗೆ ಪಾಠದ ಜೊತೆಗೆ ಒಳ್ಳೆ ಸಂಸ್ಕಾರ ನೀಡಿ ಉತ್ತಮ ಪ್ರಜೆಗಳನ್ನಾಗಿ  ನಿರ್ಮಾಣ ಮಾಡಿರಿ ಎಂದರು. ಪ್ರತಿ ವಿದ್ಯಾರ್ಥಿಯ ಭವಿಷ್ಯ ಗುರುವಿನ ಕೈಯಲ್ಲಿ ಇರುತ್ತದೆ ಹಾಗಾಗಿ ಶೈಕ್ಷಣಿಕ ಗುರಿ ಸಾಧಿಸಲು ಆಧುನಿಕ ಕಾಲಕ್ಕೆ ತಕ್ಕಂತೆ ಅಪೇಕ್ಷಿತ ಬದಲಾವಣೆ ಮಾಡಿಕೊಂಡು  ವಿವಿಧ ಕಾರ್ಯ ತಂತ್ರಗಳನ್ನು ಅಳವಡಿಸಿಕೊಂಡು ಪಾಠ ಮಾಡಲು ಮುಂದಾಗಬೇಕು ಎಂದರು. ಮಿಮಿಕ್ರಿ ಹಾಗೂ ಹಾಡುಗಳನ್ನು ಹಾಡುವ ಮೂಲಕ ಮಕ್ಕಳಿಗೆ ಉಪನ್ಯಾಸ ನೀಡಿದರು.

ಈ ವೇಳೆ ಕಳೆದ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದೂರದರ್ಶನ ಕಲಾವಿದ ರಾಮಕೃಷ್ಣ ಪೂಜಾರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಪಿಯು ಕಾಲೇಜಿನ ಚೇರಮನ್ನ ವೀರಯ್ಯ ವಿ. ವಸ್ತ್ರದ ಕಾರ್ಯಕ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
 ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಆಡಳಿತಾಧಿಕಾರಿ ಎನ್.‌ ಆರ್.‌ ಗೌಡರ, ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಶೈಕ್ಷಣಿಕ ಮೇಲ್ವಿಚಾರಕ ಶಿವಾನಂದ ಮಠದ, ಆಡಳಿತ ಮಂಡಳಿ ಸದಸ್ಯರಾದ ಮುದಕಪ್ಪ ತೊಂಡಿಹಾಳ, ಪಿ. ಎನ್.‌ ಚವಡಿ, ಎಸ್.‌ ಸಿ. ಚಕ್ಕಡಿಮಠ, ಶರಣಪ್ಪ ಕೆ. ರೇವಡಿ, ಪಿಯು ಪ್ರಾಚಾರ್ಯ ವಸಂತರಾವ್‌ ಗಾರಗಿ, ಐಟಿಐ ಪ್ರಾಚಾರ್ಯ ಎ. ಪಿ. ಗಾಣಗೇರ, ಪದವಿ ಪ್ರಾಚಾರ್ಯ ಬಸಯ್ಯ ಹಿರೇಮಠ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ಕಾಡದ ಇದ್ದರು.
Post a Comment

Post a Comment