-->
Bookmark

Gajendragad : ಭಾನುವಾರ ದಿ. ಲಕ್ಷ್ಮೀ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ - ವಾರ್ಷಿಕ ಸಭೆ - ಡಾ. ಬಿ. ವಿ‌ ಕಂಬಳ್ಯಾಳ್ ಮಾಹಿತಿ

Gajendragad : 
ಭಾನುವಾರ ದಿ. ಲಕ್ಷ್ಮೀ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ - ಭಾನುವಾರ 110ನೇ ವಾರ್ಷಿಕ ಸಭೆ - ಡಾ. ಬಿ. ವಿ‌ ಕಂಬಳ್ಯಾಳ್ ಮಾಹಿತಿ 

ದಿ. ಲಕ್ಷ್ಮೀ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ 110ನೇ ವಾರ್ಷಿಕ ಸಭೆ ಭಾನುವಾರ ನಡೆಯಲಿದೆ ಎಂದು ಬ್ಯಾಂಕ್ ನಿರ್ದೇಶಕ ಡಾ. ಬಿ.ವಿ ಕಂಬಳ್ಯಾಳ್ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 23ರ ಭಾನುವಾರ ತೋಂಟದಾರ್ಯ ಸಿಬಿಎಸ್‌ಸಿ ಶಾಲೆ ಆವರಣದಲ್ಲಿ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.  ಬ್ಯಾಂಕ್ ಪ್ರಗತಿಯತ್ತ ಸಾಗುತ್ತಿದೆ. ಹೀಗಾಗಿ, ಸಮಾಜ ಸೇವೆ ಕೂಡ ಮಾಡುತ್ತಿದ್ದೇವೆ. ಬ್ಯಾಂಕ್‌ನ ಸದಸ್ಯರ ಮಕ್ಕಳಲ್ಲದೇ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಅಲ್ಲದೇ, ಶಾಲಾ ಕಾಲೇಜಿಗೆ ಪಿಠೋಪಕರಣ ಸೇರಿದಂತೆ ಹಲವು ಪರಿಕರಗಳನ್ನ ನೀಡಿದ್ದೇವೆ ಎಂದರು. ಪ್ರತಿಭಾ ಪುರಸ್ಕಾರಕ್ಕೆ ಈಗಾಗಲೇ, 40 ಜನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದರು. ಪ್ರೋ. ಎಫ್. ಬಿ‌. ಸೋರಟೂರ್ ವಿದ್ಯಾರ್ಥಿಗಳನ್ನುದ್ದೆಶಿಸಿ ಮಾತನಾಡಲಿದ್ದಾರೆ. ಶಿಕ್ಷಕಿ ಶ್ರೀಮತಿ ಎಫ್. ಹೆಚ್ ಡಾಲಾಯತ್ ಉಪಸ್ಥಿತರಿತಲಿದ್ದಾರೆ. 
ಅಲ್ಲದೇ, ಕಾರ್ಯಕ್ರಮವನ್ನ ಯಶಸ್ವಿಗೊಳಿಸಬೇಕೆಂದು ಹೇಳಿದರು. ಗದಗ ಜಿಲ್ಲೆಯಲ್ಲೆ ಕೋ-ಆಪರೇಟಿವ್ ಬ್ಯಾಂಕ್ ಎಟಿಎಂ ಕೂಡ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದರು. 
ಪತ್ರಿಕಾಗೋಷ್ಠಿಯಲ್ಲಿ, ಚೇರ್ಮನ್ ಸುಹಾಸ್ ಕುಮಾರ್ ಪಟ್ಟೇದ್, ವೈಸ್ ಸೇರ್ಮನ್, ಸಿಎ ಸುರೇಶ್ ಚನ್ನಿ, ನಿರ್ದೇಶಕರಾದ ಡಾ. ಬಿ.ವಿ ಕಂಬಳ್ಯಾಳ್, ಪಿಎಸ್ ಕಡ್ಡಿ, ವಿರೇಶ್ ನಂದಿಹಾಳ್, ರಾಮಣ್ಣ ನಿಡಗುಂದಿ, ಶಾಖಾ ವ್ಯವಸ್ಥಾಪಕ ರಾಜಸೇಖರ್ ಹೊಸಂಗಡಿ ಉತಸ್ಥಿತರಿದ್ದರು.  

Post a Comment

Post a Comment