Kalakaleshwara :
ಕಾಲಕಾಲೇಶ್ವರ ಗ್ರಾಮಸ್ಥರಿಂದ ಗಣ್ಯರಿಗೆ ಸನ್ಮಾನ – ಪರಿಸರ ಕಾಳಜಿಗೆ ಆದ್ಯತೆ
ಕಾಲಕಾಲೇಶ್ವರ ಗ್ರಾಮಸ್ಥರಿಂದ ರಾಜೂರು ಗ್ರಾಮ ಪಂಚಾಯತ್‌ಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಶ್ರೀಮತಿ ನಿಂಗಮ್ಮ ಶಂಕ್ರಿ, ಉಪಾಧ್ಯಕ್ಷ ಶರಣಪ್ಪ ಸಜ್ಜನ್, ಗಜೇಂದ್ರಗಡ ಠಾಣೆಯ ನೂತನ ಪಿಎಸ್‌ಐ ಸೋಮನಗೌಡ ಗೌಡ್ರ, ಸೇವಾ ನಿವೃತ್ತಿ ಹೊಂದಿದ ಚಂದ್ರಗೌಡ ಪೊಲೀಸ್ ಪಾಟೀಲ್ ಅವರಿಗೆ ಸನ್ಮಾನಿಸಲಾಯಿತು.
ದಕ್ಷಿಣ ಕಾಶಿ ಕಾಲಕಾಲೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕಾಲಕಾಲೇಶ್ವರ ದೇವಸ್ಥಾನ ಧರ್ಮದರ್ಶಿಗಳಾದ ಮಂಗಳಾದೇವಿ ದೇಶಮುಖ್ ವಹಿಸಿದ್ದರು. ಕಾರ್ಯಕ್ರಮ ಆಯೋಜನೆಯ ಜವಾಬ್ದಾರಿಯನ್ನ ಶಶಿಧರ್ ಹೂಗಾರ್ ವಹಿಸಿದ್ದರು.
ಈ ವೇಳೆ, ಮಾತನಾಡಿದ ಪಿಎಸ್‌ಐ ಸೋಮನಗೌಡ ಗೌಡ್ರ ದೇವಸ್ಥಾನ ವ್ಯಾಪ್ತಿಯಲ್ಲಿ ಯಾವುದೇ ಇಲ್ಲೀಗಲ್ ಆ್ಯಕ್ಟಿವಿಟಿ ಮಾಡಬೇಡಿ ಎಂದು ಯುವಕರಿಗೆ ಕಿವಿಮಾತು ಹೇಳಿದರು. ಅಲ್ಲದೇ, ಎಲ್ಲರೂ ಡ್ರೈವಿಂಗ್ ಲೈಸನ್ಸ್ ಪಡೆಯಿರಿ, ವಿತೌಟ್ ಡ್ರೈವಿಂಗ್ ಲೈಸನ್ಸ್ ವಾಹನ ಚಲಾಯಿಸಬೇಡಿ ಎಂದು ಕಾನೂನು ಸಲಹೆ ನೀಡಿದರು. ಮಲ್ಲಯ್ಯ ಸ್ವಾಮಿ ಆಶಿರ್ವಚನ ನೀಡಿದರು.
ಕಾರ್ಯಕ್ರಮದ ಜವಾಬ್ದಾರಿ ಹೊತ್ತ ಕಾಂಗ್ರೆಸ್ ಶಶಿಧರ್ ಹೂಗಾರ್ ಮಾತನಾಡಿ, ಇಂತಹ ಕಾರ್ಯಕ್ರಮದಿಂದ ಯುವಕರಿಗೆ ಕಾನೂನಿನ ಸಲಹೆಯೂ ನೀಡಿದಂತಾಗುತ್ತದೆ. ಜೊತೆಗೆ ಪರಿಸರ ಕಾಳಜಿ ಒಹಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು. ಸಮಾಜದಲ್ಲಿನ ಎಲ್ಲರನ್ನ ಒಗ್ಗೂಡಿಸಿ, ಜೊತೆಗೆ ಸಮಾಜ ಸೇವೆ ಮಾಡುವ ಶಶಿಧರ್ ಹೂಗಾರ್ ಅವರ ಕಾರ್ಯವನ್ನ ಗ್ರಾಮಸ್ಥರು ಶ್ಲಾಘಿಸಿದರು.
ಇದೇ ವೇಳೆ, ಸನ್ಮಾನಿತ ಗಣ್ಯರು ಸಸಿ ನೆಟ್ಟರು. ಪರಿಸರ ಕಾಳಜಿ ಎಷ್ಟು ವಹಿಸಿದರೂ ಸಾಲದು. ನಾವು ಮುಂದಿನ ಪೀಳಿಗೆಗೆ ವಿನಾಶದ ಅಂಚಿನಿಂದ ಉಳಿಸಲು ಪರಿಸರ ಬೆಳೆಸಬೇಕು ಎಂಬ ಸಂದೇಶ ರವಾನಿಸಿದರು. ಕೇಲವ ಸನ್ಮಾನ ಕಾರ್ಯಕ್ರಮ ವಾಗದೇ, ಪರಿಸರ ಜಾಗೃತಿ ವಹಿಸಿದ್ದು, ಕಾಲಕಾಲೇಶ್ವರ ಗ್ರಾಮಸ್ಥರ ಕಾರ್ಯ ಮೆಚ್ಚುವಂತದ್ದು..!
ಕಾರ್ಯಕ್ರಮದಲ್ಲಿ ಕಾಲಕಾಲೇಶ್ವರ ದೇವಸ್ಥಾನದ ಅರ್ಚಕ ಮಲ್ಲಯ್ಯಸ್ವಾಮಿ ಗುರುಸ್ಥಲಮಠ, ರಾಜೇಂದ್ರಸ್ವಾಮಿ ಹಿರೇಮಠ, ಗ್ರಾಮ ಪಂಚಾಯತ್ ಸದಸ್ಯರಾದ ಮುತ್ತಣ್ಣ ತಳವಾರ, ಆನಂದ್ ಭಾಂಡಗೆ, ಮುದಿಯಪ್ಪ ತಳವಾರ, ಶರಣಪ್ಪ ಕನ್ಯಾಳ, ಶರಣಪ್ಪ ಕೆಂಪನಾಳ, ಪ್ರಭು ಹುಡೇದ, ಶಿವು ರಾಠೋಡ, ಕಳಕಪ್ಪ ಮಾಗಿ, ಹರಿಶ್ ಪಮ್ಮಾರ, ಕೃಷ್ಣ ಅಜಮೀರ, ಶೈಲಜಾ ಚಿಲಝರಿ, ಬಸವರಾಜ ಚಿಲಝರಿ, ದುಗ್ಗಪ್ಪ ಭಜಂತ್ರಿ, ಕಳಕಪ್ಪ ಹೂಗಾರ, ಬಸಣ್ಣ ಹೊಗರಿ, ಆನಂದ್ ಅಜಮೀರ್, ಯಲ್ಲಪ್ಪ ಕೆಂಪನಾಳ, ಕಳಕಪ್ಪ ಚಿಲಝರಿ, ರವಿ ತಳವಾರ, ಗಣೇಶ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
Post a Comment