-->
Bookmark

Gajendragad : ಶಾಸಕ ಜಿ.ಎಸ್ ಪಾಟೀಲ್ ಅವರಿಗೆ ಅಭಿನಂದನಾ ಸಮಾರಂಭ : ಸಿದ್ದಪ್ಪ ಬಂಡಿ

Gajendragad : 

ಶಾಸಕ ಜಿ.ಎಸ್ ಪಾಟೀಲ್ ಅವರಿಗೆ ಅಭಿನಂದನಾ ಸಮಾರಂಭ : ಸಿದ್ದಪ್ಪ ಬಂಡಿ 
ರೋಣ ವಿಧಾನಸಭಾ ಮತಕ್ಷೇತ್ರದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಭಾಂಧವರಿಂದ ಅಭಿದನಾ ಸಮಾರಂಭ ನಡೆಯಲಿದೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ 
ಸಿದ್ದಪ್ಪ ಬಂಡಿ ಹೇಳಿದರು. ಬಂಡಿ ಗಾರ್ಡನ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ, ಮಾತನಾಡಿದ ಅವರು, ಅಭಿನಂದನಾ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ ಎಂದರು. ಕಾರ್ಯಕ್ರಮದಲ್ಲಿ ಸುಮಾರು ೮ ರಿಂದ ೧೦ ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ೮- ೧೦ ಸಾವಿರ ಜನರಿಗೆ ಭೋಜನ ವ್ಯವಸ್ಥೆಯೂ ಇರಲಿದೆ ಎಂದು ಸಿದ್ದಪ್ಪ ಬಂಡಿ ಮಾಹಿತಿ ನೀಡಿದರು.
ಜೊತೆಗೆ ವೀರಶೈವ ಲಿಂಗಾಯತ ಸಮಾಜದ ಬಾಂಧವರು ಎಲ್ಲ ಹಳ್ಳಿಗಳಲ್ಲೂ ಸಮುದಾಯ ಭವನ‌ ನಿರ್ಮಾಣ ಮಾಡುವ ಭರವಸೆಯಲ್ಲಿದ್ದಾರೆ. ಆದ್ರೆ, ಈ ಸಮಾರಂಭ ಅಭಿನಂದನೆ ಮತ್ತು ಸನ್ಮಾನಕ್ಕೆ  ಸೀಮಿತವಾಗಿರಲಿದೆ ಎಂದು ಸ್ಪಷ್ಟ ಪಡಿಸಿದರು.  

ಇದೇ ೧೬ ರ ಭಾನುವಾರ ಜಿ.ಕೆ ಬಂಡಿ ಗಾರ್ಡನ್ ನಲ್ಲಿ ಶಾಸಕ ಜಿ.ಎಸ್.‌ಪಾಟೀಲ್ ಅವರನ್ನ ಸನ್ಮಾನಿಸಲಾಗುವುದು. ಅಭಿನಂದನಾ ಸಮಾರಂಭದಲ್ಲಿ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು, ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು. 

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ, ಸಿದ್ದಪ್ಪ ಗುರುಶಾಂತಪ್ಪ ಬಂಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಚಂಬಣ್ಣ ನಿಂಗಪ್ಪ ಚವಡಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಸಿದ್ದಪ್ಪ ಬಂಡಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

ಇದೇ ವೇಳೆ, ಭಿತ್ರಿಪತ್ರ ಬಿಡುಗಡೆಗೊಳಿಸಿದರು... 
ಪತ್ರಿಕಾಗೋಷ್ಠಿಯಲ್ಲಿ 
ಸಿದ್ದಪ್ಪ ಬಂಡಿ, ಚಂಬಣ್ಣ ಚವಡಿ, ಮಲ್ಲಿಕಾರ್ಜುನ್ ಹಿರೇಕೊಪ್ಪ, 
ಎಸ್. ಎಂ ಅಗಸಿಬಾಗಿಲ, ಎಸ್. ಜಿ ಕಾಶಪ್ಪನವರ್, ಶಶಿಧರ್ ಸೂಡಿ, ತುಳಸಪ್ಪ ಸುಳ್ಳದ್, ಶರಣಪ್ಪ ದಿಂಡೂರ್, ಮುತ್ತಣ್ಣ ಮ್ಯಾಗೇರಿ, ಬಸವಂತಪ್ಪ ಪಲ್ಲೇದ್, ಕಳಕಪ್ಪ ಸಂಗನಾಳ್, ಪ್ರಭು ಚವಡಿ, ಮಹೇಶ್ ಪಲ್ಲೇದ್, ಕಳಕಪ್ಪ ಅಬ್ಬಿಗೇರಿ, ಕಳಕಪ್ಪ ಪತಂಗರಾಯ, ಅನಿಲ್ ಸಂಗನಾಳ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Post a Comment

Post a Comment